ಚಿಕ್ಕಶಕುನ-ಶೀಗೇಹಳ್ಳಿ ಗೋಮಾಳ ಜಾಗ ಜಾನುವಾರಿಗೆ ಮೀಸಲಿಡಿ: ಕೆರಿಯಪ್ಪ

| Published : Aug 31 2025, 01:08 AM IST

ಚಿಕ್ಕಶಕುನ-ಶೀಗೇಹಳ್ಳಿ ಗೋಮಾಳ ಜಾಗ ಜಾನುವಾರಿಗೆ ಮೀಸಲಿಡಿ: ಕೆರಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪುರಸಭಾ ವ್ಯಾಪ್ತಿಗೆ ಬರುವ ಅವಳಿ ಗ್ರಾಮಗಳಾದ ಶೀಗೇಹಳ್ಳಿ ಮತ್ತು ಚಿಕ್ಕಶಕುನ ಗ್ರಾಮಗಳು ಪಟ್ಟಣದಿಂದ ೩ ಕಿ.ಮೀ. ದೂರದಲ್ಲಿವೆ. ಚಿಕ್ಕಶಕುನ ಗ್ರಾಮದ ಸರ್ವೆ ನಂ.೩೨ರಲ್ಲಿ ೮೮ ಎಕರೆ ೩೨ ಗುಂಟೆ ಜಮೀನು ಗೋಮಾಳ ಜಮೀನಾಗಿದೆ. ಸರ್ಕಾರ ಇದನ್ನು ಇತರ ಕೆಲಸಗಳಿಗೆ ಬಳಸದೆ ಜಾನವಾರಿಗೆ ಮೀಡಲಿಡಬೇಕು ಎಂದು ಶೀಗೇಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಕೆರಿಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಸೊರಬ ಪುರಸಭಾ ವ್ಯಾಪ್ತಿಗೆ ಬರುವ ಅವಳಿ ಗ್ರಾಮಗಳಾದ ಶೀಗೇಹಳ್ಳಿ ಮತ್ತು ಚಿಕ್ಕಶಕುನ ಗ್ರಾಮಗಳು ಪಟ್ಟಣದಿಂದ ೩ ಕಿ.ಮೀ. ದೂರದಲ್ಲಿವೆ. ಚಿಕ್ಕಶಕುನ ಗ್ರಾಮದ ಸರ್ವೆ ನಂ.೩೨ರಲ್ಲಿ ೮೮ ಎಕರೆ ೩೨ ಗುಂಟೆ ಜಮೀನು ಗೋಮಾಳ ಜಮೀನಾಗಿದೆ. ಸರ್ಕಾರ ಇದನ್ನು ಇತರ ಕೆಲಸಗಳಿಗೆ ಬಳಸದೆ ಜಾನವಾರಿಗೆ ಮೀಡಲಿಡಬೇಕು ಎಂದು ಶೀಗೇಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಕೆರಿಯಪ್ಪ ಹೇಳಿದರು.

ತಾಲೂಕಿನ ಚಿಕ್ಕಶಕುನ ಮತ್ತು ಶೀಗೇಹಳ್ಳಿ ಗ್ರಾಮದ ಗೋಮಾಳ ಜಮೀನನ್ನು ಸರ್ಕಾರ ಕೆಎಸ್‌ಆರ್‌ಟಿಸಿ ಡಿಪೋ, ಐಟಿಐ ಕಾಲೇಜು ಮತ್ತು ಮೌಲಾನಾ ಅಜಾದ್ ವಸತಿ ಶಾಲೆಗಳಿಗೆ ಮಂಜೂರು ಮಾಡಿರುವ ಕ್ರಮವನ್ನು ವಿರೋಧಿಸಿ ಚಿಕ್ಕಶಕುನ ಮತ್ತು ಶೀಗೇಹಳ್ಳಿ ಗ್ರಾಮಸ್ಥರು ಪಟ್ಟಣದಲ್ಲಿ ನಡೆಸಿದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.

