ಸಾರಾಂಶ
ಗಿರಿಯಾಪುರದ ಶ್ರೀಗುರು ಕುಮಾರಶ್ರಮದಲ್ಲಿ ಮನೆ ಅಂಗಳ ದಲ್ಲಿ ಶ್ರಾವಣ ಸಂಭ್ರಮ
ಕನ್ನಡಪ್ರಭ ವಾರ್ತೆ, ಕಡೂರುವಿದ್ಯಾರ್ಥಿಗಳಲ್ಲಿ ಸಂಯಮ, ಸಂಸ್ಕಾರ ಹಾಗೂ ಸಮಯ ಪ್ರಜ್ಞೆ ಅತ್ಯಂತ ಅಮೂಲ್ಯವಾದದ್ದು ಎಂದು ಚಿಕ್ಕಮಗಳೂರು ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಡಾ. ಸಿ.ಎಂ ಸುಲೋಚನಾ ತಿಳಿಸಿದರು. ಗಿರಿಯಾಪುರದ ಶ್ರೀಗುರು ಕುಮಾರಶ್ರಮದ ಆವರಣದಲ್ಲಿ ಕಡೂರು ತಾಲೂಕು ಕಸಾಪ ಆಯೋಜನೆಯ ಮನೆ ಅಂಗಳ ದಲ್ಲಿ ಶ್ರಾವಣ ಸಂಭ್ರಮದಲ್ಲಿ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಇಂತಹ ಗುರುಕುಲಗಳಲ್ಲಿ ಅಭ್ಯಾಸ ಮಾಡಿದಲ್ಲಿ ಅವರಲ್ಲಿ ಶ್ರದ್ಧೆ, ವಿವೇಚನೆ ಮತ್ತು ಸಂಸ್ಕಾರ ಮೈಗೂಡಿಸಿಕೊಳ್ಳಲು ಸಾಧ್ಯವಿದೆ. ಅಂಕಗಳಿಕೆ ಜೀವನದ ಮೌಲ್ಯಗಳಿಗೆ ಪ್ರಮುಖವಾದದ್ದು ಅಲ್ಲ ಮೇಲ್ಕಂಡ ಅಂಶಗಳು ಪೂರಕವಾಗಿವೆ ಎಂದು ತಿಳಿಸಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀ ಕೇಂದ್ರ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸದಲ್ಲಿ ನಾವುಗಳು ವಿಶೇಷವಾಗಿ ಶರಣರ ಚಿಂತನೆಗೆ ಹೆಚ್ಚು ಮಹತ್ವ ನೀಡುತ್ತೇವೆ ಹಾಗೂ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುತ್ತೇವೆ. ಆ ಮೂಲಕ ಶರಣರ ತತ್ವ ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಸಂಸ್ಕಾರ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಇಡೀ ಜಿಲ್ಲೆಯಲ್ಲೇ ಶ್ರಾವಣ ಸಂಭ್ರಮ ಸಾಹಿತ್ಯ ಸುಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆ ಮೂಲಕ ಶರಣರ ಚಿಂತನೆಗಳನ್ನು ಮನೆ ಮನೆಗಳಿಗೆ ತಲುಪಿಸುವ ಹಾಗೂ ಎಲ್ಲರ ಮನಸ್ಸುಗಳನ್ನು ಒಟ್ಟುಗೂಡಿಸುವ ಕೆಲಸ ಕಸಾಪ ಮಾಡುತ್ತಿದೆ. ಜಾತಿ, ಮತ, ಪಂಥಗಳನ್ನು ಮೀರಿ ತನ್ನ ಕಾರ್ಯ ಚಟುವಟಿಕೆ ನಿರ್ವಹಿಸುತ್ತಿದೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಎಸ್. ಪರಮೇಶ್ ಮಾತನಾಡಿದರು. ಭುವನೇಶ್ವರಿ ಭಾವಚಿತ್ರದ ಅನಾವರಣ ವನ್ನು ಗಿರಿಯಾಪುರ ಸಿಎಸ್ ಕೆ ಪ್ರಸಾದ ನಿಲಯ ಅಧ್ಯಕ್ಷ ಜಿ. ಶ್ರೀಕಂಠಪ್ಪ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ. ಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷೆ ಲತಾ ರಾಜಶೇಖರ್ ನೆರವೇರಿಸಿದರು. ಕಸಾಪ ಹಿರೇನಲ್ಲೂರು ಘಟಕದ ಅಧ್ಯಕ್ಷ ಶಿವಲಿಂಗ ಸ್ವಾಮಿ ಪ್ರಾಸ್ತಾವಿಕ ನುಡಿ ನುಡಿದರು. ಮುಖ್ಯ ಅತಿಥಿಗಳಾಗಿ ಚಿಕ್ಕನಲ್ಲೂರಿನ ಸಿ.