ಸಾರಾಂಶ
ಚನ್ನಪಟ್ಟಣ: ತಾಲೂಕಿನ ನೀಲಸಂದ್ರ ಗ್ರಾಮದ ಪುರಾಣ ಪ್ರಸಿದ್ಧ ಭೈರವೇಶ್ವರ ಜಾತ್ರಾ ಮಹೋತ್ಸವ, ಹೂ ಹೊಂಬಾಳೆ ಹಾಗೂ ಮೀಸಲು ಸೇವೆಯ ಕಾರ್ಯಕ್ರಮ ವಿಜೃಂಭಣೆಯಿಂದ ನೇರವೇರಿತು.
ಚನ್ನಪಟ್ಟಣ: ತಾಲೂಕಿನ ನೀಲಸಂದ್ರ ಗ್ರಾಮದ ಪುರಾಣ ಪ್ರಸಿದ್ಧ ಭೈರವೇಶ್ವರ ಜಾತ್ರಾ ಮಹೋತ್ಸವ, ಹೂ ಹೊಂಬಾಳೆ ಹಾಗೂ ಮೀಸಲು ಸೇವೆಯ ಕಾರ್ಯಕ್ರಮ ವಿಜೃಂಭಣೆಯಿಂದ ನೇರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ದೊಡ್ಡ ಪೂಜೆ, ಕಂಬದ ಕುಣಿತ ಹಾಗೂ ವಾಹನಗಳ ಜೊತೆಗೂಡಿ ತಗಚಗೆರೆ ಮಾರಮ್ಮ, ನೀಲಸಂದ್ರ ಮಾಯಮ್ಮ, ಕಾರೇಕಟ್ಟೆ ಹುಚ್ಚಪ್ಪ ಹಾಗೂ ಕೊತ್ತತ್ತಿ ಬೀರೇಶ್ವರ ದೇವರ ಹೂ ಹೊಂಬಾಳೆ ಉತ್ಸವ, ಮುಡಿ ಮತ್ತು ಬಾಯಿಬೀಗ, ವಾಹನೋತ್ಸವ ಅದ್ಧೂರಿಯಾಗಿ ನೆರವೇರಿತು. ಗುರುವಾರ ಸಂಜೆ ದೇವರ ಉತ್ಸವ ಲಿಂಗರಕಾಸೆ ಉತ್ಸವ ನಡೆಯಿತು. ಏ.೧೯ರಂದು ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆ ಪಾನಕ ಬಂಡಿ, ಜೋಗಿಗಳ ಕುಣಿತ, ದೇವರ ಉತ್ಸವ, ಮೆರವಣಿಗೆ ನಡೆಯಲಿದೆ.ವಿಶೇಷವಾದ ಮೀಸಲು ಊಟ ಪದ್ದತಿ:
ಇಲ್ಲಿನ ಜಾತ್ರಾ ಮಹೋತ್ಸವದಲ್ಲಿ ಮೀಸಲು ಊಟ ವಿಶೇಷವಾಗಿದೆ. ದೇವರ ಒಕ್ಕಲು ಕುಲದವರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ದೇವಾಲಯದ ಆವರಣದಲ್ಲಿ ಒಲೆ ಇಟ್ಟು, ಅಡುಗೆ ತಯಾರಿಸಿ ನೆಂಟರಿಷ್ಟರಿಗೆ ಬಡಿಸುವುದು ಇಲ್ಲಿನ ವಿಶೇಷ. ಅವರೇಕಾಳು ಸಾರು, ಮುದ್ದೆ, ಅನ್ನ ಹಾಗೂ ಪಾಯಸ ತಯಾರಿಸಿ ದೇವಾಲಯದ ಆವರಣದಲ್ಲಿ ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಮೀಸಲು ಊಟ ಸವಿಯುತ್ತಾರೆ. ಇಂದಿಗೂ ಕೆಲವರು ಮಣ್ಣಿನ ಮಡಿಕೆಯಲ್ಲಿ ಊಟ ತಯಾರಿಸುವುದು ಇಲ್ಲಿನ ವಿಶೇಷವಾಗಿದೆ. ಪೋಟೊ೧೮ಸಿಪಿಟಿ೧:ಚನ್ನಪಟ್ಟಣ ತಾಲೂಕಿನ ನೀಲಸಂದ್ರ ಗ್ರಾಮದ ಭೈರವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಮೀಸಲು ಬುಟ್ಟಿ ತರುತ್ತಿರುವ ಮಹಿಳೆಯರು.