ಸೊರಬ ಪುರಸಭಾ ವ್ಯಾಪ್ತಿಗೆ ಬರುವ ಅವಳಿ ಗ್ರಾಮಗಳಾದ ಶೀಗೇಹಳ್ಳಿ ಮತ್ತು ಚಿಕ್ಕಶಕುನ ಗ್ರಾಮಗಳು ಪಟ್ಟಣದಿಂದ ೩ ಕಿ.ಮೀ. ದೂರದಲ್ಲಿವೆ. ಇದರಲ್ಲಿ ಅವಳಿ ಗ್ರಾಮಗಳ ಗ್ರಾಮಸ್ಥರು ಹಲವಾರು ವರ್ಷಗಳಿಂದ ಜಾನುವಾರುಗಳನ್ನು ಮೇಯಲು ಬಳಸುತ್ತಿದ್ದಾರೆ. ಹೀಗಿದ್ದೂ ಕೂಡಾ ಸರ್ಕಾರ ಗೋಮಾಳ ಜಾಗದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ, ಐಟಿಐ ಕಾಲೇಜು ಮತ್ತು ಮೌಲಾನಾ ಅಜಾದ್ ಶಾಲೆಗಳಿಗೆ ಮಂಜೂರು ಮಾಡಿದೆ. ಇದರಿಂದ ಗ್ರಾಮದ ಜಾನುವಾರುಗಳಿಗೆ ಮೇಯಲು ಜಮೀನು ಇಲ್ಲದಂತಾಗಿದ್ದು, ಕೆಲವು ರಾಜಕಾರಣಿಗಳ ಹಿತಾಸಕ್ತಿಯಿಂದ ತಾಲೂಕಿನ ಅಧಿಕಾರಿಗಳು ಚಿಕ್ಕಶಕುನ ಗೋಮಾಳಕ್ಕೆ ಕೈ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದಿನ ಶಾಸಕ ಕುಮಾರ ಬಂಗಾರಪ್ಪ ಕೆಎಸ್‌ಆರ್‌ಟಿಸಿ ಡಿಪೋ, ಐಟಿಐ ಕಾಲೇಜು ಮತ್ತು ಮೌಲಾನಾ ಅಜಾದ್ ವಸತಿ ಶಾಲೆಗಳಿಗೆ ಸೊರಬ ಪಟ್ಟಣದ ಸರ್ವೆ ನಂ.೧೧೨ರಲ್ಲಿ ಸುಮಾರು ೧೫ ಎಕರೆ ಜಾಗ ಗುರುತು ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದರು.

ಚಿಕ್ಕಶಕುನ ಗ್ರಾಮ ಸಮಿತಿ ಅಧ್ಯಕ್ಷ ಬಿ.ವೀರಭದ್ರಪ್ಪ ಮಾತನಾಡಿ, ಚಿಕ್ಕಶಕುನ ಗ್ರಾಮದ ಗೋಮಾಳ ಜಾಗವನ್ನು ವಿವಿಧ ಸರ್ಕಾರಿ ಕಟ್ಟಡಗಳಿಗೆ ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಈಗಾಗಲೇ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಡಬ್ಲ್ಯುಪಿ ೧೨೬೧/೨೦೨೫ರಂತೆ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಪ್ರಕರಣ ವಿಚಾರಣಾ ಹಂತದಲ್ಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗೋಮಾಳ ಅಳತೆ ಮಾಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ನಂತರ ಶೀಗೇಹಳಿ ಮತ್ತು ಚಿಕ್ಕಶಕುನ ಗ್ರಾಮಸ್ಥರು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮ ಸಮಿತಿ ಸದಸ್ಯರಾದ ಪರಸಪ್ಪ, ವಿಶ್ವನಾಥ್, ವೈ.ಜಿ.ಗುರುಮೂರ್ತಿ, ನಾಗರಾಜ್, ಸಣ್ಣಪ್ಪ, ಮೈಲನ್ ರಾಜಪ್ಪ, ಶೇಖರಪ್ಪ, ಹೇಮಚಂದ್ರ, ಎಚ್.ರಾಘವೇಂದ್ರ, ಎಂ.ಕುಮಾರ್, ಡಿ. ಕೃಷ್ಣಪ್ಪ, ಗೋಪಾಲ, ಡಿ.ಲಕ್ಷ್ಮಣಪ್ಪ, ಲಿಂಗರಾಜ, ರೇವಣಪ್ಪ, ವಿಜೇಂದ್ರ, ಕೆ. ಬಂಗಾರಪ್ಪ, ರೇಖಾ, ರತ್ನಮ್ಮ ಇತರರು ಇದ್ದರು.