ಪರಧರ್ಮವನ್ನು ಸಹಿಷ್ಣುತೆಯಿಂದ ಗೌರವಿಸಿ: ಬಿರಾದಾರ

| Published : Apr 01 2024, 12:51 AM IST

ಪರಧರ್ಮವನ್ನು ಸಹಿಷ್ಣುತೆಯಿಂದ ಗೌರವಿಸಿ: ಬಿರಾದಾರ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್ ನಗರದ ದರ್ಜಿಗಲ್ಲಿಯಲ್ಲಿರುವ ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ ಗೃಹದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ಮಾತೃಧರ್ಮ ಅನುಪಾಲನೆ ಮಾಡುವುದರೊಂದಿಗೆ ಪರಧರ್ಮವನ್ನು ಸಹಿಷ್ಣುತೆಯಿಂದ ಗೌರವಿಸಬೇಕೆಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಬಿರಾದಾರ ತಿಳಿಸಿದರು.

ನಗರದ ದರ್ಜಿಗಲ್ಲಿಯಲ್ಲಿರುವ ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ ಅವರ ಗೃಹದಲ್ಲಿ ಮುಸ್ಲಿಂ ಬಾಂಧವರಿಗೆ ಹಮ್ಮಿಕೊಂಡ ಇಫ್ತಾರ್ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಚನ್ನಬಸವೇಶ್ವರ ಜ್ಞಾನಪೀಠ ಬೆಂಗಳೂರಿನ ಪೀಠಾಧ್ಯಕ್ಷ ಜಗದ್ಗುರು ಡಾ.ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ದೇವನೊಬ್ಬನೆ ತಂದೆ, ಮನುಜರೆಲ್ಲರೂ ಒಂದೆ ಎಂದು ಸೌಹಾರ್ದತೆಯಿಂದ ಬದುಕುವ ಜಾತ್ಯಾತೀತ ರಾಷ್ಟ್ರ ನಮ್ಮದು. ಹೀಗಾಗಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ರೋಜಾ ಅನುಸರಿಸುತ್ತಿರುವ ಇಸ್ಲಾಂ ಬಂಧುಗಳಿಗೆ ಹಬ್ಬದ ಶುಭಾಶಯ ಕೋರಿದರು. ನೇತೃತ್ವವನ್ನು ಬಸವ ಮಂಟಪದ ಮಾತೆ ಸತ್ಯಾದೇವಿ ವಹಿಸಿದ್ದರು.

ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಮಾತನಾಡಿದರು. ಸೂಫಿ ಸೈಯದ್ ಶಾ ಮಹಮ್ಮದ್ ಗೌಸ್ ಖಾದ್ರಿ ಅಶರಫಿ ಸಂಸ್ಥಾಪಕರು ಖಾದ್ರಿ ವೇಲ್ಫಿಯೆರ ಸೊಸೈಟಿ ಕರ್ನಾಟಕ ಇವರನ್ನು ಸನ್ಮಾನಿಸಲಾಯಿತು.

ಶಿವಶರಣಪ್ಪ ಪಾಟೀಲ ಹಾರೂರಗೇರಿ ಸ್ವಾಗತಿಸಿ, ಸಿದ್ಧವೀರ ಸಂಗಮದ ನಿರೂಪಿಸಿ, ಸತೀಶ ಪಾಟೀಲ ಹಾರೂರಗೇರಿ ವಂದಿಸಿದರು. ಇದೇ ವೇಳೆ ಪ್ರಮುಖರಾದ ಮಹ್ಮದ್ ರಶೀದ, ಡಾ. ರಾಜಶ್ರೀ, ಗಣಪತಿ ಬಿರಾದಾರ, ಬಸವಂತರಾವ ಬಿರಾದಾರ, ಸಂಜೀವಕುಮಾರ ಬುಕ್ಕಾ, ಪ್ರಭು ಪಾಟೀಲ, ಮಹಾರುದ್ರ ಡಾಕುಳಗೆ ಸೇರಿ ಇನ್ನಿತರರಿದ್ದರು.