ಹಿರಿಯರನ್ನು ಗೌರವಿಸುವುದು ಉತ್ತಮ ಕಾರ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

| Published : May 09 2025, 12:33 AM IST

ಹಿರಿಯರನ್ನು ಗೌರವಿಸುವುದು ಉತ್ತಮ ಕಾರ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Share this Article
  • FB
  • TW
  • Linkdin
  • Email

ಸಾರಾಂಶ

ಹೊರನಾಡು, ಹಿರಿಯರನ್ನು ಗೌರವಿಸುವುದು ಒಳ್ಳೆಯ ಕಾರ್ಯ, ಅವರನ್ನು ನೆನಪು ಮಾಡಿಕೊಳ್ಳುವ ಜತೆಗೆ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯ ಪಟ್ಟರು.

ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್-ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಕಂಚಿನ ಪುತ್ಧಳಿ ಅನಾವರಣ

ಕನ್ನಡಪ್ರಭ ವಾರ್ತೆ, ಹೊರನಾಡು

ಹಿರಿಯರನ್ನು ಗೌರವಿಸುವುದು ಒಳ್ಳೆಯ ಕಾರ್ಯ, ಅವರನ್ನು ನೆನಪು ಮಾಡಿಕೊಳ್ಳುವ ಜತೆಗೆ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯ ಪಟ್ಟರು.

ಕಳಸ ತಾಲೂಕಿನ ಹೊರನಾಡು ಆಧಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಆವರಣದಲ್ಲಿ ಗುರುವಾರ ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಕಂಚಿನ ಪುತ್ಥಳಿ ಅನಾವರಣ ಗೊಳಿಸಿ ನಂತರ ಲಲಿತಾ ಕಲಾಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ಕ್ಷೇತ್ರದಲ್ಲಿ ಜಿ. ಭೀಮೇಶ್ವರ ಜೋಷಿಯವರ ಅಜ್ಜ ದಿ.ಡಿ.ಬಿ.ವೆಂಕಸುಬ್ಬಾ ಜೋಯಿಸ್ ಮತ್ತು ಅವರ ಧರ್ಮಪತ್ನಿ ನರಸಮ್ಮ ಅವರ ಪ್ರತಿಮೆ ಲೋಕರ್ಪಣೆ ಮಾಡುವ ಭಾಗ್ಯ ನನಗೆ ದೊರಕಿದೆ. ಅವರ ವ್ಯಕ್ತಿತ್ವ ಮತ್ತು ಕಾಲಜ್ಞಾನದ ಬಗ್ಗೆ ಪುಸ್ತಕದಲ್ಲಿ ಪ್ರಕಟವಾಗಿದ್ದು ನೋಡಿದ್ದೇನೆ ಎಂದರು.

ಕೇಂದ್ರದ ಸಂಸ್ಕೃತಿ ಮತ್ತು ಪ್ರವಾಸೋಧ್ಯಮ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ಮಾತನಾಡಿ. ಭದ್ರ ನದಿ ತಟದಲ್ಲಿರುವ ಶ್ರೀ ಕ್ಷೇತ್ರ, ಭವ್ಯ ದಿವ್ಯ ತೀರ್ಥಸ್ಥಳ ಹೊರನಾಡಿನ ಪುಣ್ಯಭೂಮಿಯಲ್ಲಿ ಮಾತೆ ಆಶಿರ್ವಾದ ಪಡೆದಿರುವುದು ನನ್ನ ಪುಣ್ಯ, ನಮ್ಮ ಭಾರತ ದೇಶ ವಿವಿಧ ರೀತಿಯ ಸಂಸ್ಕೃತಿ ಹೊಂದಿದೆ. ಆದಿಗುರು ಶಂಕರಾಚಾರ್ಯರು ಜನಿಸಿದ ನಾಡು, ಭಾರತದ ಸನಾತನ ಸಂಸ್ಕೃತಿಯನ್ನು ಹೊಂದಿದೆ ಎಂದು ಹೇಳಿದರು.

ಸನಾತನ ಧರ್ಮ, ಸಾಧು ಪರಂಪರೆಯ ದೇಶ ನಮ್ಮದು ನಾನು ಸೌಭಾಗ್ಯ ಶಾಲಿಯಾಗಿದ್ದೇನೆ. ಶ್ರೀಕ್ಷೇತ್ರದ ಧರ್ಮಕರ್ತರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕ್ಷೇತ್ರಗಳೆಂದರೆ ಹೇಗಿರಬೇಕೆಂಬುದನ್ನು ನಿರೂಪಿಸಿದ್ದಾರೆ. ಇತರೆ ಮಂದಿರಗಳು ಬರಿ ಪೂಜೆಯ ಕೇಂದ್ರವಾಗದೆ ಸಾಮಾಜಿಕ ಕಾರ್ಯಗಳಲ್ಲಿ ತೊಡೆದುಕೊಳ್ಳಬೇಕು ಎಂದರು.

