ಸಾರಾಂಶ
ಗ್ರಾಮೀಣ ಗೃಹ ಬಳಕೆಯ ವಿದ್ಯುತ್ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ, ಸಮಸ್ಯೆ ಬಗೆಹರಿಸಬೇಕೆಂದು ಬೆಸ್ಕಾಂ ಎಇಇ ಸಿ.ನಾಗರಾಜ್ ನಾಯ್ಕ್ ಅಧಿಕಾರಿಗಳಿಗೆ ಹರಿಹರದಲ್ಲಿ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಹರಿಹರ
ಗ್ರಾಮೀಣ ಗೃಹ ಬಳಕೆಯ ವಿದ್ಯುತ್ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ, ಸಮಸ್ಯೆ ಬಗೆಹರಿಸಬೇಕೆಂದು ಬೆಸ್ಕಾಂ ಎಇಇ ಸಿ.ನಾಗರಾಜ್ ನಾಯ್ಕ್ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಉಪ ವಿಭಾಗ ಕಚೇರಿಯಲ್ಲಿ ಶನಿವಾರ ನಡೆದ ಗ್ರಾಹಕರ ಸಂವಾದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಗಾಲ ಆರಂಭ ಆಗಿರುವುದರಿಂದ ಮಳೆ-ಗಾಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಪದೇಪದೇ ವಿದ್ಯುತ್ ವ್ಯತ್ಯಯವಾಗುವ ಸಂಭವ ಇರುತ್ತದೆ. ಆದ್ದರಿಂದ ತಕ್ಷಣ ಸ್ಥಳಕ್ಕೆ ಧಾವಿಸಿ, ದುರಸ್ತಿಪಡಿಸಲು ಆದ್ಯತೆ ನೀಡಬೇಕೆಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನಲ್ಲಿ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು ಸರಾಸರಿ ₹೩.೨೫ ಕೋಟಿ ಮೌಲ್ಯದ ವಿದ್ಯುತ್ ನೀಡಲಾಗುತ್ತಿದೆ. ಕಳೆದ ಹತ್ತು ತಿಂಗಳಿನಿಂದ ಅಂದಾಜು ₹೩೫ ಕೋಟಿಯಷ್ಟು ವಿದ್ಯುತ್ ಸಾರ್ವಜನಿಕರಿಗೆ ನೀಡಲಾಗಿದೆ ಎಂದರು.ಸಹಾಯಕ ಎಂಜಿನಿಯರ್ ಎಂ.ಮಾರ್ಕಂಡೇಯ, ಕಿರಿಯ ಎಂಜಿನಿಯರ್ ಮಹಾವೀರ್ ಬೋಗಾರ್, ಸಹಾಯಕ ಲೆಕ್ಕಾಧಿಕಾರಿ ನಾಗರಾಜ್, ಗ್ರಾಹಕರಾದ ಖಲೀಮುಲ್ಲಾ, ಜಿಲಾನಿ, ಅಬ್ದುಲ್ ರಹಮಾನ್, ಅರುಣ್ ಕುಮಾರ್, ಕೆ.ಸಿ. ರಾಕೇಶ್, ಎಸ್.ಎಂ. ಮಂಜುನಾಥ್ ಇತರರಿದ್ದರು.
- - - -೧೫ಎಚ್‌ಆರ್‌ಆರ್೨:ಹರಿಹರ ನಗರದ ಉಪ ವಿಭಾಗ ಕಚೇರಿಯಲ್ಲಿ ಶನಿವಾರ ಗ್ರಾಹಕರ ಸಂವಾದ ಸಭೆ ನಡೆಯಿತು.