ಸಾರಾಂಶ
ಒಂದಕ್ಷರ ಕಲಿಸಿದಾತನೂ ಗುರು ಎಂದು ಸಂಸ್ಕೃತದಲ್ಲಿ ಒಂದು ಉಕ್ತಿ ಇದೆ. ಗುರುವಿನಿಂದ ಕಲಿತ ವಿದ್ಯೆಯು ಶಿಷ್ಯನ ಜೀವನಕ್ಕೆ ಅಡಿಪಾಯವಾದರೆ ಆ ಗುರುವಿನ ಜೀವನ ಸಾರ್ಥಕವಾದಂತೆ ಎಂದು ಗ್ರಾಮದ ಹಿರಿಯ ಶಿಕ್ಷಕ ಮಳಲಿ ಸಿದ್ದಪ್ಪ ಹೊನ್ನಾಳಿಯಲ್ಲಿ ಹೇಳಿದ್ದಾರೆ.
- ಬೆನಕನಹಳ್ಳಿಯಲ್ಲಿ ಗುರುವಂದನೆ-ಸ್ನೇಹ ಸಮ್ಮಿಲನ ಕಾರ್ಯಕ್ರಮ- - - ಹೊನ್ನಾಳಿ: ಒಂದಕ್ಷರ ಕಲಿಸಿದಾತನೂ ಗುರು ಎಂದು ಸಂಸ್ಕೃತದಲ್ಲಿ ಒಂದು ಉಕ್ತಿ ಇದೆ. ಗುರುವಿನಿಂದ ಕಲಿತ ವಿದ್ಯೆಯು ಶಿಷ್ಯನ ಜೀವನಕ್ಕೆ ಅಡಿಪಾಯವಾದರೆ ಆ ಗುರುವಿನ ಜೀವನ ಸಾರ್ಥಕವಾದಂತೆ ಎಂದು ಗ್ರಾಮದ ಹಿರಿಯ ಶಿಕ್ಷಕ ಮಳಲಿ ಸಿದ್ದಪ್ಪ ಹೇಳಿದರು.
ತಾಲೂಕಿನ ಬೆನಕನಹಳ್ಳಿಯ ವಿನಾಯಕ ಪ್ರೌಢಶಾಲೆಯಲ್ಲಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಿಂದ ಸಾಮಾಜೀಕರಣಗೊಳಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ. ಅದನ್ನು ಮನಗಂಡು ಶಿಷ್ಯವೃಂದವು ನಮ್ಮನ್ನು ಗುರುತಿಸಿ ಗೌರವಿಸಿದರೆ ನಮ್ಮ ಜೀವನ ಸಾರ್ಥಕ ಎಂದರು.ಹಳೇ ವಿದ್ಯಾರ್ಥಿಗಳು ತಮಗೆ ಪಾಠ, ಪ್ರವಚನ ನೀಡುವ ಮೂಲಕ ಜೀವನಮಾರ್ಗ ತೋರಿದ ಹಿನ್ನೆಲೆ ಸೇವೆಯಿಂದ ನಿವೃತ್ತಿಗೊಂಡ ಶಿಕ್ಷಕರಾದ ಎಚ್.ಪರಮೇಶ್ವರಪ್ಪ, ಕೃಷ್ಣ ನಾಯ್ಕ್, ಚಂದ್ರಚೂಡಪ್ಪ, ಹಾಲಿ ಶಿಕ್ಷಕರಾದ ಯಶೋಧ, ಸಿದ್ದಪ್ಪ ಎಚ್.ಬಿ, ಆಯಾ ರುದ್ರಮ್ಮ ಅವರನ್ನು ಸನ್ಮಾನಿಸಿದರು.
ಹಳೆಯ ವಿದ್ಯಾರ್ಥಿಗಳಾದ ಗಜೇಂದ್ರ ಕೆ.ಜಿ, ಗಿರೀಶ್ ಎಚ್.ಬಿ, ಮೋಹನ್ ಎಂ.ಸಿ, ಜ್ಯೋತಿ, ಪ್ರೀತಿ, ಶಾಲಿನಿ, ಪ್ರವೀಣ, ಹರೀಶ್ ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು.- - - -18ಎಚ್ಎಲ್.ಐ1:
ಬೆನಕನಹಳ್ಳಿ ಶಾಲೆಯಲ್ಲಿ ಗುರವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ಮಳಲಿ ಸಿದ್ದಪ್ಪ ಅವರನ್ನು ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು.