ಬಂದ್‌ ಆಗಿರುವ ಬಸ್‌ ಪುನಾರಂಭಿಸಿ, ಹಾಸ್ಟೆಲ್‌ ಸರಿಪಡಿಸಿ

| Published : Sep 01 2024, 01:54 AM IST

ಬಂದ್‌ ಆಗಿರುವ ಬಸ್‌ ಪುನಾರಂಭಿಸಿ, ಹಾಸ್ಟೆಲ್‌ ಸರಿಪಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸ್ಟೆಲ್‌ ಅವ್ಯವಸ್ಥೆಯನ್ನು ಸರಿಪಡಿಸುವಂತೆಯೂ ದಲಿತ ವಿದ್ಯಾರ್ಥಿ ಪರಿಷತ್‌ ಆಗ್ರಹಿತು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಟ್ಟಣದ ವಸತಿ ನಿಲಯಗಳ ಅವ್ಯವಸ್ಥೆ ಮತ್ತು ಗ್ರಾಮೀಣ ಪ್ರದೇಶಗಳ ಬಸ್ ಸೌಲಭ್ಯಗಳ ಕೊರತೆಯನ್ನು ನೀಗಿಸುವಂತೆ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಮುತ್ತುರಾಜ ಚಲವಾದಿ ನೇತೃತ್ವದಲ್ಲಿ ಶುಕ್ರವಾರ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ಮುದ್ದೇಬಿಹಾಳ ಸಾರಿಗೆ ಘಟಕದಿಂದ ರಾಜ್ಯದ ಪ್ರಮುಖ ನಗರಗಳು ಮತ್ತು ಹೊರ ರಾಜ್ಯಗಳಿಗೆ ಹೋಗುವ ಬಸ್‌ಗಳು ಬಂದ್ ಆಗಿವೆ. ಈಗ ಹೆಚ್ಚಾಗಿ ಸಾರ್ವಜನಿಕರಿಗೆ ಅವಶ್ಯಕ ಮಾರ್ಗಗಳಾದ ಮುದ್ದೇಬಿಹಾಳ-ಮುಂಬೈ, ರತ್ನಗಿರಿ, ವಾಸ್ಕೋ, ಬೆಳಗಿನ ಜಾವ ಹೋಗುವ ಎರಡನೇ ಪುಣೆ ಬಸ್, ಕೊಲ್ಲಾಪುರ ಮಾರ್ಗಗಳು ಬಂದ್ ಆಗಿವೆ. ಇದರಿಂದ ವ್ಯಾಪಾರಸ್ಥರು, ಆಸ್ಪತ್ರೆಗೆ ಹೋಗುವ ರೋಗಿಗಳಿಗೆ, ನೌಕರರಿಗೆ, ದೂರದ ಊರುಗಳಿಗೆ ದುಡಿಯಲು ಹೋಗುವ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಈ ಕೂಡಲೇ ಇವುಗಳನ್ನು ಪುನಃ ಆರಂಭಿಸಲು ಸಂಬಂಧಿಸಿದ ಇಲಾಖೆ ಸೂಚಿಸಬೇಕು ಎಂದು ಒತ್ತಾಯಿಸಲಾಯಿತು.

ಬಸ್ ಅನಾನುಕೂಲ ಬಗ್ಗೆ ಅನೇಕ ಬಾರಿ ಮುದ್ದೇಬಿಹಾಳ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಯವರೆಗೆ ಮಾರ್ಗ ಆರಂಭ ಮಾಡಿಲ್ಲ. ಇದರಿಂದ ಸಾರಿಗೆ ಇಲಾಖೆ ತಪ್ಪಿಗೆ ಬಸ್‌ಗಾಗಿ ಸಾರ್ವಜನಿಕರು ಸಮಯ ವ್ಯರ್ಥ ಮಾಡಬೇಕಾಗಿದೆ. ಅಲ್ಲದೆ ಬಸ್ ನಿಲ್ದಾಣದಲ್ಲಿ ಮಹಿಳೆಯರ ವಿಶ್ರಾಂತಿ ಗೃಹ, ಶೌಚಾಲಯ, ಗುತ್ತಿಗೆ ಪಡೆದ ಗುತ್ತಿಗೆದಾರರು ಶೌಚಾಲಯದಲ್ಲಿ ಹೆಚ್ಚಿಗೆ ಹಣ ಪಡೆಯುತ್ತಿದ್ದಾರೆ ಎಂದು ದೂರಿದರು.

ಶಾಲಾ ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿನಿಯರಿಗೆ ನಿಲ್ದಾಣದಲ್ಲಿ ಕಿಡಿಗೇಡಿಗಳಿಂದ ತೊಂದರೆಯಾಗುತ್ತಿದ. ಅದಕ್ಕಾಗಿ ಪೊಲೀಸರ ನೇಮಿಸಬೇಕು. ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಆಸನದ ಕೊರತೆ, ಆಲಮಟ್ಟಿ ರಸ್ತೆಯ ಸರ್ಕಾರಿ ಪದವಿ ಕಾಲೇಜು ಮುಂದೆ ಬಸ್ ನಿಲುಗಡೆ ಆಗದೆ ಇರುವುದು ಹೀಗೆ ಅನೇಕ ಸಮಸ್ಯೆಗಳು ಸಾರಿಗೆ ಇಲಾಖೆಯಿಂದ ಇವೆ. ಇವುಗಳನ್ನು ಆದಷ್ಟು ಬೇಗ ಪರಿಹರಿಸಬೇಕೆಂದು ಡಿವಿಪಿ ಆಗ್ರಹಿಸಿತು.

ಇನ್ನು ಹುಡ್ಕೋ ಬಡಾವಣೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಊಟದ ತಟ್ಟೆಯ ಕೊರತೆ ಹಾಗೂ ವಸತಿ ನಿಲಯದಲ್ಲಿ ಭದ್ರತೆಯ ಕೊರತೆ, ಮಕ್ಕಳ ಆರೋಗ್ಯ ನಿರ್ವಹಣೆಗೆ ಬರುವ ಕಿಟ್‌ಗಳನ್ನು ನೀಡದೆ ಇರುವುದು, ವಿದ್ಯಾರ್ಥಿಗಳಿಗೆ ಸರಿಯಾದ ಪ್ರಮಾಣದಲ್ಲಿ ಊಟ ನೀಡುತ್ತಿಲ್ಲ. ನಿಜವಾದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ವಿಳಂಬ ಮಾಡಲಾಗುತ್ತಿದೆ. ಇದನ್ನು ಸಂಬಂಧಿಸಿದ ಇಲಾಖೆಗೆ ತಿಳಿಸಬೇಕು. ಜತೆಗೆ ಈಗ ವಿದ್ಯಾರ್ಥಿಗಳು ಎದುರಿಸುತ್ತಿರುವ ಎಲ್ಲ ಸೌಲಭ್ಯಗಳನ್ನು ನೀಡಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಮನವಿ ಸಲ್ಲಿಸಿತು. ಒಂದು ವೇಳೆ ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಸದಿದ್ದರೆ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.

ಈ ವೇಳೆ ಯುವ ಜನ ಸೇನೆ ರಾಜ್ಯಾಧ್ಯಕ್ಷರು ಶಿವಾನಂದ ವಾಲಿ, ಡಿ.ವಿ.ಪಿ ಪದಾಧಿಕಾರಿಗಳಾದ ಸಂಗಮೇಶ ತಳವಾರ, ರಾಹುಲ್ ಕುಂಟೋಜಿ ಉಪಸ್ಥಿತರಿದ್ದರು.