ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಪ್ರತಿಯೊಬ್ಬ ನೌಕರರ ಶಕ್ತಿ ಕೇಂದ್ರ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನೆಲ್ಲಾ ಬಿಟ್ಟು ಒಟ್ಟಾಗಿ ಒಗ್ಗಟ್ಟಿನಿಂದ ಮುನ್ನಡೆದಾಗ ನೌಕರರ ಕುಂದುಕೊರತೆಗಳನ್ನು ಸುಲಭವಾಗಿ ನಿವಾರಿಸಬಹುದು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಹಾಸನ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಅಭಿಪ್ರಾಯಪಟ್ಟರು. ಕಾರ್ಯದರ್ಶಿ ಲಕ್ಷ್ಮೀಕಾಂತ್ರವರು ೨೦೨೫-೨೬ನೇ ಸಾಲಿನ ಆದಾಯ ಮತ್ತು ಖರ್ಚುಗಳ ವಿವರಗಳನ್ನು ಮಂಡಿಸಿ ಸರ್ವ ಸದಸ್ಯರಿಂದ ಒಪ್ಪಿಗೆ ಪಡೆದರು.
ಕನ್ನಡಪ್ರಭ ವಾರ್ತೆ ಹಾಸನ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಪ್ರತಿಯೊಬ್ಬ ನೌಕರರ ಶಕ್ತಿ ಕೇಂದ್ರ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನೆಲ್ಲಾ ಬಿಟ್ಟು ಒಟ್ಟಾಗಿ ಒಗ್ಗಟ್ಟಿನಿಂದ ಮುನ್ನಡೆದಾಗ ನೌಕರರ ಕುಂದುಕೊರತೆಗಳನ್ನು ಸುಲಭವಾಗಿ ನಿವಾರಿಸಬಹುದು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಹಾಸನ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.ಅವರು ನಗರದ ಹೃದಯ ಕೇಂದ್ರದಲ್ಲಿರುವ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿ ಪ್ರತಿವರ್ಷವೂ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾ ಪುರಸ್ಕಾರಗಳು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾ ಬಂದಿದ್ದೇವೆ. ಎಲ್ಲರ ಸಹಕಾರದಿಂದ ಯಶಸ್ವೀ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಮುಂದೆಯೂ ಇದೇ ಸರ್ವ ಸದಸ್ಯರ ಬೆಂಬಲ ಹಾಗೂ ಪ್ರೋತ್ಸಾಹ ಬೇಕು. ಸಂಘಕ್ಕೆ ಆದಾಯ ಕ್ರೂಢೀಕರಣ ಮಾಡುವ ನಿಟ್ಟಿನಲ್ಲಿ ಹೊಸ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಬಾಡಿಗೆ ನೀಡುವುದರ ಮೂಲಕ ಸಂಘಕ್ಕೆ ಒಂದು ನಿರ್ದಿಷ್ಟ ಆದಾಯ ಮೂಲ ಮಾಡುವುದು ಸಂಘದ ಪ್ರಮುಖ ಉದ್ದೇಶವಾಗಿದೆ ಎಂದರು. ಕಾರ್ಯದರ್ಶಿ ಲಕ್ಷ್ಮೀಕಾಂತ್ರವರು ೨೦೨೫-೨೬ನೇ ಸಾಲಿನ ಆದಾಯ ಮತ್ತು ಖರ್ಚುಗಳ ವಿವರಗಳನ್ನು ಮಂಡಿಸಿ ಸರ್ವ ಸದಸ್ಯರಿಂದ ಒಪ್ಪಿಗೆ ಪಡೆದರು.ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ವಿಷ್ಣುಪ್ರಕಾಶ್, ಹಿರಿಯ ಉಪಾಧ್ಯಕ್ಷರಾದ ಗೋಪಾಲ್, ಲಕ್ಷ್ಮೀಶ್, ಪಾರ್ಥೇಶ್, ಆಲೂರು ತಾಲೂಕು ಅಧ್ಯಕ್ಷರಾದ ಡಿ.ಎಂ. ವರದರಾಜು, ಅರಸೀಕೆರೆ ತಾಲೂಕು ಅಧ್ಯಕ್ಷ ಜಯಣ್ಣ, ಅರಕಲಗೂಡು ತಾಲೂಕು ಅಧ್ಯಕ್ಷ ಪುಟ್ಟರಾಜು, ಗೊರೂರು ಯೋಜನಾ ಘಟಕದ ಅಧ್ಯಕ್ಷ ಚನ್ನಕೇಶವ, ಉಪಾಧ್ಯಕ್ಷ ಮಧು, ಡಾ. ಪಲ್ಲವಿ, ಕ್ರೀಡಾ ಕಾಯ್ದರ್ಶಿ ಆಶಾ, ರವೀಂದ್ರ, ವೆಂಕಟೇಶ್, ಆಲೂರು ತಾಲೂಕು ಗೌರವಾಧ್ಯಕ್ಷ ಬಿ. ಆರ್. ಧರ್ಮ, ಸಂಘದ ನಿದೇಶಕರಾದ ಎಂ.ಆರ್. ಶ್ರೀನಿವಾಸ್, ಎಂ. ಆರ್. ವೇಣುಗೋಪಾಲ್, ಸಿ.ಎಸ್. ಅಣ್ಣಪ್ಪ , ಕೊಟ್ರೇಶ್ ಎಸ್. ಉಪ್ಪಾರ್ ಸೇರಿದಂತೆ ನೂರಾರು ನೌಕರ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.