ಧರ್ಮ ಆಧಾರಿತ ಮೀಸಲು ದೇಶ ಒಡೆಯಲು ಕಾರಣ: ಪ್ರತಾಪಸಿಂಹ ನಾಯಕ್

| Published : Mar 26 2025, 01:34 AM IST

ಧರ್ಮ ಆಧಾರಿತ ಮೀಸಲು ದೇಶ ಒಡೆಯಲು ಕಾರಣ: ಪ್ರತಾಪಸಿಂಹ ನಾಯಕ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಶೇ. 4 ರಷ್ಟು ಮೀಸಲಾತಿ ನೀಡಿರುವುದನ್ನು ಬಿಜೆಪಿ ಖಡಾಖಂಡಿತವಾಗಿ ವಿರೋಧಿಸುತ್ತದೆಯಲ್ಲದೆ, ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಧರ್ಮದ ಆಧಾರದಲ್ಲಿ ಮೀಸಲಾತಿಯು ದೇಶ ಒಡೆಯಲು ಕಾರಣವಾಗಲಿದೆ. ಸರ್ಕಾರಿ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಶೇ. 4 ರಷ್ಟು ಮೀಸಲಾತಿ ನೀಡಿರುವುದನ್ನು ಬಿಜೆಪಿ ಖಡಾಖಂಡಿತವಾಗಿ ವಿರೋಧಿಸುತ್ತದೆಯಲ್ಲದೆ, ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸರ್ಕಾರ ಒಂದು ಲಕ್ಷದ ಆರು ಸಾವಿರ ಕೋಟಿ ರು. ಸಾಲ ತೆಗೆದುಕೊಳ್ಳುವಂತಹ ಅನಿವಾರ್ಯತೆಗೆ ಬಂದಿದೆ. ಬಿಜೆಪಿ ಸರ್ಕಾರ ಬಿಟ್ಟು ಹೋಗುವಾಗ ಮಿಗತೆ ಬಜೆಟ್ ಇತ್ತು. ಸಿದ್ಧರಾಮಯ್ಯ ಅವರ ಮೂರು ಬಜೆಟ್ ಗಳು ಕೊರತೆಯದ್ದೇ ಆಗಿವೆ. ಬದ್ಧತಾ ಖರ್ಚು ಬಿಜೆಪಿ ಸರ್ಕಾರ ಇರುವಾಗ 1ಲಕ್ಷದ 5 ಸಾವಿರದ 521 ಕೋಟಿ ಇತ್ತು. ಸಿದ್ದರಾಮಯ್ಯನವರ ಲೆಕ್ಕದಲ್ಲಿ 2ಲಕ್ಷದ 31 ಸಾವಿರದ 879 ಕೋಟಿ ರು.ಗಳೂ ಬದ್ಧತಾ ವೆಚ್ಚಕ್ಕೇ ಹೋಗಿದೆ ಎಂದು ಆರೋಪಿಸಿದರು.

ವಾರ್ಷಿಕ ಸಾಲ ಬಿಜೆಪಿ ಇರುವಾಗ 22-23 ರಲ್ಲಿ 44 ಸಾವಿರದ 549 ಕೋಟಿ ಇದ್ದರೆ. ಈ ವರ್ಷ 1 ಲಕ್ಷದ 16 ಸಾವಿರ ಕೋಟಿ ರೂ. ಸಾಲವನ್ನು ಸರ್ಕಾರ ತೆಗೆದುಕೊಳ್ಳುವಂತಹ ಪರಿಸ್ಥಿತಿ ಇದೆ. ಇದೇ ಪ್ರಮಾಣದಲ್ಲಿ ಹೋದರೆ 16 ಬಜೆಟ್ ಗಳನ್ನು ಮಂಡಿಸಿದ ಖ್ಯಾತಿಯ ಸಿದ್ದರಾಮಯ್ಯ 5 ವರ್ಷದ ಅವಧಿಯೊಳಗೆ ಕರ್ನಾಟಕದ ಸಾಲ 10 ಲಕ್ಷ ಕೋಟಿ ಗೆ ತಂದು ನಿಲ್ಲಿಸಲಿದ್ದಾರೆ. ಈಗಿನ ಸರ್ಕಾರದಲ್ಲಿ ಒಬ್ಬ ವ್ಯಕ್ತಿಯ ಹುಟ್ಟುವ ಮಗುವಿನ ಮೇಲೆ 1 ಲಕ್ಷ ಸಾಲ ಇಟ್ಟುಕೊಂಡೇ ಹುಟ್ಟುತ್ತದೆ. ಎಂದರು.

ಗ್ಯಾರಂಟಿಗಳಿಂದಾಗಿ ದುಡ್ಡು ಹೊಂದಿಸುಲು ಹೋಗಿ ಎಲ್ಲಾ ಇಲಾಖೆಗಳೂ ಸೊರಗಿ ಹೋಗುವಂತಾಗಿವೆ. ಅಭಿವೃದ್ಧಿಗೆ ಅದರ ಚಟುವಟಿಕೆಗಳಿಗೆ ದುಡ್ಡಿಲ್ಲದಾಗಿದೆ. ಗುರುನಾರಾಯಣ ನಿಗಮದ ಬಗ್ಗೆ ಕಾಂಗ್ರೆಸ್‌ನವರು ಭಾರಿ ಅಪಪ್ರಚಾರ ನಡೆಸಿದ್ದರು. ಆದರೆ ಈ ಸರ್ಕಾರ ಈ ವರ್ಷ ಅದಕ್ಕೆ ಕೇವಲ 1 ಲಕ್ಷ ಮಾತ್ರ ಇಟ್ಟಿರುವುದನ್ನು ಕಾಂಗ್ರೆಸ್‌ನವರು ಮಾತನಾಡುವುದೇ ಇಲ್ಲ ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೋರ್ಟಿನ ತೀರ್ಪು ಏನೇ ಬರಲಿ ನಾವು ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವ ಮೂಲಕ ತಮ್ಮ ಮಾನಸಿಕತೆ ತೋರಿಸಿದ್ದಾರೆ. ಈ ಬಾರಿ ಬಜೆಟ್ ನ್ನು ಹಿಡಿದುಕೊಂಡು ಬಂದವರು ಜಮೀರ್ ಅಹ್ಮದ್ ಹೀಗಾಗಿ ಇದು ಹಲಾಲ್ ಬಜೆಟ್ ಅಲ್ಲದೆ ಇನ್ನೇನು. ಕೇವಲ ಹಲಾಲ್ ಮಾತ್ರವಲ್ಲದೆ ದಲಾಲ್ ಕೂಡಾ ಆಗಿದೆ ಎಂದು ಲೇವಡಿ ಮಾಡಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೆಳಾಲ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಗಣೇಶ್ ನಾವೂರು, ಚೆನ್ನಕೇಶವ ಇದ್ದರು.