2024-25ನೇ ಸಾಲಿನ ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್ ನ ಫಲಿತಾಂಶವನ್ನು ಮೌಲ್ಯಮಾಪನವಾದ 10 ನಿಮಿಷಗಳಲ್ಲೇ ಮಂಡ್ಯ ವಿಶ್ವವಿದ್ಯಾಲಯವು ನೀಡಿ ದಾಖಲೆ ಮೆರೆದಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
2024-25ನೇ ಸಾಲಿನ ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್ ನ ಫಲಿತಾಂಶವನ್ನು ಮೌಲ್ಯಮಾಪನವಾದ 10 ನಿಮಿಷಗಳಲ್ಲೇ ಮಂಡ್ಯ ವಿಶ್ವವಿದ್ಯಾಲಯವು ನೀಡಿ ದಾಖಲೆ ಮೆರೆದಿದೆ.ಈ ಬಾರಿ ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್‌ನ 1511 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 6 ವಿಷಯಗಳಿಗೆ ಪರೀಕ್ಷೆ ನಡೆದಿತ್ತು. ಒಟ್ಟು 4417 ಉತ್ತರ ಪತ್ರಿಕೆಗಳನ್ನು 48 ಮೌಲ್ಯಮಾಪಕರು ಮೌಲ್ಯಮಾಪನವನ್ನು ಮಾಡಿದ್ದರು.
ಶೀಘ್ರದಲ್ಲೇ ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿಯನ್ನು ನಡೆಸಲಿದ್ದು ಪೂರ್ವ ಯೋಜನೆಯಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಪರೀಕ್ಷಾ ಅಧ್ಯಯನ ಮಂಡಳಿಯ ಅಧ್ಯಕ್ಷರಾದ ಡಾ.ಎಸ್.ಎಲ್.ಸುರೇಶ್ ತಿಳಿಸಿದ್ದಾರೆ.ಈ ಕಾರ್ಯಕ್ಕೆ ಸಹಕರಿಸಿದ ಕುಲಪತಿಗಳು, ಕುಲಸಚಿವರು (ಆಡಳಿತ), ಕುಲ ಸಚಿವರು (ಮೌಲ್ಯಮಾಪನ), ಮೌಲ್ಯಮಾಪನ ವಿಭಾಗದ ಸಿಬ್ಬಂದಿಗೆ, ಪರೀಕ್ಷಾ ಅಧ್ಯಯನ ಮಂಡಳಿಯ ಸದಸ್ಯರಿಗೆ, ಮೌಲ್ಯಮಾಪಕರಿಗೆ, ಕಸ್ಟೋಡಿಯನ್ ಆಗಿ ಕಾರ್ಯನಿರ್ವಹಿಸಿದ ಯೋಗನರಸಿಂಹಾಚಾರಿ, ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಎಚ್.ಪಿ.ಸುಮಾಗೆ ಪಿಎಚ್.ಡಿ ಪದವಿಮಂಡ್ಯ: ಮದ್ದೂರಿನ ಮಹಿಳಾ ಸರ್ಕಾರಿ ಕಾಲೇಜಿನ ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕಿ ಎಚ್.ಪಿ.ಸುಮಾ ಅವರು ಡಾ.ಆರ್.ಬಿ.ತಿಮ್ಮಯ್ಯ ಮಾರ್ಗದರ್ಶನದಲ್ಲಿ ಜುಂಪಾ ಲಾಹಿರಿ ಮತ್ತು ಭಾರತಿ ಮುಖರ್ಜಿಯವರ ಆಯ್ದ ಕೃತಿಗಳಲ್ಲಿ ಸಾಂಸ್ಕೃತಿಕ ವಹಿವಾಟುಗಳು ವಿಚಾರ ಕುರಿತು ಮಂಡಿಸಿದ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಗೆ ಅಂಗೀಕರಿಸಿದ್ದು, ಸೋಮವಾರ ನಡೆದ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ಎಚ್.ಪಿ.ಸುಮ ಅವರು ವಕೀಲ ಎಂ.ಬಿ. ಬಸವರಾಜು ಅವರ ಪತ್ನಿಯಾಗಿದ್ದಾರೆ.