ಜಿಲ್ಲೆಯ ಏಳು ತಾಲೂಕು ಪಂಚಾಯಿತಿಯ 47 ಮಹಿಳೆ ಸೇರಿದಂತೆ ಒಟ್ಟು 89 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಅಳ್ನಾವರ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ತಲಾ 7 ಸ್ಥಾನಗಳಿದ್ದು ಈ ಪೈಕಿ ನಾಲ್ಕು ಮಹಿಳೆಯರಿಗೆ ಮೀಸಲಿವೆ.
ಧಾರವಾಡ:
ರಾಜ್ಯ ಸರ್ಕಾರ ತಾಲೂಕು ಪಂಚಾಯ್ತಿಗಳ ಚುನಾವಣೆ ಮಾಡುವ ಭಾಗವಾಗಿ ಸುದೀರ್ಘ ವರ್ಷಗಳ ನಂತರ ರಾಜ್ಯದ ಎಲ್ಲ ತಾಲೂಕು ಪಂಚಾಯ್ತಿ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯು ಬುಧವಾರ ಮೀಸಲಾತಿ ಪ್ರಕಟಿಸಿ ಆದೇಶ ಹೊರಡಿಸಿದೆ.ಜಿಲ್ಲೆಯ ಏಳು ತಾಲೂಕು ಪಂಚಾಯಿತಿಯ 47 ಮಹಿಳೆ ಸೇರಿದಂತೆ ಒಟ್ಟು 89 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಅಳ್ನಾವರ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ತಲಾ 7 ಸ್ಥಾನಗಳಿದ್ದು ಈ ಪೈಕಿ ನಾಲ್ಕು ಮಹಿಳೆಯರಿಗೆ ಮೀಸಲಿವೆ. ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಹಾಗೂ ಹಿಂದುಳಿದ ವರ್ಗ ಅ ವರ್ಗಕ್ಕೆ ತಲಾ ಒಂದೊಂದರಂತೆ ಮೂರು ಮಹಿಳಾ ಮೀಸಲಾತಿ ನೀಡಲಾಗಿದ್ದು, ಉಳಿದಂತೆ ಸಾಮಾನ್ಯ ಕ್ಷೇತ್ರಕ್ಕೆ ನಾಲ್ಕು ಸ್ಥಾನ ನೀಡಲಾಗಿದೆ. ಈ ಪೈಕಿ ಒಂದು ಸ್ಥಾನ ಮಹಿಳೆಗೆ ಮೀಸಲಿರಿಸಲಾಗಿದೆ.
ನವಲಗುಂದ ತಾಲೂಕಿನಲ್ಲಿ 9 ಸ್ಥಾನಗಳಿದ್ದು ಈ ಪೈಕಿ ಐದು ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಅನುಸೂಚಿತ ಜಾತಿ ಹಾಗೂ ಪಂಗಡಕ್ಕೆ ತಲಾ ಒಂದು ಮಹಿಳಾ ಮೀಸಲಾತಿ ನೀಡಲಾಗಿದೆ. ಹಿಂದುಳಿದ ವರ್ಗಕ್ಕೆ ಎರಡು ಸ್ಥಾನ ನೀಡಿದ್ದು ಈ ಪೈಕಿ ಒಂದು ಮಹಿಳೆ, ಉಳಿದಂತೆ ಸಾಮಾನ್ಯ ಕ್ಷೇತ್ರಕ್ಕೆ ಐದು ಸ್ಥಾನಗಳಿದ್ದು ಈ ಪೈಕಿ ಎರಡು ಮಹಿಳಾ ಮೀಸಲಾತಿ ಇದೆ.ಕಲಘಟಗಿ ತಾಲೂಕಿನಲ್ಲಿ 14 ತಾಪಂ ಕ್ಷೇತ್ರಗಳಿದ್ದು, ಈ ಪೈಕಿ ಏಳು ಮಹಿಳಾ ಮೀಸಲಾತಿ ಇದೆ. ಎರಡು ಅನುಸೂಚಿತ ಜಾತಿ ಸ್ಥಾನಗಳ ಪೈಕಿ ಒಂದು ಪುರುಷ, ಮತ್ತೊಂದು ಮಹಿಳೆ, ಅನುಸೂಚಿತ ಪಂಗಡದಲ್ಲಿ ಒಂದು ಮಹಿಳೆ, ಹಿಂದುಗಳಿದ ವರ್ಗ ಅ ಜಾತಿಗೆ ಮೂರು ಸ್ಥಾನಗಳಿವೆ. ಈ ಪೈಕಿ ಎರಡು ಮಹಿಳೆಯರಿಗೆ ಮೀಸಲು. ಹಾಗೆಯೇ, ಹಿಂದುಳಿದ ಬ ವರ್ಗಕ್ಕೆ ಒಂದು ಪುರುಷ ಮೀಸಲಿದೆ. ಇನ್ನು, ಏಳು ಸಾಮಾನ್ಯ ವರ್ಗಕ್ಕೆ ಸ್ಥಾನಗಳಿದ್ದು ಈ ಪೈಕಿ ಮೂರು ಮಹಿಳೆಯರಿಗೆ ಮೀಸಲು ಇದೆ.
