ಸಾರಾಂಶ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬದ ಪಾತ್ರ ಕುರಿತು ತನಿಖೆಗೆ ನ್ಯಾಯಾಲಯ ಅನುಮತಿ ನೀಡಿರುವುದು ಸ್ವಾಗತಾರ್ಹ. ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಬಾಗಲಕೋಟೆ ಜಿಲ್ಲಾ ವೀಕ್ಷಕ, ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬದ ಪಾತ್ರ ಕುರಿತು ತನಿಖೆಗೆ ನ್ಯಾಯಾಲಯ ಅನುಮತಿ ನೀಡಿರುವುದು ಸ್ವಾಗತಾರ್ಹ. ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಬಾಗಲಕೋಟೆ ಜಿಲ್ಲಾ ವೀಕ್ಷಕ, ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಟ್ ತೀರ್ಪು ಐತಿಹಾಸಿಕ ದಾಖಲೆಯಾಗಿದೆ. ಸದನದಲ್ಲಿ ಬಿಜೆಪಿ ಮುಡಾ ಕುರಿತು ಹೋರಾಟ ನಡೆಸಿದಾಗ ಸಿದ್ದರಾಮಯ್ಯ ವಿರೋಧ ಮಾಡಿದ್ದರು. ಒಂದು ದಿನ ಮುಂಚಿತವಾಗಿ ಅಧಿವೇಶನ ಮೊಟಕುಗೊಳಿಸಿದ್ದರು ಎಂದರು.
ವಾಲ್ಮೀಕಿ, ಮುಡಾ ಹಗರಣ ವಿಷಯದಲ್ಲಿ ಬಿಜೆಪಿ ಬೆಂಗಳೂರು, ಮೈಸೂರುವರೆಗೆ ಪಾದಯಾತ್ರೆ ನಡೆಸಿತ್ತು. ಸತ್ಯವನ್ನು ಒಪ್ಪಿಕೊಳ್ಳದೇ ಸಿಎಂ ಸಿದ್ದರಾಮಯ್ಯ ನಾಟಕ ಆಡುತ್ತಿದ್ದಾರೆ. ಕಾಂಗ್ರೆಸ್ ಸಚಿವರು, ಶಾಸಕರು ರಾಜ್ಯಪಾಲರ ವಿರುದ್ಧ ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ. ಸಮಾಜವಾದಿ ಅಂತ ಹೇಳಿಕೊಳ್ಳುವ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಆಗ್ರಹಿಸಿದರು.ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಬಿಜೆಪಿ ನಾಯಕ ಬಸನಗೌಡ ಪಾಟೀಲ ಟಿಪ್ಪು, ಔರಂಗಜೇಬ ವಿಷಯದಲ್ಲಿ ಮಾತನಾಡಿರುವುದು ತಪ್ಪಿಲ್ಲ. ಹಿಂದುಗಳ ಕೊಂದ ವ್ಯಕ್ತಿಗಳ ವಿರುದ್ಧ ಹಿಂದುಗಳಾದ ನಾವು ಹೋರಾಟ ಮಾಡಬೇಕು. ಈಚೆಗೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲಿಸ್ತೀನ್, ಪಾಕಿಸ್ತಾನ ಪರ ಘೋಷಣೆ ಧ್ವಜ ಹಾರಾಟ ಮಾಡಿರುವುದ ಬಗ್ಗೆ ಕಾಂಗ್ರೆಸ್ ಆಕಸ್ಮಿಕ ಘಟನೆ ಅಂತಾರೇ, ಸ್ವಲ್ಪವಾದರೂ ದೇಶಾಭಿಮಾನ ಬೇಡವೇ? ಕಾಂಗ್ರೆಸ್ ಹಿಂದುಗಳ ವಿರೋಧು ಅಂತ ಜರಿದರು.
ಮಾಜಿ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಸತ್ಯ ನಾರಾಯಣ ಹೇಮಾದ್ರಿ, ಶಿವಾನಂದ ಸುರಪುರ, ಮಲಯ್ಯ ಮೂಗನೂರಮಠ ಇದ್ದರು.