20 ಶಾಸಕರ ಮನೆಯಲ್ಲಿ ಮೀಸಲಾತಿ ಹೋರಾಟ

| Published : Jun 17 2024, 01:34 AM IST / Updated: Jun 17 2024, 01:22 PM IST

ಸಾರಾಂಶ

 ಈಗ ಚುನಾವಣೆ ಮುಗಿದಿದೆ, ಮತ್ತೆ ನಮ್ಮ ಹೋರಾಟವನ್ನು ಪ್ರಾರಂಭಿಸಲಾಗುವುದು. ಮುಂದಿನ ಹೋರಾಟದ ಕುರಿತು ಉಳವಿ ಕ್ಷೇತ್ರದಲ್ಲಿ ಎರಡು ದಿನಗಳ ಸಂಕಲ್ಪ ಸಭೆ ಮಾಡಿ ಯೋಜನೆ ರೂಪಿಸಿದ್ದೇವೆ. ನಮ್ಮ ಸಮುದಾಯದ 20 ಜನ ಶಾಸಕರ ಮನೆಯಲ್ಲಿ ಮೀಸಲಾತಿ ಹೋರಾಟ ಮಾಡುತ್ತೇವೆ. ನಂತರ ಅವರು ವಿಧಾನಸಭೆಯಲ್ಲಿ ಮಾತನಾಡಬೇಕು.

 ಅಥಣಿ :  ಈಗ ಚುನಾವಣೆ ಮುಗಿದಿದೆ, ಮತ್ತೆ ನಮ್ಮ ಹೋರಾಟವನ್ನು ಪ್ರಾರಂಭಿಸಲಾಗುವುದು. ಮುಂದಿನ ಹೋರಾಟದ ಕುರಿತು ಉಳವಿ ಕ್ಷೇತ್ರದಲ್ಲಿ ಎರಡು ದಿನಗಳ ಸಂಕಲ್ಪ ಸಭೆ ಮಾಡಿ ಯೋಜನೆ ರೂಪಿಸಿದ್ದೇವೆ. 

ನಮ್ಮ ಸಮುದಾಯದ 20 ಜನ ಶಾಸಕರ ಮನೆಯಲ್ಲಿ ಮೀಸಲಾತಿ ಹೋರಾಟ ಮಾಡುತ್ತೇವೆ. ನಂತರ ಅವರು ವಿಧಾನಸಭೆಯಲ್ಲಿ ಮಾತನಾಡಬೇಕು. ಅಲ್ಲಿಗೂ ಸರ್ಕಾರ ಸ್ಪಂದನೆ ಮಾಡದೇ ಹೋದರೆ, ಡಿಸೆಂಬ‌ರ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ಮುತ್ತಿಗೆ ಹಾಕುವ ಆಲೋಚನೆ ಮಾಡಲಾಗಿದೆ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜ ಸ್ವಾಮೀಜಿ ಹೇಳಿದ್ದಾರೆ.ಅವರು ಭಾನುವಾರ ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷವಾಗಿದೆ. ಮೀಸಲಾತಿ ವಿಚಾರದಲ್ಲಿ ಯಾವುದೇ ಸಹಕಾರ ಕೊಟ್ಟಿಲ್ಲ. ಇದರಿಂದ ನಮಗೂ ಕೂಡ ನೋವಿದೆ. ಬಿಜೆಪಿ ಅವಧಿಯಲ್ಲಿ ಯಡಿಯೂರಪ್ಪನವರು ಮಾತು ತಪ್ಪಿದ್ದರಿಂದ ಪಾದಯಾತ್ರೆ ಮಾಡಬೇಕಾಯಿತು. ಮೀಸಲಾತಿ ಪಡೆಯುವುದಕ್ಕೆ ಈ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಸ್ವಾಮೀಜಿ ಹೇಳಿದರು.

ಬದುಕು ಬರಹ ಒಂದೇಯಾಗಿರಲಿ:

ಕಲಾವಿದರು ಬದುಕು ಮತ್ತು ಬರಹ ಒಂದೇ ಆಗಿರಬೇಕು. ಪರದೆ ಮೇಲೆ ನಟಿಸುವಂತ ನಟನೆಗೂ ಬದುಕಿಗೂ ಸಾಮೀಪ್ಯವಾಗುವಂತೆ ಬದುಕುವ ಪ್ರಯತ್ನ ಮಾಡಬೇಕು. ಪರದೆ ಮೇಲೆ ಒಂದು ನಟನೆ, ಪರದೆ ಹಿಂಭಾಗ ಒಂದು ನಟನೆ ಮಾಡಿದಾಗ ಇಂತಹ ಅವಘಡ ಆಗುತ್ತವೆ ಎಂದು ನಟ ದರ್ಶನ್ ಮತ್ತು ಅವರ ಸಹಚರರ ಮೇಲಿರುವ ಕೊಲೆ ಆರೋಪದ ಕುರಿತು ಸ್ವಾಮೀಜಿ ಪ್ರತಿಕ್ರಿಯಿಸಿದರು.

ನಾವು ನಟ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಅವರಂತ ನಟರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು. ಸದ್ಯಕ್ಕೆ ನಡೆಯುತ್ತಿರುವ ಇಂತಹ ಅವಘಡಗಳಿಗೆ ಅವಕಾಶ ಕೊಡದೆ ನಟರು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಯಾವುದೇ ವ್ಯಕ್ತಿ ತಪ್ಪು ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.