ಭ್ರಷ್ಟಾಚಾರ ಸಾಬೀತುಪಡಿಸಿದರೆ ರಾಜಿನಾಮೆ

| Published : Feb 04 2024, 01:39 AM IST

ಸಾರಾಂಶ

ದಾಬಸ್‌ಪೇಟೆ: ನಾನು ಶಾಸಕನಾದ ಮೇಲೆ ವರ್ಗಾವಣೆಯಲ್ಲಾಗಲಿ, ಗುತ್ತಿಗೆದಾರರ ಬಳಿಯಾಗಲಿ ಭ್ರಷ್ಟಾಚಾರ ಮಾಡಿರುವುದು ಸಾಬೀತು ಮಾಡಿದರೆ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ಸವಾಲೆಸೆದರು.

ದಾಬಸ್‌ಪೇಟೆ: ನಾನು ಶಾಸಕನಾದ ಮೇಲೆ ವರ್ಗಾವಣೆಯಲ್ಲಾಗಲಿ, ಗುತ್ತಿಗೆದಾರರ ಬಳಿಯಾಗಲಿ ಭ್ರಷ್ಟಾಚಾರ ಮಾಡಿರುವುದು ಸಾಬೀತು ಮಾಡಿದರೆ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ಸವಾಲೆಸೆದರು.

ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಪಣತೊಟ್ಟು ಸಿಎಂ, ಡಿಸಿಎಂ, ಮಂತ್ರಿಗಳ ಹಿಂದೆ ಬಿದ್ದು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿದ್ದೇನೆ. ವಿನಾಕಾರಣ ಆರೋಪ ಮಾಡುವವರಿಗೆ ಉತ್ತರಿಸಬೇಕಿಲ್ಲ. ವಿರೋಧ ಪಕ್ಷದವರ ಟೀಕೆಗಳಿಗೆ ಉತ್ತರಿಸುವ ಕಾಲ ಬರಲಿದೆ, ಆಗ ಉತ್ತರಿಸುತ್ತೇನೆ ಎಂದರು.

ಅಗಳಕುಪ್ಪೆ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ ಶಾಸಕರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ, ಕೊಳಚೆ ನೀರು ಹಾಗೂ ಮಳೆ ನೀರು ಸರಾಗವಾಗಿ ಹರಿಯುವಂತೆ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಿದರು.

ಎಸ್‌ಟಿ ಆರ್ ಆರ್ ರಸ್ತೆ ನಿರ್ಮಾಣಕ್ಕೆ ಹೋಬಳಿಯ ರೈತರ ಜಮೀನುಗಳನ್ನು ಸರ್ಕಾರ ವಶಪಡಿಸಿಕೊಂಡಿದ್ದು, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುತ್ತಿಲ್ಲ ಎಂದು ರೈತರು ಶಾಸಕರ ಗಮನ ಸೆಳೆದಾಗ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಭೇಟಿ ನೀಡಿ, ಪರಿಹಾರ ತಡೆ ಕುರಿತು ಮಾಹಿತಿ ಪಡೆದರು.

ಈ ವೇಳೆ ಕಾಂಗ್ರೆಸ್ ಮುಖಂಡ ಅಗಳಕುಪ್ಪೆ ಗೋವಿಂದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಅಂಚೆಮನೆ ಪ್ರಕಾಶ್, ಶಿವಕುಮಾರ್, ನಾರಾಯಣ್, ಸಿದ್ದರಾಜು, ಪಾರ್ಥರಾಜು, ದೇವರಾಜು, ಚಿಕ್ಕಣ್ಣ, ಸುರೇಶ್ ಸೇರಿ ಮತ್ತಿತರಿದ್ದರು.ಪೋಟೋ 1 :

ದಾಬಸ್‌ಪೇಟೆಯ ಅಗಳಕುಪ್ಪೆ ರಸ್ತೆ ಕಾಮಗಾರಿಯನ್ನು ಶಾಸಕ ಎನ್.ಶ್ರೀನಿವಾಸ್ ಪರಿಶೀಲಿಸಿದರು.