ಸಾರಾಂಶ
ದೊಡ್ಡಬಳ್ಳಾಪುರ: ಜಿಲ್ಲಾದ್ಯಂತ ಜಲ್ ಜೀವನ್ ಮಿಷನ್ ಅನುಷ್ಠಾನ ಪ್ರಾರಂಭಿಸಿ, ಗ್ರಾಮಗಳಲ್ಲಿ ಪ್ರತಿ ಮನೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಿದ್ದು ನೀರಿನ ವ್ಯವಸ್ಥೆಯ ನಿರಂತರ ಕಾರ್ಯಾಚರಣೆ ಮತ್ತು ನಿರ್ವಹಣೆಯ ಉಸ್ತುವಾರಿಯನ್ನು ಗ್ರಾಮ ಪಂಚಾಯತಿಗಳಿಗೆ ವಹಿಸಲಾಗುವುದು ಎಂದು ಜಿಪಂ ಸಿಇಒ ಡಾ. ಕೆ.ಎನ್.ಅನುರಾಧ ಹೇಳಿದರು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪ ಇಲಾಖೆ, ನಲ್ಮ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಇವರ ಸಹಯೋಗದೊಂದಿಗೆ ತಾಲೂಕಿನ ಕಂಟನಕುಂಟೆ ಸರ್ಕಾರಿ ಐ.ಟಿ.ಐ ಕಾಲೇಜಿನಲ್ಲಿ ನಲ್ ಜಲ್ ಮಿತ್ರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದ ಅವರು,ಈ ಕಾರ್ಯಕ್ರಮದಡಿ ಆಯ್ಕೆಯಾಗಿರುವ ಸ್ವಸಹಾಯ ಸಂಘದ ಸ್ಥಳೀಯ ವ್ಯಕ್ತಿಗಳಿಗೆ ಬಹು ಕೌಶಲ್ಯ ತರಬೇತಿಯಡಿ, ಕೊಳಾಯಿ , ವಿದ್ಯುತ್ ಕೆಲಸ, ಕಲ್ಲು ಮಣ್ಣು ಕೆಲಸ, ಉಪಕರಣ ಮತ್ತು ಯಂತ್ರೋಪಕರಣ ರಿಪೇರಿ ಕೆಲಸಗಳ ಬಹುಕೌಶಲ್ಯ ತರಬೇತಿ ನೀಡಿ ವೃತ್ತಿಪರ ಶಿಕ್ಷಣ ಮತ್ತು ರಾಷ್ಟ್ರೀಯ ತರಬೇತಿ ಮಂಡಳಿ (NCVET)ಯ ಪ್ರಮಾಣ ಪತ್ರ ನೀಡುವುದಾಗಿ ಅವರು ಹೇಳಿದರು.
ತಾಪಂ ಇಒ ಎನ್. ಮುನಿರಾಜು ಮಾತನಾಡಿ, ಕಂಟನಕುಂಟೆ ಸರ್ಕಾರಿ ಐಟಿಐ ಕಾಲೇಜು ಪ್ರಾಂಶುಪಾಲ ಪ್ರೊ. ಚಂದ್ರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀಣಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಮಂಜುಳಾ, ದೊಡ್ಡಬಳ್ಳಾಪುರ ತಾಲೂಕು ಸಂಜೀವಿನಿ ಸಿಬ್ಬಂದಿ ಹಾಗೂ 25 ಗ್ರಾಮ ಪಂಚಾಯಿತಿಗಳ ನಲ್ ಜಲ್ ಮಿತ್ರಗೆ ಆಯ್ಕೆಯಾದ ಮಹಿಳಾ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.ಫೋಟೋ-
19ಕೆಡಿಬಿಪಿ2- ದೊಡ್ಡಬಳ್ಳಾಪುರದ ಕಂಟನಕುಂಟೆಯಲ್ಲಿ ನಲ್ ಜಲ್ ಮಿತ್ರ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಡಾ. ಅನುರಾಧ ಚಾಲನೆ ನೀಡಿದರು.