ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿ:ಕೆ.ಎನ್‌.ರಾಜಣ್ಣ

| Published : Nov 07 2024, 12:01 AM IST

ಸಾರಾಂಶ

ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದಾಗ ಸಮಸ್ಯೆಗಳೇ ಇರುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದಾಗ ಸಮಸ್ಯೆಗಳೇ ಇರುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

ಪಟ್ಟಣದ 1ನೇ ವಾರ್ಡಿನಿಂದ 8ನೇ ವಾರ್ಡ್‌ವರೆಗೆ ಬುಧವಾರ ಇದೇ ಪ್ರಥಮ ಬಾರಿಗೆ ಜನರ ಮನೆ ಬಾಗಿಲಿಗೆ ಪಾದಯಾತ್ರೆ ಮೂಲಕ ತೆರಳಿ ಮಾತನಾಡಿದರು.

ಕೆಲವು ವೃದ್ಧರಿಗೆ ವೃದ್ಧಾಪ್ಯ ವೇತನ, ಮಾಸಿಕ ವೇತನದ ಆದೇಶ ಪ್ರತಿ ವಿತರಿಸಿ, ಯುಜಿಡಿ ಕಾಮಗಾರಿಯಿಂದಾಗಿ ತಲೆ ದೂರಿರುವ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚುವಂತೆ ಯುಜಿಡಿ ಎಂಜಿನಿಯರ್‌ನ್ನು ತರಾಟೆಗೆ ತೆಗೆದುಕೊಂಡರು. ಪುರಸಭೆ ಅಧಿಕಾರಿಗಳು ಎಲ್ಲ ಮನೆಗಳಿಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸಬೇಕು. ಮೂಲಭೂತ ಸೌಲಭ್ಯಗಳಿಗೆ ಮೊದಲ ಆದ್ಯತೆ ನೀಡುವಂತೆ ಮುಖ್ಯಾಧಿಕಾರಿ ಸುರೇಶ್‌ಗೆ ಸೂಚಿಸಿದರು.

5ನೇ ವಾರ್ಡಿನಲ್ಲಿರುವ ಮೆಟ್ರಿಕ್‌ ಪೂರ್ವ ಬಾಲಕಿಯರ ಹಾಸ್ಟಲ್‌ಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿದರು. ಮೆನು ಚಾರ್ಟ್‌ ಪ್ರಕಾರ ಮಕ್ಕಳಿಗೆ ತಿಂಡಿ, ಊಟ ನೀಡುವ ಜೊತೆಗೆ ವೈದ್ಯಕೀಯ ತಪಾಸಣೆ ಕಡ್ಡಾಯವಾಗಿ ಮಾಡಿಸಬೇಕು ಎಂದರು.ಕೊರಟೆಗೆರೆ ಏಕಲವ್ಯ ವಸತಿ ಶಾಲೆಯಲ್ಲಿ ಇತ್ತೀಚಿಗೆ ಮೃತಪಟ್ಟಿರುವ ಬಾಲಕನ ತಾಯಿ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರಿಂದ ಎಫ್‌ಐಆರ್‌ ದಾಖಲಾಗಿದೆ. ಬಾಲಕನ ಮರಣೋತ್ತರ ಪರೀಕ್ಷೆ ಬಂದ ನಂತರ ಕಾನೂನು ಕ್ರಮ ಕೈಗೊಂಡು ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಯಾನಿಂಗ್‌ ಮಿಷನ್‌ ಇದ್ದರೂ ಸಹ ನುರಿತ ತಜ್ಞರಿಲ್ಲದೆ ಭಣಗುಡುತ್ತಿದೆ. ಜೊತೆಗೆ ಆಸ್ಪತ್ರೆಯಲ್ಲಿ ಡಯಾಲೀಸಿಸ್‌ ಯಂತ್ರಕ್ಕೂ ತಜ್ಞರಿಲ್ಲ. ಆಸ್ಪತ್ರೆ ಮಹಡಿ ಕಟ್ಟಡ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ಸ್ಥಗಿತಗೊಂಡಿದ್ದು ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧ ಪಟ್ಟ ಇಲಾಖೆ ಮೇಲಾಧಿಕಾರಿ, ಸಚಿವರ ಜೊತೆ ಚರ್ಚಿಸಿದ್ದೇನೆ. ಶೀಘ್ರದಲ್ಲೇ ವೈದ್ಯರು ಮತ್ತು ಖಾಲಿ ಇರುವ ಸಿಬ್ಬಂದಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಎಂಎಲ್ಲಿ ಆರ್‌.ರಾಜೇಂದ್ರ ರಾಜಣ್ಣ, ಎಸಿ ಗೋಟೂರು ಶಿವಪ್ಪ, ಲಾಲಪೇಟೆ ಮುಂಜುನಾಥ್‌, ಸುಜಾತ ಶಂಕರನಾರಾಯಣ್‌, ಸುರೇಶ್‌, ಎಂ.ಕೆ.ನಂಜುಂಡರಾಜು, ಆಲೀಮ್‌, ಸಾಧಿಕ್‌, ಎಂ.ವಿ.ಗೋವಿಂದರಾಜು, ನಟರಾಜು, ಎಸ್‌ಬಿಟಿ ರಾಮು,ಗಂಡಣ್ಣ, ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಎನ್‌.ಗಂಗಣ್ಣ, ದಿನೇಶ್‌, ಸುರೇಶ್‌, ಹನುಮಂತರಾಯಪ್ಪ, ರಾಜ್‌ಗೋಪಾಲ್‌ ಇದ್ದರು.