ಸಣ್ಣ ಕಾರ್ಮಿಕರನ್ನು ಗೌರವಿಸುವ ಕೆಲಸ ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಅವರು ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಸೋಮವಾರ ಮೋದಿ ಜನ್ಮ ದಿನದ ಪ್ರಯುಕ್ತ ಬಿಜೆಪಿ ಮಂಡಲದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ಅಭಿಯಾನದಲ್ಲಿ ಉಚಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಸಣ್ಣ ಕಾರ್ಮಿಕರನ್ನು ಗೌರವಿಸುವ ಕೆಲಸ ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಅವರು ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಸೋಮವಾರ ಮೋದಿ ಜನ್ಮ ದಿನದ ಪ್ರಯುಕ್ತ ಬಿಜೆಪಿ ಮಂಡಲದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ಅಭಿಯಾನದಲ್ಲಿ ಉಚಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತರನ್ನು ಗುರುತಿಸಿ ಗೌರವ ಸಲ್ಲಿಸುವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ. ಮೊದಿ ಜಾಗತಿಕ ಮಟ್ಟದಲ್ಲಿ ಅಪ್ರತಿಮ ನಾಯಕನಾಗಿ ಹೊರಹೊಮ್ಮಿದ್ದಾರೆ. ದೂರ ದೃಷ್ಟಿಯ ಪ್ರಧಾನಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ದೇಶದ ಯುವ ಶಕ್ತಿ ಸೇರಿದಂತೆ ರೈತಾಪಿಗಳ ಬದುಕು ಕಟ್ಟಿಕೊಳ್ಳಲು ಕೇಂದ್ರ ಸಮರ್ಪಕ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.ದೇಶದ ಬಡತನ ನಿರ್ಮೂಲನೆ ಸಂಕಲ್ಪ ಈಡೇರಿಸುವುದು ಬಿಜೆಪಿ ಇಂದು ಮಾತ್ರ ಸಾದ್ಯ. ಆತ್ಮನಿರ್ಭರ ಯೋಜನೆ ದೇಶಕ್ಕೆ ಬೆನ್ನೆಲುಬಾಗಿದೆ. ಮೊದಲಿಂದಲೂ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕಾರ್ಯ ಮಾಡುತ್ತಿದೆ. ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ರಾಜ್ಯ ಸರ್ಕಾರ ಸಂವಿದಾನವನ್ನು ಒಪ್ಪುತ್ತಿಲ್ಲ. ಭಯೊತ್ಪಾದಕರನ್ನು ದೇಶ ಭಕ್ತರು ಎನ್ನುತ್ತಿರವ ಕಾಂಗ್ರೆಸ್ಸಿನಿಂದ ಹಿಂದೂ ರಾಷ್ಟ್ರದ ಉದ್ಧಾರ ಸಾದ್ಯವಿಲ್ಲ. ದೇಶದ ಹಿತ ದೃಷ್ಟಿಯಿಂದ ಕೆಲಸ ಮಾಡುವ ಕಾರ್ಯಕರ್ತರನ್ನು ಹೊಂದಿರುವ ಭಾಜಪ ಪಕ್ಷದಿಂದ ಮಾತ್ರ ಭಾರತಾಂಬೆಯ ಕೈ ಬಲಪಡಿಸಲು ಸಾಧ್ಯ ಎಂದರು.ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಹೊಸದಾಗಿ 366 ಕೋಟಿ ಹಣ ಮಂಜೂರು ಮಾಡಿದೆ. ಶಿವಮೊಗ್ಗದ ಎಂಆರ್,ಎಸ್ ಸರ್ಕಲ್ ನಿಂದ ಹಾಲ್ಕೊಳ ವೃತ್ತ ಅಬಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಪ್ರವಾಸೋಧ್ಯಮ ಸೇರಿದಂತೆ ಹೆದ್ದಾರಿಗಳ ಅಭಿವೃದ್ಧಿಗೆ ನೀತಿನ್ ಗಡ್ಕರಿ ಪಣತೊಟ್ಟಿದ್ದಾರೆ. ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಆದೇಶ ಹೊರಡಿಸಿ ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡಿದೆ. ಗಾಳಿ ಮಳೆಗೆ ತೋಟ ಕಳೆದುಕೊಂಡ ರೈತರಿಗೆ ನೀಡಿರುವ ಪರಿಹಾರ ಅರೆಕಾಸಿನ ಮಜ್ಜಿಗೆಯಂತಾಗಿದೆ.ಜಿಲ್ಲಾಧ್ಯಕ್ಷ ಜಗದೀಶ್, ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಮಾಜಿ ಶಾಸಕ ಅಶೋಕ್ ನಾಯ್ಕ್, ಕೆ.ಜಿ ಕುಮಾರಸ್ವಾಮಿ, ಡಿ.ಮಂಜುನಾಥ್, ಶ್ರೀನಿವಾಸ್, ಸುಭ್ರಮಣ್ಣಿ, ರಾಜೇಶ್ ಪಾಟೀಲ್, ಗಿರೀಶ್, ಯು.ವೆಂಕಟೇಶ್, ಎ.ಕೆ ರಮೇಶ್, ಕಿರಣ್‌ಕುಮಾರ್, ಸಿದ್ದಪ್ಪ, ರೇಖಾಬೊಸ್ಲೆ, ಡಾ ಮೋಹನ್, ಕುಮಾರ್‌ನಾಯ್ಡು, ಹಾಲೋಜಿರಾವ್ ಇತರರಿದ್ದರು.

ಪಟ್ಟಣ ಪಂಚಾಯಿತಿಗೆ ಭೇಟಿ: ಪಟ್ಟಣ ಪಂಚಾಯಿತಿ ಕುಡಿಯುವ ನೀರಿಗಾಗಿ ಕಳೆದ ಮೂರು ವರ್ಷಗಳ ಹಿಂದೆ 40 ಕೋಟಿ ರು. ವೆಚ್ಚದ ಕಾಮಗಾರಿಗೆ ಚಾಲನೆ ದೊರೆತ್ತಿದ್ದು, ನೆನಗುದಿಗೆ ಬಿದ್ದಿದೆ. ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳು ಏನು ಮಾಡುತ್ತಿದ್ದಾರೆಂದು ಗರಂ ಆದರು. ತಕ್ಷಣವೇ ಈ ಕಾಮಗಾರಿಯನ್ನು ಕೈಗೆತ್ತಿಕೊಂಡು ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಬೇಕೆಂದು ಆಗ್ರಹಿಸಿದರು. ಪಟ್ಟಣ ಪಂಚಾಯಿತಿ ಘೋಷಣೆಯಾದ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನ ಬಂದಿದ್ದು, ಅಧಿಕಾರಿ ಸರಿಯಾಗಿ ಕಾರ್ಯ ನಿರ್ವಹಿಸದೇ ಹಿನ್ನೆಲೆಯಲ್ಲಿ ಹಣ ವಾಪಸು ಸರ್ಕಾರಕ್ಕೆ ಹೋಗಿದೆ. ಅವೈಜ್ಞಾನಿಕ ರಿಂಗ್ ರಸ್ತೆಗೆ ಸರ್ಕಾರ ಮುಂದಾಗುತ್ತಿದ್ದು, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚದೇ ರೈತರ ಜಮೀನುಗಳಿಗೆ ಕೈ ಹಾಕಿರುವುದು ವಿಪರ್ಯಾಸ. ಸರ್ಕಾರ ರೈತರ ನೆಮ್ಮದಿಯನ್ನು ಹಾಳು ಮಾಡುತ್ತಿದೆ ಹೊರತು ಬೇರೇನಿಲ್ಲ ಎಂದರು.