ಸಾಧಕರಿಗೆ ಗೌರವ, ಪ್ರತಿಭಾ ಪುರಸ್ಕಾರ

| Published : Sep 23 2024, 01:17 AM IST

ಸಾರಾಂಶ

ಮೂಲ್ಕಿಯ ಶ್ರೀ ನಾರಾಯಣಗುರು ಸಭಾಂಗಣದಲ್ಲಿ ಮೂಲ್ಕಿಯ ವಿಜಯ ರೈತರ ಸೇವಾ ಸಹಕಾರಿ ಸಂಘದ 48ನೇ ವಾರ್ಷಿಕ ಮಹಾಸಭೆ ಹಾಗೂ 2023- 24ನೇ ವರ್ಷದ ಆಡಳಿತ ವರದಿ, ಸಾಧಕರಿಗೆ ಗೌರವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಸಂಘದ ಅಭಿವೃದ್ಧಿಗೆ ನಿರ್ದೇಶಕರು ಹಾಗೂ ಸದಸ್ಯರ ಶ್ರಮ ಅನನ್ಯವಾಗಿದ್ದು ಮುಂದಿನ ದಿನಗಳಲ್ಲಿ ಕೃಷಿಗೆ ಹಾಗೂ ಶಿಕ್ಷಣಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಲಾಗುವುದು ಎಂದು ಮೂಲ್ಕಿಯ ವಿಜಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಹೇಳಿದರು.

ಮೂಲ್ಕಿಯ ಶ್ರೀ ನಾರಾಯಣಗುರು ಸಭಾಂಗಣದಲ್ಲಿ ನಡೆದ ಮೂಲ್ಕಿಯ ವಿಜಯ ರೈತರ ಸೇವಾ ಸಹಕಾರಿ ಸಂಘದ 48ನೇ ವಾರ್ಷಿಕ ಮಹಾಸಭೆ ಹಾಗೂ 2023- 24ನೇ ವರ್ಷದ ಆಡಳಿತ ವರದಿ, ಸಾಧಕರಿಗೆ ಗೌರವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಹೊಸ ಅಂಗಣ ಮಾಸಪತ್ರಿಕೆಯ ಸಂಪಾದಕ ಡಾ. ಹರೀಶ್ಚಂದ್ರ ಪಿ ಸಾಲ್ಯಾನ್, ರೈತರಾದ ಕರುಣಾಕರ ಶೆಟ್ಟಿ ಉಳೆಪಾಡಿ, ಕೃಷ್ಣ ಬಿ ಶೆಟ್ಟಿ ಕರ್ನೀರೆ, ರಾಘು ಸುವರ್ಣ ಕೊಲ್ಲೂರು, ಮನೋಹರಿ ಶೆಟ್ಟಿ ಶೆಡ್ತಿ ಅತಿಕಾರಿಬೆಟ್ಟು ಅವರನ್ನು ಗೌರವಿಸಲಾಯಿತು.

ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಸಂಘದ ಸದಸ್ಯರಿಗೆ ಶೇಕಡಾ15 ಡಿವಿಡೆಂಡ್‌ ವಿತರಿಸಲಾಯಿತು. ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಆಡಳಿತ ನಿರ್ದೇಶಕ ಶಿವರಾಮ ಶೆಟ್ಟಿ, ನಿರ್ದೇಶಕರಾದ ಗಂಗಾಧರ ಶೆಟ್ಟಿ, ಅಶೋಕ್ ಕುಮಾರ್ ಚಿತ್ರಾಪು, ನರಸಿಂಹ ಪೂಜಾರಿ ದೇವಪ್ರಸಾದ್, ಪುಷ್ಪ ಎಂ, ಪದ್ಮಿನಿ ವಿ ಶೆಟ್ಟಿ, ರಾಜೇಶ್ ಶೆಟ್ಟಿ ರಾಮ ನಾಯ್ಕ್, ನಂಜುಂಡ ಆರ್ ಕೆ, ಬ್ಯಾಂಕ್ ಆಫ್ ಬರೋಡದ ಶಾಖಾಧಿಕಾರಿ ಪ್ರಜ್ವಲ್ ಕೆ ಹೆಗ್ಡೆ, ಸಂಸ್ಥೆಯ ಶಾಖಾಧಿಕಾರಿ ಚಂದ್ರಕಾಂತ ಶೆಟ್ಟಿ ಪಂಜಿನಡ್ಕ ಮತ್ತಿತರರು ಉಪಸ್ಥಿತರಿದ್ದರು. ಗಂಗಾಧರ ಶೆಟ್ಟಿ ಸ್ವಾಗತಿಸಿದರು. ಮನೋಹರ ಕೋಟ್ಯಾನ್, ರೇಖಾ ಎಂ ಶೆಟ್ಟಿ ನಿರೂಪಿಸಿದರು.