ಸಾರಾಂಶ
ತುಮಕೂರು: ಇಲ್ಲಿನ ಗೂಳರವಿ ಗ್ರಾಮದ ನಿವಾಸಿಯಾದ ದಯಾನಂದ್ ಅವರ ಮನೆಯ ನೀರಿನ ಚೆಂಬರ್ ಒಳಗೆ ಸುಮಾರು 6 ಅಡಿ ಉದ್ದದ ನಾಗರಹಾವು ಸೇರಿಕೊಂಡಿತ್ತು.ಬೃಹತ್ ಗಾತ್ರದ ನಾಗರಹಾವನ್ನು ಕಂಡು ಭಯಭೀತರಾಗಿದ್ದ ಮನೆಯವರು, ತಕ್ಷಣ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೋ) ಕರೆಮಾಡಿ ತಿಳಿಸಿದರು. ಸಂಸ್ಥೆಯ ಉರಗ ತಜ್ಞ ಮನು ಅಗ್ನಿವಂಶಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಬೃಹತ್ ಗಾತ್ರದ ನಾಗರಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವುಗಳು ಹಾಗೂ ಇತರೆ ವನ್ಯಜೀವಿ ರಕ್ಷಣೆಗೆ ಮಾಡಲು ವಾರ್ಕೋ ಸಂಸ್ಥೆಯ ಸಹಾಯವಾಣಿ 99645 19576 ಕರೆಮಾಡಬಹುದು ಎಂದು ಉರಗ ತಜ್ಞ ಮನು ತಿಳಿಸಿದರು.
ತುಮಕೂರು: ಇಲ್ಲಿನ ಗೂಳರವಿ ಗ್ರಾಮದ ನಿವಾಸಿಯಾದ ದಯಾನಂದ್ ಅವರ ಮನೆಯ ನೀರಿನ ಚೆಂಬರ್ ಒಳಗೆ ಸುಮಾರು 6 ಅಡಿ ಉದ್ದದ ನಾಗರಹಾವು ಸೇರಿಕೊಂಡಿತ್ತು.
ಬೃಹತ್ ಗಾತ್ರದ ನಾಗರಹಾವನ್ನು ಕಂಡು ಭಯಭೀತರಾಗಿದ್ದ ಮನೆಯವರು, ತಕ್ಷಣ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೋ) ಕರೆಮಾಡಿ ತಿಳಿಸಿದರು. ಸಂಸ್ಥೆಯ ಉರಗ ತಜ್ಞ ಮನು ಅಗ್ನಿವಂಶಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಬೃಹತ್ ಗಾತ್ರದ ನಾಗರಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವುಗಳು ಹಾಗೂ ಇತರೆ ವನ್ಯಜೀವಿ ರಕ್ಷಣೆಗೆ ಮಾಡಲು ವಾರ್ಕೋ ಸಂಸ್ಥೆಯ ಸಹಾಯವಾಣಿ 99645 19576 ಕರೆಮಾಡಬಹುದು ಎಂದು ಉರಗ ತಜ್ಞ ಮನು ತಿಳಿಸಿದರು.