ಸನ್ಮಾನಗಳು ವ್ಯಕ್ತಿಯನ್ನು ಕಾಲಕಾಲಕ್ಕೆ ಎಚ್ಚರಿಸುತ್ತದೆ ಮತ್ತು ಮತ್ತಷ್ಟು ಜವಾಬ್ದಾರಿ ಹೆಗಲಿಗೇರಿಸಿ ಕ್ರಿಯಾಶೀಲರಾಗಿ ಕೆಲಸ ಮಾಡಲು ಪ್ರೇರೇಪಣೆ ನೀಡುತ್ತದೆ ಎಂದು ಗೃಹರಕ್ಷಕದಳ ಮಾಜಿ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಸನ್ಮಾನಗಳು ವ್ಯಕ್ತಿಯನ್ನು ಕಾಲಕಾಲಕ್ಕೆ ಎಚ್ಚರಿಸುತ್ತದೆ ಮತ್ತು ಮತ್ತಷ್ಟು ಜವಾಬ್ದಾರಿ ಹೆಗಲಿಗೇರಿಸಿ ಕ್ರಿಯಾಶೀಲರಾಗಿ ಕೆಲಸ ಮಾಡಲು ಪ್ರೇರೇಪಣೆ ನೀಡುತ್ತದೆ ಎಂದು ಗೃಹರಕ್ಷಕದಳ ಮಾಜಿ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರ್ ಹೇಳಿದರು.ಡಾ.ಮುರಲೀ ಮೋಹನ್ ಚೂಂತಾರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರೆಡ್ ಕ್ರಾಸ್‌ನ ನವದೆಹಲಿ ರಾಷ್ಟ್ರೀಯ ನಿರ್ವಹಣಾ ಸಮಿತಿಗೆ ನೇಮಕಗೊಂಡ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳೂರಿನ ಸರೋಜಿನಿ ಬಾರೆಬೈಲ್ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಸಾಪ ಮಂಗಳೂರು ಅಧ್ಯಕ್ಷ ಮಂಜುನಾಥ ಎಸ್.ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು.ಡಾ.ರಾಜಶ್ರೀ ಮೋಹನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಬೆನೆಟ್ ಅಮ್ಮನ್ನ, ಕೃಷ್ಣಪ್ಪ ನಾಯ್ಕ, ಉಷಾಗಣೇಶ್ ಪ್ರಸಾದ್, ರತ್ನಾವತಿ ಬೈಕಾಡಿ, ನಿಜಗುಣ ದೊಡ್ಡಮನಿ, ಶ್ರೀಕೃಷ್ಣ ಭಟ್ ಚಂಬಲ್ತಿಮಾರ್ ಇದ್ದರು.
ಕಾರ್ಯಕ್ರಮದಲ್ಲಿ ಡಾ.ಚೂಂತಾರ್ ದಂಪತಿಯನ್ನು ಸನ್ಮಾನಿಸಲಾಯಿತು.ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಸ್ವಾಗತಿಸಿದರು. ಕೋಶಾಧಿಕಾರಿ ಎನ್.ಸುಬ್ರಾಯ ಭಟ್ ವಂದಿಸಿದರು.
------