ರಾಮನಗರ: ರೇಷ್ಮೆನೂಲು ಬಿಚ್ಚುವವರ ಮತ್ತು ನೇಕಾರರ ಕೈಗಾರಿಕಾ ಸಹಕಾರ ಸಂಘದ 6 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಪರ್ವಿಜ್ ಪಾಷಾ ಬಣದ 8 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ
ರಾಮನಗರ: ರೇಷ್ಮೆನೂಲು ಬಿಚ್ಚುವವರ ಮತ್ತು ನೇಕಾರರ ಕೈಗಾರಿಕಾ ಸಹಕಾರ ಸಂಘದ 6 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಪರ್ವಿಜ್ ಪಾಷಾ ಬಣದ 8 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ನಗರದ ಐಜೂರು ಟ್ಯಾಂಕ್ ವೃತ್ತದಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಸೊಸೈಟಿಯ 788 ಮತದಾರರ ಪೈಕಿ 571 ಮಂದಿ ಮತದಾನ ಚಲಾಯಿಸಿದರು. ಸಾಮಾನ್ಯ ವರ್ಗದ 46 ಮತಗಳು, ಬಿಸಿಎಂ ಎ ವರ್ಗದಲ್ಲಿ 78 ಮತಗಳು ತಿರಸ್ಕತವಾಗಿದ್ದವು.6 ಸ್ಥಾನಗಳಲ್ಲಿ ತಮ್ಮ ಬೆಂಬಲಿತ ನಿರ್ದೇಶಕರನ್ನು ಗೆಲ್ಲಿಸಿ ಕೊಳ್ಳಲು ನಗರಸಭಾ ಸದಸ್ಯ ಅಕ್ಲೀಂ ಅಬ್ರಾರ್ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಪರ್ವಿಜ್ ಪಾಷಾ ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು.
6 ಸ್ಥಾನಗಳಿಗೆ ಆಯ್ಕೆಯಾದವರು:ಸಾಮಾನ್ಯ ವರ್ಗದಿಂದ ಯಾಸೀನ್ ಪಾಷ ( 313), ಮೊಹಮದ್ ಸಲಾವುದ್ದೀನ್ (292), ನಯಾಜ್ ಉಲ್ಲಾಖಾನ್ ( 273), ಪೈರೋಜ್ ಖಾನ್ ( 269), ಮಹಮದ್ ಷಫಿ ಅಹಮದ್ ( 264) , ಬಿಸಿಎಂ "ಎ " ಮೀಸಲಿನಿಂದ ನಾಸಿರುದ್ದೀನ್ ( 254) ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಮಂಜುನಾಥ್ ತಿಳಿಸಿದರು.
4 ಅವಿರೋಧ ಆಯ್ಕೆಯಾದವರು :ಪರಿಶಿಷ್ಟ ಜಾತಿ ಮೀಸಲಿನಿಂದ ಶ್ರೀನಿವಾಸ್, ಅಸ್ಮದ್ (ಅಜ್ಜು), ಮಹಿಳಾ ವರ್ಗದಿಂದ ನೂರ್ ಸಾದಿಕ್ ಮತ್ತು ಆಯಿಷಾಖಾನಂ ಅವರುಗಳು ಅವಿರೋಧ ಆಯ್ಕೆಯಾಗಿದ್ದರು. ಪರಿಶಿಷ್ಟ ಪಂಗಡ ಒಂದು ಸ್ಥಾನ ಖಾಲಿ ಉಳಿದಿದೆ.
ರಾಮನಗರ ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಪರ್ವಿಜ್ ಪಾಷ ಮಾತನಾಡಿ, ಸೊಸೈಟಿ ಪ್ರಗತಿಗೆಎಲ್ಲರ ಸಹಕಾರದಲ್ಲಿ ಶ್ರಮಿಸಿದ್ದು, ಅದರ ಫಲವಾಗಿ ನಮ್ಮಹಕ್ಕು ನಮ್ಮಸೊಸೈಟಿ ಘೋಷಣೆಯಲ್ಲಿ ಚುನಾವಣೆ ಎದುರಿಸಿದೆವು. ಮತದಾರರು ನಮ್ಮ ತಂಡಕ್ಕೆ ಅಭೂತ ಫೂರ್ವ ಬೆಂಬಲ ನೀಡಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸಂಘಕ್ಕೆ ಕಚೇರಿ, ರೀಲರ್ಸ್ ಗಳಿಗೆ ಶೇ.5ರಷ್ಟು ರಲ್ಲಿ ಬಡ್ಡಿಸಾಲ, ರೀಲರ್ಸ್ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು, ಕೆಎಸ್ ಐಸಿ ಮತ್ತು ಕೆಎಸ್ ಎಂ ಬಿ ಮೂಲಕ ಸೊಸೈಟಿ ವಹಿವಾಟು ನಡೆಸಲು ಎಲ್ಲ ನಿರ್ದೇಶಕರ ಪರವಾಗಿ ಶ್ರಮಿಸುವುದಾಗಿ ಹೇಳಿದರು.
