ಮಾಗಡಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು
ಮಾಗಡಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕು ಕಚೇರಿ ಮತಗಟ್ಟೆ ಬಳಿ ಎನ್ಡಿಎ ಅಭ್ಯರ್ಥಿ ರಂಗನಾಥ್ ಪರ ಮತಯಾಚಿಸಿ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಈ ಚುನಾವಣೆಯಲ್ಲಿ ಅದ್ಭುತ ಫಲಿತಾಂಶ ತಂದುಕೊಡಲಿದೆ. ನಾವು ನಿರೀಕ್ಷಿಸಿದಂತೆಯೇ ಮತದಾರರು ಎನ್ಡಿಎ ಪರ ಒಲವು ತೋರುತ್ತಿದ್ದಾರೆ ಎಂದು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಸಾದ್ಗೌಡ ಸೇರಿದಂತೆ ಉಭಯ ಪಕ್ಷಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಮತದಾರರನ್ನು ಖುದ್ದಾಗಿ ಭೇಟಿ ಮಾಡಿ ಮತಗಳನ್ನು ಕ್ರೋಢೀಕರಿಸಲಾಗಿದೆ. ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿ ನ್ಯಾಯ ಒದಗಿಸಲು ರಂಗನಾಥ್ ಅವರಂತಹ ಸಮರ್ಥ ನಾಯಕರು ವಿಧಾನ ಪರಿಷತ್ ಪ್ರವೇಶಿಸುವುದು ಅಗತ್ಯ. ಈಗಾಗಲೇ ಕುದೂರು, ಮಾಗಡಿ ಸೇರಿದಂತೆ ಹಲವು ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣಕ್ಕೂ ಭೇಟಿ ನೀಡಲಾಗುವುದು. ಎಲ್ಲೆಡೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಮಾಗಡಿ, ಕುದೂರಿನಲ್ಲಿ ಬಿರುಸಿನ ಮತದಾನ:ಬೆಂಗಳೂರು ಶಿಕ್ಷಕರ ವಿಧಾನ ಪರಿಷತ್ ಚುನಾವಣೆಯ ಮತದಾನ ಮಾಗಡಿ ಹಾಗೂ ಕುದೂರಿನಲ್ಲಿ ಆರಂಭದಿಂದಲೇ ಬಿರುಸಿನಿಂದ ಮತ್ತು ಶಾಂತಿಯುತವಾಗಿ ನಡೆಯಿತು.
ಮಾಗಡಿ ಪಟ್ಟಣ: ಶೇ. 94.86ರಷ್ಟು ಮತದಾನ ದಾಖಲಾಗಿದ್ದು, ಇವರಲ್ಲಿ 175 ಶಿಕ್ಷಕರು ಹಾಗೂ 120 ಶಿಕ್ಷಕಿಯರು ಮತ ಚಲಾಯಿಸಿದ್ದಾರೆ.ಕುದೂರು: ಒಟ್ಟು 98.36ರಷ್ಟು ಮತದಾನ ಮಾಡಿದ್ದು, ಅವರಲ್ಲಿ 160 ಶಿಕ್ಷಕರು ಹಾಗೂ 80 ಶಿಕ್ಷಕಿಯರು ಹಕ್ಕು ಚಲಾಯಿಸಿದ್ದಾರೆ.
ಇದೇ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಜೈ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದ್ ಸ್ವಾಮಿ, ತಾಲೂಕು ಅಧ್ಯಕ್ಷ ಪ್ರಸಾದ್ ಗೌಡ, ವೀರಭ್ರಯ್ಯ, ಜೆಡಿಎಸ್ ಮುಖಂಡರಾದ ತಮ್ಮಣ್ಣಗೌಡ, ರಂಗಣಿ, ವಿಜಯಕುಮಾರ್, ಕೆಂಪಸಾಗರ ಮಂಜುನಾಥ್, ಕುಮಾರ್, ಕೆ.ವಿ.ಬಾಲು, ರಂಗಸ್ವಾಮಿ ಇತರರು ಭಾಗವಹಿಸಿದ್ದರು.