ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಇದೇ ಫೆ.18ರಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ನೀಡಲಾಗುವ ತರಬೇತಿಗೆ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಎಲ್ಲಾ ಸಿದ್ಧತೆ ಮಾಡಿಕೊಂಡು ಪರೀಕ್ಷೆಗಳು ಸುವ್ಯವಸ್ಥಿತವಾಗಿ, ಶಾಂತಿಯುತವಾಗಿ ಜರುಗುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ನೀಡಲಾಗುವ ತರಬೇತಿಗೆ ಪ್ರವೇಶ ಪರೀಕ್ಷೆಯ ಪೂರ್ವಸಿದ್ಧತಾ ಸಭೆ ನಡೆಸಿ ಅವರು ಮಾತನಾಡಿದರು.
ಫೆ.18ರಂದು ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯು ಒಟ್ಟು 21 ಕೇಂದ್ರಗಳಲ್ಲಿ ನಡೆಯಲಿದ್ದು ಒಟ್ಟು 7455 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ನೀಡಲಾಗುವ ತರಬೇತಿಗೆ ಪ್ರವೇಶ ಪರೀಕ್ಷೆಯು ಯಾದಗಿರಿ ನಗರದ 5 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು ಒಟ್ಟು 2363 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.6ನೇ ತರಗತಿ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯು ಗುರುಮಠಕಲ್ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಹುಣಸಗಿ ತಾಲೂಕಿನ ಪದವಿ ಪೂರ್ವ ಕಾಲೇಜು ಮತ್ತು ಬಾಲಕರ ಪ್ರೌಢಶಾಲಾ ವಿಭಾಗ, ಎಸ್.ಕೆ. ಸ್ವತಂತ್ರ ಪ.ಪೂ.ಕಾಲೇಜು, ಸಾಯಿ ವಿಜ್ಞಾನ ಆಂಗ್ಲ ಮಾಧ್ಯಮ ಪ್ರೌಢಶಾಲಾ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸರಕಾರಿ ಬಾಲಕೀಯರ ಪ್ರೌಢಶಾಲೆ, ಸರಕಾರಿ ಪ್ರೌಢಶಾಲೆ ಆದರ್ಶ ವಿದ್ಯಾಲಯ ವಜ್ಜಲ್, ಶಹಾಪುರ ತಾಲೂಕಿನ ಬಾಲಕಿಯರ ಮತ್ತು ಬಾಲಕರ ಸ.ಪ.ಪೂ. ಕಾಲೇಜು, ಸಂಗಮ್ಮ ಬಾಪೂಗೌಡ ದರ್ಶನಾಪೂರ ಪ.ಪೂ. ಕಾಲೇಜು, ಚರಬಸವೇಶ್ವರ ಮಹಿಳಾ ಪ.ಪೂ. ಕಾಲೇಜು, ರಂಗಪೇಟೆಯ ಸ.ಪ.ಪೂ. ಮತ್ತು ಅಂಬೇಡ್ಕರ್ ಪ.ಪೂ. ಕಾಲೇಜು, ಸುರಪುರ ಸ.ಪ.ಪೂ. ಮತ್ತು ಪ್ರಭು ಪ.ಪೂ. ಕಾಲೇಜು ಹಾಗೂ ಶರಣಬಸವ ಪ.ಪೂ. ಕಾಲೇಜು, ವಡಿಗೇರಾ ಸರಕಾರಿ ಪ್ರೌಢಶಾಲೆ ಮತ್ತು ಡಿಡಿಯು ಪ.ಪೂ. ಕಾಲೇಜು, ಯಾದಗಿರಿಯ ಸರ್ಕಾರಿ ಪ.ಪೂ. ಕಾಲೇಜು ಮತ್ತು ಜವಾಹರ ಪ.ಪೂ. ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ ಎಂದರು.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ನೀಡಲಾಗುವ ತರಬೇತಿಗೆ ಪ್ರವೇಶ ಪರೀಕ್ಷೆಯು ಯಾದಗಿರಿ ನಗರದ ನ್ಯೂ ಕನ್ನಡ , ಮಹತ್ಮಾಗಾಂಧಿ ಪ.ಪೂ. ಕಾಲೇಜು, ಸಭಾ ಪ.ಪೂ. ಕಾಲೇಜು, ಬಾಲಕಿಯರ ಸ.ಪ.ಪೂ. ಕಾಲೇಜು, ಲಿಂಗೇರಿ ಕೋನಪ್ಪ ಮಹಿಳಾ ಪ.ಪೂ. ಕಾಲೇಜು ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತದೆ ಎಂದು ತಿಳಿಸಿದರು.ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಪರೀಕ್ಷೆಯ ನಿಯಮಾವಳಿಗಳಂತೆ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶದಲ್ಲಿ ನಿಷೇಧಿತ ಪ್ರದೇಶ ಎಂದು ಜಿಲ್ಲಾಧಿಕಾರಿಗಳು ಘೋಷಿಸಿ ಮತ್ತು ಸುತ್ತಲಿನ ಝಿರಾಕ್ಸ್, ಕಂಪ್ಯೂಟರ್ ಮಳಿಗೆಗಳನ್ನು ಮುಚ್ಚುವಂತೆ ಆದೇಶಿಸಿದರು. ಪರೀಕ್ಷಾ ಕೇಂದ್ರಗಳಿಗೆ ಸುರಕ್ಷತೆಗೆ ಪೊಲೀಸರು ಬಂದೋಬಸ್ತ್ ಗಾಗಿ ಸಮಯಕ್ಕಿಂತ ಮುಂಚಿತವಾಗಿಯೇ ತೆರಳಬೇಕು ಎಂದು ಸೂಚಿಸಿದರು.
ಈ ಪರೀಕ್ಷೆಯ ರಹಸ್ಯ ಬಂಡಲ್‌ಗಳನ್ನು ಕೇಂದ್ರಗಳಿಗೆ ಸಾಗಿಸಲು ತ್ರಿ ಸದಸ್ಯ ಸಮಿತಿಯನ್ನು ರಚಿಸಲಾಗಿದ್ದು ಸದರಿ ಅಧಿಕಾರಿಗಳು ತಮಗೆ ವಹಿಸಿದ ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಅವದಿಯೊಳಗೆ ತಲುಪಿಸುವ ಮತ್ತು ಹಿಂಪಡೆಯುವ ಕ್ರಮದ ಜವಾಬ್ದಾರರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ, ಜಿಲ್ಲಾ ಖಜಾನೆ ಅಧಿಕಾರಿ ಮಾಲಿಂಗರಾಯ, ಪದವಿ ಪೂರ್ವ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಶಂಕರರೆಡ್ಡಿ ಬಿ., ಪ್ರಾಂಶುಪಾಲರಾದ ರುದ್ರಗೌಡ, ಶರಣಪ್ಪ ರಾಹುಲ್, ಮಲ್ಲಿಕಾರ್ಜುನ ಅಂಗಡಿ, ಸುದರ್ಶನರೆಡ್ಡಿ, ವಿ.ಹೆಚ್. ವಜ್ಜಲ್ ಸೇರಿದಂತೆ ಇತರರಿದ್ದರು.