ಸಾರಾಂಶ
ಮೊಳಕಾಲ್ಮುರು ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿದರು.
76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿಕೆಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಸಮಾನತೆ ಮತ್ತು ಸಹಬಾಳ್ವೆಯನ್ನು ಕಲ್ಪಿಸಿರುವ ದೇಶದ ಸಂವಿದಾನ ಈ ನೆಲದ ಪವಿತ್ರ ಗ್ರಂಥವಾಗಿದೆ. ಸಂವಿಧಾನವನ್ನು ಗೌರವಿಸಿ ಆರಾದಿಸುವುದು ದೇಶದ ನಾಗರಿಕರ ಆದ್ಯ ಕರ್ತವ್ಯ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಜರುಗಿದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ದೇಶ ಸ್ವತಂತ್ರಗೊಂಡ ಸಂದರ್ಭದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ರಚಿಸುವ ಮೂಲಕ ಸರ್ವರಿಗೂ ಮೂಲಭೂತ ಹಕ್ಕುಗಳನ್ನು ನೀಡಿ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಸರ್ವರಿಗೂ ಮೂಲಭೂತ ಹಕ್ಕುಗಳು, ಕರ್ತವ್ಯ ಜತಗೆ ಸಮಾನತೆಯನ್ನ ಕಲ್ಪಿಸಿಕೊಟ್ಟು ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಅವರ ಆಶಯದಂತೆ ಪ್ರತಿಯೊಬ್ಬರು ಸೌಹಾರ್ಧತೆ ಹಾಗು ಸಹಬಾಳ್ವೆಯಿಂದ ಬಾಳಬೇಕೆಂದು ಹೇಳಿದರು.ಗಣರಾಜ್ಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು ಜಾತ್ಯಾತೀತ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಮಕ್ಕಳಿಗೆ ಸಂವಿದಾನದ ಆಶಯಗಳನ್ನು ತಿಳಿಸಬೇಕು. ಅದರ ಮಹತ್ವವನ್ನು ಅರಿತು ಕೊಳ್ಳುವಂತೆ ಅರಿವನ್ನು ಮೂಡಿಸಬೇಕು. ಬಾಬಾ ಸಾಹೇಬರ ಸಂದೇಶಗಳನ್ನು ಪಾಲಿಸುವ ಮೂಲಕ ಸಧೃಡ ರಾಷ್ಟ್ರ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ತಹಸೀಲ್ದಾರ್ ಟಿ.ಜಗದೀಶ್ ಮಾತನಾಡಿ, ಇಡೀ ವಿಶ್ವವೇ ಗುರುತಿಸುವಂತಿರುವ ರಾಷ್ಟ್ರದ ಸಂವಿದಾನದ ಇಡೀ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆಯನ್ನು ಕಲ್ಪಿಸಿದೆ. 18 ವರ್ಷ ತುಂಬಿದ ಪ್ರತಿ ನಾಗರಿಕರಿಗೂ ಮತ ನೀಡುವ ಅಧಿಕಾರ ನೀಡಿದೆ. ಭಾರತದ ಸಾರ್ವಬೌಮತೆಗೆ ದಕ್ಕೆಯಾಗದಂತೆ ಬಾಳಬೇಕು. ಜಾತಿ,ಧರ್ಮ ವರ್ಗ ಎನ್ನದೆ ಸರ್ವರೂ ಸಹಬಾಳ್ವೆಯಿಂದ ಬಾಳಬೇಕು. ದೇಶದ ಸಂವಿಧಾನ ವ್ಯವಸ್ಥೆಯನ್ನು ಗೌರವಿಸಬೇಕೆಂದು ಹೇಳಿದರು.ಪಟ್ಟಣದ ವಿವಿಧ ಶಾಲೆಯ ಮಕ್ಕಳು ಪಥಸಂಚನದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು. ರಾಷ್ಟ್ರಭಕ್ತಿಯನ್ನು ಸಾರುವ ಗೀತೆಗಳಿಗೆ ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ಆಕರ್ಷಕ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಪಿಎಸ್ಐ ಪಾಂಡುರಂಗಪ್ಪ ನೇತೃತ್ವದ ತಂಡ ಶಾಸಕರಿಗೆ ಗೌರವ ವಂದನೆ ಸಲ್ಲಿಸಿತು. ಕಾರ್ಯಕ್ರಮದಲ್ಲಿ ಸಿಪಿಐ ವಸಂತ ವಿ. ಅಸೋದೆ, ಬಿಇಒ ನಿರ್ಮಲಾ ದೇವಿ, ಪಶು ಇಲಾಖೆ ಎಡಿ ಡಾ.ರಂಗಪ್ಪ, ಪ.ಪಂ.ಅಧಕ್ಷೆ ಲೀಲಾವತಿ ಸಿದ್ದಣ್ಣ, ಸದಸ್ಯರಾದ ಖಾದರ್, ಅಬುಲ್ಲಾ, ಪ್ರಾಂಶುಪಾಲ ಗೋವಿಂದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಉಲ್ಲಾ, ಮುಖಂಡರಾದ ಜಿ.ಪ್ರಕಾಶ್, ಎಂ.ಒ. ಮಂಜುನಾಥ ಸ್ವಾಮಿ ನಾಯಕ, ಗೋವಿಂದಪ್ಪಇದ್ದರು.