ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ವಿದ್ಯಾರ್ಥಿಗಳು ಬಾಲ್ಯದಿಂದಲೇ ತಂದೆ-ತಾಯಿ ಹಾಗೂ ಗುರು ಹಿರಿಯರನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಭಾರತೀ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಗೋಪಾಲಕೃಷ್ಣ ಹೇಳಿದರು.ತಾಲೂಕಿನ ಕಿರುಗಾವಲು ಭಾರತೀ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ, ಉಚಿತ ಸಮವಸ್ತ್ರ ಹಾಗೂ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಎಲ್ಲರನೂ ಗೌರವಿಸುವ ಜೊತೆಗೆ ನೈತಿಕ ಮೌಲ್ಯ ಬೆಳೆಸಿಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಮುಂದಾಗಬೇಕು ಎಂದರು.
ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ವಿಷಯಗಳಲ್ಲಿಯೇ ಹೆಚ್ಚಿನ ಆಸಕ್ತಿಯಿಂದ ಅಭ್ಯಾಸ ಮಾಡುವ ಮೂಲಕ ಉತ್ತಮ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು. ಎಲ್ಲ ವಿಭಾಗಗಳಲ್ಲೂ ಭವಿಷ್ಯದ ದಾರಿಗೆ ಬೇಕಾದ ಆಯ್ಕೆಗಳಿವೆ. ಓದಿನಲ್ಲಿ ಸಮಯ ಪಾಲನೆ ಬಹಳ ಮುಖ್ಯ. ಪ್ರತಿದಿನ ಇಂತಿಷ್ಟು ಗಂಟೆಯಂತೆ ಅಭ್ಯಾಸ ಮಾಡಬೇಕು. ಉಪನ್ಯಾಸಕರೊಂದಿಗೆ ಮುಕ್ತ ವಾತಾವರಣ ಸೃಷ್ಟಿಗೊಳ್ಳಬೇಕು ಎಂದರು.ಜಿಪಂ ಮಾಜಿ ಸದಸ್ಯೆ ಸುಜಾತಾ ಕೆ.ಎಂ.ಪುಟ್ಟು ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳವ ಜೊತೆಗೆ ಸೇವಾ ಮನೊಭಾವನೆ ಬೆಳೆಸಿಕೊಳ್ಳಬೇಕು. ಇದರೊಂದಿಗೆ ಜನರ ಸೇವೆಗೆ ಮುಂದಾಗಬೇಕು ಎಂದರು.
ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಮುಖಂಡ ಕೆ.ಎಂ.ಬಾಲಚಂದ್ರ ಸಮವಸ್ತ್ರ ಹಾಗೂ ಹೊಸಕೊಪ್ಪಲಿನ ತಿಬ್ಬಣ್ಣ ದಂಪತಿ ನೋಟ್ ಬುಕ್ ವಿತರಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ರಾಚಪ್ಪಾಜಿ ಅಧ್ಯಕ್ಷತೆ ವಹಿಸಿದರು. ಉಪನ್ಯಾಸಕರಾದ ಬಿ.ಬಸವಲಿಂಗೇಗೌಡ, ಸೋಮಶೇಖರ್, ಮಂಜು, ಪತ್ರಕರ್ತ ಟಿ.ಕೆ.ಲಿಂಗರಾಜು ಪಾಲ್ಗೊಂಡಿದ್ದರು.ರಾಷ್ಟ್ರಮಟ್ಟದ ಜೂನಿಯರ್ ಐಸ್ ಸ್ಕೇಟಿಂಗ್ ಗೆ ದುವನ್ ಗೌಡ ಆಯ್ಕೆ
ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನ ಹಿರೇಮರಳಿ ಗ್ರಾಮದ ಅರುಣ್‌ಗೌಡ ಮತ್ತು ಚಂದ್ರಕಲಾ ದಂಪತಿ ಪುತ್ರ ದುವನ್‌ಗೌಡ ರಾಷ್ಟ್ರಮಟ್ಟದ ಜೂನಿಯರ್ ಐಸ್ ಸ್ಕೇಟಿಂಗ್‌ನಲ್ಲಿ ಆಯ್ಕೆಯಾಗುವ ಮೂಲಕ ಆ.20 ರಂದು ಉತ್ತರಖಾಂಡದ ಡೆಹರ್‌ಡೂನ್‌ನಲ್ಲಿ ನಡೆಯುವ ಏಷಿಯನ್ ಚಾಂಪಿಯನ್ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ರೋಲರ್ ಸ್ಕೇಟಿಂಗ್ ಕ್ಲಬ್‌ನ ಮುರುಳಿ ಅವರ ಬಳಿ 3 ವರ್ಷಗಳ ತರಬೇತಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗಳಿಸಿಕೊಂಡಿದ್ದ ದುವನ್‌ಗೌಡ ಅವರು ಸದ್ಯ ಮೈಸೂರಿನ ರಾವ್ ಸ್ಕೇಟಿಂಗ್ ಕ್ಲಬ್‌ನ ಶ್ರೀಕಾಂತ್ ರಾವ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.ಅಂತಾರಾಷ್ಟ್ರೀಯ ಐಸ್ ಸ್ಕೇಂಟಿಗ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ದುವನ್‌ಗೌಡ ಅವರ ಸಾಧನೆಗೆ ಆತನ ಪಾಲಕರು, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಪ್ರಶಂಸೆ ವ್ಯಕ್ತಪಡಿಸಿ ಏಷಿಯನ್ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನದ ಪದಕ ಗೆದ್ದು ಬರಲಿ ಎಂದು ಆಶಿಸಿದ್ದಾರೆ.