ಹುಬ್ಬಳ್ಳಿ ಹಾಗೂ ಕುಂದಗೋಳ ತಾಪಂನಲ್ಲಿ ತಲಾ 15 ಸ್ಥಾನಗಳಿದ್ದು ಈ ಪೈಕಿ ಎಂಟು ಮಹಿಳೆಯರಿಗೆ ಮೀಸಲು ಇಡಲಾಗಿದೆ. ಅನುಸೂಚಿತ ಜಾತಿ ಹಾಗೂ ಪಂಗಡಕ್ಕೆ ತಲಾ ಒಂದೊಂದು ಮಹಿಳಾ ಮೀಸಲಾತಿ ಇದೆ. ಹಿಂದುಳಿದ ಅ ವರ್ಗಕ್ಕೆ ನಾಲ್ಕು ಸ್ಥಾನ ನೀಡಿದ್ದು ಈ ಪೈಕಿ ಎರಡು ಮಹಿಳೆ, ಹಿಂದುಳಿದ ಬ ವರ್ಗಕ್ಕೆ ಇರುವ ಒಂದು ಸ್ಥಾನ ಮಹಿಳೆಗೆ ನೀಡಲಾಗಿದೆ. ಹಾಗೆಯೇ, ಒಟ್ಟು ಎಂಟು ಸ್ಥಾನಗಳನ್ನು ಸಾಮಾನ್ಯಕ್ಕೆ ನೀಡಿದ್ದು ಈ ಪೈಕಿ ಮೂರು ಸ್ಥಾನಗಳನ್ನು ಮಹಿಳೆಗೆ ಮೀಸಲಿಡಲಾಗಿದೆ.ಇನ್ನು, ಕೊನೆಯದಾಗಿ ಧಾರವಾಡ ತಾಪಂನಲ್ಲಿ ಅತೀ ಹೆಚ್ಚು 22 ಕ್ಷೇತ್ರಗಳಿದ್ದು ಈ ಪೈಕಿ 11 ಶೇ.50ರಷ್ಟು ಮೀಸಲಾತಿ ಮಹಿಳೆಗೆ ನೀಡಲಾಗಿದೆ. ಅನುಸೂಚಿತ ಜಾತಿಯಲ್ಲಿ ಒಂದು ಪುರುಷ, ಮತ್ತೊಂದು ಮಹಿಳೆಗಿದೆ. ಅನುಸೂಚಿತ ಪಂಗಡಕ್ಕೆ ಇರುವ ಒಂದು ಸ್ಥಾನ ಮಹಿಳೆಗೆ ಮೀಸಲಿದೆ. ಹಿಂದುಳಿದ ಅ ವರ್ಗಕ್ಕೆ ಆರು ಸ್ಥಾನಗಳ ಪೈಕಿ ಮೂರು ಮಹಿಳೆಗೆ ನೀಡಲಾಗಿದೆ. ಹಿಂದುಳಿದ ಬ ವರ್ಗಕ್ಕಿರುವ ಒಂದು ಸ್ಥಾನ ಮಹಿಳೆಗಿದೆ.
ಜಿಪಂಗೂ ಮೀಸಲಾತಿ ಆದೇಶಜಿಲ್ಲೆಯಲ್ಲಿ ಒಟ್ಟು 28 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದು ಈ ಪೈಕಿ 14 ಕ್ಷೇತ್ರಗಳಿಗೆ ಪುರುಷ, 14 ಕ್ಷೇತ್ರಗಳಿಗೆ ಮಹಿಳಾ ಮೀಸಲಾತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಅನುಸೂಚಿತ ಜಾತಿಗೆ 3 (2 ಮಹಿಳೆ), ಅನುಸೂಚಿತ ಪಂಗಡಕ್ಕೆ 2 (1 ಮಹಿಳೆ), ಹಿಂದುಳಿದ ಅ ವರ್ಗ 7 (4 ಮಹಿಳೆ), ಹಿಂದುಳಿದ ಬ ವರ್ಗ 2 (1 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 14 (6 ಮಹಿಳೆ) ಮೀಸಲಾತಿ ನಿಗದಿ ಮಾಡಲಾಗಿದೆ.