ಸಾರಾಂಶ
ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಶಿಲ್ಪಿಗಳಾಗಿ ನಿರ್ಮಾಣವಾಗಲು ಗುರುಗಳ ಸತತ ಪ್ರಯತ್ನ, ನಿರಂತರ ಶ್ರಮದಿಂದ ಸಾಧ್ಯ
ಯಲಬುರ್ಗಾ: ಪ್ರತಿಯೊಬ್ಬರೂ ಗುರು ಹಿರಿಯರಿಗೆ ಗೌರವ ನೀಡುವ ಮೂಲಕ ಸಂಸ್ಕಾರ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಮುಖ್ಯಶಿಕ್ಷಕ ಶರಣಪ್ಪಗೌಡ ಗೌಡ್ರ ಹೇಳಿದರು.
ತಾಲೂಕಿನ ದಮ್ಮೂರು ಗ್ರಾಮದ ಶ್ರೀಭೀಮಾಂಬಿಕಾದೇವಿ ಮಠದಲ್ಲಿ 377ನೇ ಶಿವಾನುಭವ ಗೋಷ್ಠಿಯಲ್ಲಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಚಿಂತನಾ ವಿಷಯದ ಕುರಿತು ಮಾತನಾಡಿದರು.ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಶಿಲ್ಪಿಗಳಾಗಿ ನಿರ್ಮಾಣವಾಗಲು ಗುರುಗಳ ಸತತ ಪ್ರಯತ್ನ, ನಿರಂತರ ಶ್ರಮದಿಂದ ಸಾಧ್ಯವಿದೆ.ಇದರಲ್ಲಿ ಗುರುವಿನ ಪಾತ್ರ ಮುಖ್ಯವಾದದ್ದು ಎಂದರು.
ಮುಖಂಡ ಮಹಮ್ಮದ್ ರಶೀದ್‌ಖಾಜಿ ಮಾತನಾಡಿ, ಕತ್ತಲಿನಿಂದ ಬೆಳಕಿನಡೆಗೆ ಬರಲು ಗುರುವಿನ ಆಶೀರ್ವಾದ, ಮಾರ್ಗದರ್ಶನ ಬೇಕು. ಜೀವನದಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಲು ಗುರುವಿನ ಮಾರ್ಗದರ್ಶನ ಅಗತ್ಯವಿದೆ ಎಂದರು.ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ. ದಾನಕೈ ಮಾತನಾಡಿದರು.
ದಮ್ಮೂರಿನ ಕಲಾವಿದ ಡಾ. ಪ್ರಕಾಶ ರ್ಯಾವಣಕಿ ವಿರಚಿತ ಮುತ್ತಿನಂತ ಅತ್ತಿಗೆ ಅರ್ಥಾತ್ ಸಿಹಿ ಮುತ್ತಿನ ಕಾಣಿಕೆ ಎಂಬ ನಾಟಕದ ಪುಸ್ತಕ ಬಿಡುಗಡೆಗೊಳಿಸಲಾಯಿತು. ಹನುಮಂತಪ್ಪಜ್ಜ ಧರ್ಮರ, ಶರಣಯ್ಯ ಗುರುವಿನ ಸಾನ್ನಿಧ್ಯ ವಹಿಸಿದ್ದರು.ಈ ಸಂದರ್ಭ ಕಲಾವಿದರಾದ ಡಿ. ಮೌನೇಶ ಬಡಿಗೇರ, ಡಾ. ಪ್ರಕಾಶ ರ್ಯಾವಣಕಿ, ಚಂದಪ್ಪ ಜಕ್ಕಲಿ, ವಿರೂಪಣ್ಣ ಹಳ್ಳಿಕೇರಿ, ಮೇಘರಾಜ ಕುಡಗುಂಟಿ, ವೀರಪ್ಪ ರ್ಯಾವಣಕಿ, ಯಮನೂರ್‌ಸಾಬ್ ಗುಳೇದಗುಡ್ಡ, ಮಂಜುನಾಥ ಹಳ್ಳಿಕೇರಿ, ಪಡಿಯಪ್ಪ ಹರಿಜನ, ಕಳಕಪ್ಪ ಹಡಪದ, ಭೀಮಣ್ಣ ಚಿಕ್ಕಗೌಡ್ರು, ಯಮನೂರಪ್ಪ ಹಳ್ಳಿಕೇರಿ, ಯಲ್ಲಪ್ಪ ಟಕ್ಕಳಕಿ, ಶರಣಗೌಡ ದ್ಯಾಮನಗೌಡ್ರ, ರಮೇಶ ಚಿಕ್ಕಗೌಡ್ರ ಸೇರಿದಂತೆ ಇತರರು ಇದ್ದರು.