ಕಾನೂನಿಗೆ ಗೌರವ, ದೇವರ ನಂಬಿಕೆ ಇದೆ: ಎಚ್.ಡಿ. ರೇವಣ್ಣ

| Published : May 28 2024, 01:03 AM IST

ಕಾನೂನಿಗೆ ಗೌರವ, ದೇವರ ನಂಬಿಕೆ ಇದೆ: ಎಚ್.ಡಿ. ರೇವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ, ಪ್ರಜ್ವಲ್‌ ವಿಚಾರ ಕೋರ್ಟಿನಲ್ಲಿ ಇರುವುದರಿಂದ ಯಾವುದೇ ವಿಚಾರಗಳನ್ನು ಮಾತನಾಡಲು ಇಷ್ಟಪಡುವುದಿಲ್ಲ. ಇಂದು ಸೋಮವಾರ, ಹೀಗಾಗಿ ಮಂಜುನಾಥನ ದರ್ಶನ ಮಾಡಲು ಬಂದಿದ್ದೇನೆ. ಎಲ್ಲವನ್ನೂ ಶ್ರೀ ಮಂಜುನಾಥನಿಗೆ ಬಿಟ್ಟಿದ್ದೇನೆ ಎಂದಷ್ಟೇ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ನಾನು ರಾಜ್ಯ ರಾಜಕಾರಣದಲ್ಲಿ ಕಳೆದ 40 ವರ್ಷಗಳಿಂದ ಇದ್ದೇನೆ ಹಾಗೂ 25 ವರ್ಷದಿಂದ ಶಾಸಕನಾಗಿದ್ದೇನೆ. ನನಗೆ ಕಾನೂನು ಬಗ್ಗೆ ಗೌರವವಿದೆ. ದೇವರ ಬಗ್ಗೆ ನಂಬಿಕೆ ಇದೆ ಎಂದು ಮಾಜಿ ಸಚಿವ, ಶಾಸಕ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೋಮವಾರ ಆಗಮಿಸಿದ ಅವರು, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಪ್ರಜ್ವಲ್‌ ವಿಚಾರ ಕೋರ್ಟಿನಲ್ಲಿ ಇರುವುದರಿಂದ ಯಾವುದೇ ವಿಚಾರಗಳನ್ನು ಮಾತನಾಡಲು ಇಷ್ಟಪಡುವುದಿಲ್ಲ. ಇಂದು ಸೋಮವಾರ, ಹೀಗಾಗಿ ಮಂಜುನಾಥನ ದರ್ಶನ ಮಾಡಲು ಬಂದಿದ್ದೇನೆ. ಎಲ್ಲವನ್ನೂ ಶ್ರೀ ಮಂಜುನಾಥನಿಗೆ ಬಿಟ್ಟಿದ್ದೇನೆ ಎಂದಷ್ಟೇ ಹೇಳಿದರು.

ಬಾಕಿ ಯಾವುದೇ ಪ್ರಶ್ನೆಗಳಿಗೆ ಅವರು ಉತ್ತರಿಸಲು ನಿರಾಕರಿಸಿದರು.

ಬಳಿಕ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ ರೇವಣ್ಣ ಆಶೀರ್ವಾದ ಪಡೆದರು.