ಕರ್ನಾಟಕ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ.ಬಿ.ಎಲ್‌. ಶಂಕರ್, ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಅವರಿಗೆ ನುಡಿ ನಮನ ಸಲ್ಲಿಸಿ ಎಲ್ಲಿ ತಪಸ್ಸಿನ ಫಲದ ಕಾರಣ ಇಂದು ದೇವಾಲಯ ಹತ್ತು ಹಲವಾರು ಜನಪಯೋಗಿ ಕಾರ್ಯಗಳನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಇಡೀ ನಾಡಿಗೆ ಅನ್ನಾ ಕೊಡುವ ದೇವಿ ಶ್ರೀ ಆಧಿಶಕ್ತ್ಯತ್ಮಕ ಅನ್ನಪೂರ್ಣೆಶ್ವರಿ ಅಮ್ಮನವರು. ವೆಂಟಸುಬ್ಬಾ ಜೋಯಿಸ್ ಒಬ್ಬ ಕಾಲಜ್ಞಾನಿಯಾಗಿದ್ದರು. ಅಪಾರ ಪಾಂಡಿತ್ಯ ಪಡೆದಿದ್ದರು. ಆರ್ಯುವೇದ ಪಂಡಿತರಾಗಿದ್ದರಲ್ಲದೆ, ಸಾಂಸ್ಕೃತಿಕ ಲೋಕದ ಬಗ್ಗೆ ಕಾಳಜಿ ಇತ್ತು. ಅಂಟಿಕೆ ಪಿಂಠಿಕೆ , ಅಂದಿನ ಕಾಲದಲ್ಲೆ ಅನ್ನದಾಸೋಹ ಪ್ರಾರಂಭಿಸಿದ್ದು, ಇಂದಿಗೂ ನಡೆದುಕೊಂಡು ಬರುತ್ತಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಹರಿಹರ ಪೀಠದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷೀನರಸಿಂಹ ಪೀಠಂನ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮಿ ಶ್ರೀ ಅನ್ನಪೂರ್ಣಾ ಪಾದ ಸೇವಾ ದುರಂಧರ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ ಶ್ರೀ ಕ್ಷೇತ್ರದ ಧರ್ಮಕರ್ತರಾದ ಜಿ.ಭಿಮೇಶ್ವರ ಜೋಷಿ ಕುಟುಂಬ ಪಿತೃ ಋಣಾ ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಐದು ಋಣಗಳಿವೆ. ಅದರಲ್ಲಿ ಮೊದಲನೆಯದೇ ಪಿತೃಋಣ, ವೆಂಕಟಸುಬ್ಬಾ ಜೋಯಿಸ್ ಅವರು ಐದನೆಯ ಧರ್ಮಕರ್ತರಾಗಿ ಶ್ರೀಕ್ಷೇತ್ರ ಎಂದರೇ ಏನು ಎಂಬುವುದನ್ನು ತೋರಿಸುವ ಮೂಲಕ ಅಂದಿನ ಕಾಲದಲ್ಲಿ ಶಾಲಾ ಮಕ್ಕಳಿಗೆ ಅನ್ನದಾಸೋಹದಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರೊಂದಿಗೆ ಪ್ರತಿಯೊಬ್ಬರಿಗೂ ಜೀವನ ಎಂದರೇ ಏನು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶವನ್ನು ಮುಂದಿನ ಪೀಳಿಗೆಗೆ ನೆನಪಿಸುವ ನಿಟ್ಟಿನಲ್ಲಿ ಜಿ.ಭೀಮೇಶ್ವರ ಜೋಷಿ ತಮ್ಮ ಅಜ್ಜಾ ಅಜ್ಜಿಯ ಪುತ್ಥಳಿ ನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಶ್ರೀ ಕ್ಷೇತ್ರದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ, ಉನ್ನತ ಜೀವನ ನಡೆಸಿದ ಅಜ್ಜನ ಪುತ್ಥಳಿ ಅನಾವರಣ ಮಾಡುವ ಒಂದು ಅವಕಾಶ ತಮಗೆ ದೊರಕಿದೆ. ಅವರು ಹಾಕಿ ಕೊಟ್ಟ ಹೆಜ್ಜೆಯಲ್ಲಿ ಸಾಗಿಸುತ್ತಾ ಮುನ್ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.

ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ಅವರಿಗೆ ಸೇನೆಗಾಗಿ ಕ್ಷೇತ್ರದಿಂದ ₹10 ಲಕ್ಷ ದ ಚೆಕ್ಕನ್ನು ನೀಡಲಾಯಿತು.

ಗ್ರಾಮೀಣಾಭೀವೃದ್ಧಿ ಯೋಜನೆಯಡಿ ಉಚಿತ ಹೆಂಚುಗಳ ವಿತರಣೆ, ಆನಂದ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಪತ್ರ ವಿತರಣೆ, ಕೃಷಿ ಸಮೃದ್ಧಿ ಯೋಜನೆಯಲ್ಲಿ ಕೃಷಿ ಉಪಕರಣಗಳ ವಿತರಣೆ, ಮಹಿಳಾಭಿವೃದ್ಧಿ ಯೋಜನೆಯಡಿ ಹೊಲಿಗೆ ಯಂತ್ರಗಳ ವಿತರಣೆ ಮಾಡಲಾಯಿತು.ವೇದಿಕೆಯಲ್ಲಿ ರಾಜಲಕ್ಷ್ಮೀ ಬಿ. ಜೋಷಿ, ವಿಶ್ವೇಶ್ವರ ಭಟ್, ಮಾಜಿ ಸಚಿವೆ ಮೋಟಮ್ಮ, ಸಿ.ಟಿ.ರವಿ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಉಪಸ್ಥಿತರಿದ್ದರು. ರಾಮನಾರಾಯಣ್ ಜೋಷಿ ಸ್ವಾಗತಿಸಿದರು. ರಾಜಗೋಪಾಲ್ ಜೋಷಿ ವಂದಿಸಿದರು.

8 ಕೆಸಿಕೆಎಂ 1ಹೊರನಾಡಿನ ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಕಂಚಿನ ಪುತ್ಥಳಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನಾವರಣಗೊಳಿಸಿದರು. ಡಾ.ಜಿ.ಭೀಮೇಶ್ವರ ಜೋಷಿ, ರಾಜಲಕ್ಷ್ಮೀ ಬಿ. ಜೋಷಿ, ನಯನಾ ಮೋಟಮ್ಮ ಇದ್ದರು.