ಸಾರಾಂಶ
ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ 61ನೇ ಜನ್ಮ ನಕ್ಷತ್ರದ ಅಂಗವಾಗಿ ಮಂಗಳೂರಿನ ಶರವು ದೇವಸ್ಥಾನ ಬಳಿಯ ಬಾಳಂಭಟ್ ಸಭಾಂಗಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಪೇಜಾವರ ಸ್ವಾಮೀಜಿ 61ನೇ ಜನ್ಮ ನಕ್ಷತ್ರ ಪ್ರಯುಕ್ತ ವಿವಿಧ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಮಂಗಳೂರು
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ 61ನೇ ಜನ್ಮ ನಕ್ಷತ್ರದ ಅಂಗವಾಗಿ ನಗರದ ಶರವು ದೇವಸ್ಥಾನ ಬಳಿಯ ಬಾಳಂಭಟ್ ಸಭಾಂಗಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸಮಾಜದ ಸಂಕಷ್ಟಕ್ಕೆ ಸ್ಪಂದಿಸುತ್ತ ಆಪತ್ಕಾಲದಲ್ಲಿ ತಮ್ಮಿಂದಾದ ಸಹಾಯ ಮಾಡುವ ಸೇವೆಯೇ ನಿಜವಾದ ಭಗಂವತನ ಸೇವೆ ಎಂದು ಹೇಳಿದರು.
ವಿವಿಧ ಸ್ತರಗಳಲ್ಲಿ ಸಮಾಜಸೇವೆ ಮಾಡುವ ಅವಕಾಶಗಳಿವೆ. ಗೋಶಾಲೆ, ಗೋ ಸಂರಕ್ಷಣೆ ನಿರಂತರವಾಗಿ ನಡೆಯಬೇಕು. ಗೋ ಸಾಕುವುದೆಲ್ಲಿ ಎಂಬುದು ಮುಖ್ಯವಲ್ಲ, ಗೋ ಪ್ರೇಮ ಬೆಳೆದಾಗ ಇದು ಸಾಧ್ಯವಾಗುತ್ತದೆ. ತಮ್ಮ ಮನೆ, ಸಂಸ್ಥೆಯ ಪರಿಸರದ ಇತಿಮಿತಿಯಲ್ಲಿಯೇ ಒಂದೆರಡು ಗೋವುಗಳನ್ನು ಸಾಕಲು ಸಾಧ್ಯವಿದೆ. ಇದು ಪರಿಸರಕ್ಕೂ ಪೂರಕ. ಹಾಲಿಗಾಗಿ ಅಲ್ಲದಿದ್ದರೂ ಪರಿಸರ ಸಂರಕ್ಷಣೆಗಾಗಿಯಾದರೂ ಗೋವು ಸಾಕುವ ಪರಿಪಾಠ ಬೆಳೆಯಲಿ ಎಂದು ಸ್ವಾಮೀಜಿ ಆಶಿಸಿದರು.ಸಂವಿಧಾನ ಚೌಕಟ್ಟಿನ ಒಳಗೆ ನಮ್ಮೆಲ್ಲ ಆಚರಣೆ, ಚಿಂತನೆಗಳು ಸಾಗಬೇಕು. ಇದನ್ನೇ ಗುರುಗಳಾದ ಪೇಜಾವರ ಶ್ರೀಗಳು ಸದಾ ಹೇಳುತ್ತಾ ಬಂದಿದ್ದರು. ಅದನ್ನೇ ನಾವೂ ಮುಂದುವರಿಸುತ್ತಿದ್ದೇವೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಡಿ.ವೇದವ್ಯಾಸ ಕಾಮತ್, ಪ್ರಮುಖರಾದ ಆರೂರು ಕಿಶೋರ್ ರಾವ್ ಮತ್ತಿತರರು ಇದ್ದರು. ಶ್ರೀ ವಿಶ್ವಪ್ರಸನ್ನ ತೀರ್ಥರ 61ನೇ ಜನ್ಮ ನಕ್ಷತ್ರ (ಹುಟ್ಟುಹಬ್ಬ) ಸಮಿತಿ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಸ್ವಾಗತಿಸಿದರು. ಸಂಚಾಲಕ ಎಸ್. ಪ್ರದೀಪ ಕುಮಾರ ಕಲ್ಕೂರ ವಂದಿಸಿದರು. ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ ನಿರ್ವಹಿಸಿದರು.