ಎಂ. ಕ್ಷೇತ್ರಪಾಲ್, ಬಿ. ರಾಜಪ್ಪ, ಹೋಬಳಿ ಮಹಿಳಾ ಘಟಕ ಅಧ್ಯಕ್ಷೆ ಮಂಜುಳಾ ಜಯಣ್ಣ, ಗಿರಿಯಾಪುರದ ಚಂದ್ರ ಮೌಳಿ, ಗುರು ಕೃಪಾ ಪ್ರೌಢಶಾಲೆ ಅಧ್ಯಕ್ಷ ಜಯಸೋಮನಾಥ ಗಿರಿಯಾಪುರ ಗ್ರಾಪಂ ಅಧ್ಯಕ್ಷ ಜಿ. ಪಿ. ಪ್ರಭುಕುಮಾರ್, ಶ್ರೀ ಗುರು ಕೃಪಾ ಪ್ರೌಢಶಾಲೆ ಕಾರ್ಯದರ್ಶಿ ಜಿಎಂಎನ್ ಸ್ವಾಮಿ ಸಿಎಸ್‌ಕೆ ಪ್ರಸಾದ ನಿಲಯದ ಕಾರ್ಯದರ್ಶಿ ಜಿ.ಎಂ. ಬಸವರಾಜಪ್ಪ ಮಾತನಾಡಿದರು .
ಇದೇ ಸಂದರ್ಭದಲ್ಲಿ ಗಿರಿಯಾಪುರ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿ ಚಂದ್ರಮೌಳಿ ಅವರನ್ನು ಕಡೂರು ತಾಲೂಕು ಕಸಾಪದಿಂದ ಅಭಿನಂದಿಸಲಾಯಿತು. ಮಲ್ಲಿಕಾಂಬ ಮಹಿಳಾ ಮಂಡಳಿ ಅಧ್ಯಕ್ಷೆ ವಸುಧಾ ಷಡಕ್ಷರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ. ಎಂ ಶಿವಕುಮಾರ, ಶಿವದ್ವೈತ ತತ್ವ ಪ್ರಚಾರ ಕೇಂದ್ರದ ಅಧ್ಯಕ್ಷ ಜಿ. ಬಿ. ಕುಮಾರಪ್ಪ, ಗ್ರಾಪಂ ಸದಸ್ಯ ಜಿ.ಎಂ. ಉಮಾ ಮಹೇಶ್ವರಪ್ಪ, ಜ್ಞಾನದೀಪ ವಿದ್ಯಾಸಂಸ್ಥೆ ಅಧ್ಯಕ್ಷ ಜಿ. ಎಸ್ ಲಿಂಗರಾಜು, ತಾಲೂಕು ಕಸಾಪ ಗೌರವ ಅಧ್ಯಕ್ಷ ಆರ್. ಜಿ. ಕೃಷ್ಣ ಸ್ವಾಮಿ, ಕಾರ್ಯದರ್ಶಿ ಚಂದ್ರಶೇಖರ್ ಕೋಶ್ಯಾಧ್ಯಕ್ಷ ಎಚ್. ಕೆ. ಮಂಜುನಾಥ್, ಕಡೂರು ನಗರ ಘಟಕದ ಅಧ್ಯಕ್ಷ ಕೆ. ಜಿ. ವಸಂತ್ ಕುಮಾರ್, ಗೌರವ ಸಲಹೆಗಾರ ಕುಪ್ಪಾಳು ಶಾಂತಮೂರ್ತಿ, ಚಿಕ್ಕಬಾಸೂರು ಅನಂತ್, ಕೇದಿಗೆರೆ ಶಿವಕುಮಾರ್, ಮಂಜುಳಾ ಜಯಣ್ಣ ಚಿಕ್ಕನಲ್ಲೂರು ಸಿ. ತಿಪ್ಪೇಶ್, ತಾಲೋಕು ಸಂಚಾಲಕ ಚಂದ್ರು, ಗೌರವ ಕಾರ್ಯದರ್ಶಿ ಜಿ.ಎಸ್. ಪ್ರಸನ್ನ, ಶ್ರೀ ಗುರು ಕೃಪಾ ಪ್ರೌಢಶಾಲೆ ಕನ್ನಡ ಶಿಕ್ಷಕ ಕಾಂತರಾಜ್ ಉಪಸ್ಥಿತರಿದ್ದರು. 25ಕೆಕೆಡಿಯು2,ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜನೆಯ ಮನೆ ಅಂಗಳದಲ್ಲಿ ಶ್ರಾವಣ ಸಂಭ್ರಮ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
;Resize=(128,128))
;Resize=(128,128))