ಸಾರಾಂಶ
ಬೀರೂರು, ಅತ್ಯಂತ ಪಾವಿತ್ರತೆಹೊಂದಿರುವ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನದ ಉಸಿರು. ಆಧುನಿಕತೆ ಹೆಸರಿನಲ್ಲಿ ನಮ್ಮ ಈ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು.  ಮಾನವೀಯತೆಯ ಉದಾತ್ತ ಮೌಲ್ಯಗಳನ್ನು ಪುನರುತ್ಥಾನಗೊಳಿಸುವುದೇ  ಧರ್ಮದ ನಿಜವಾದ ಗುರಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ಬೀರೂರಿನ ಗಣಪತಿ ಪೆಂಡಾಲ್ ಆವರಣದಲ್ಲಿ ನಡೆದ ಜನಜಾಗೃತಿ ಧರ್ಮ ಸಮಾರಂಭ
ಕನ್ನಡಪ್ರಭ ವಾರ್ತೆ, ಬೀರೂರುಅತ್ಯಂತ ಪಾವಿತ್ರತೆಹೊಂದಿರುವ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನದ ಉಸಿರು. ಆಧುನಿಕತೆ ಹೆಸರಿನಲ್ಲಿ ನಮ್ಮ ಈ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ಮಾನವೀಯತೆಯ ಉದಾತ್ತ ಮೌಲ್ಯಗಳನ್ನು ಪುನರುತ್ಥಾನಗೊಳಿಸುವುದೇ ಧರ್ಮದ ನಿಜವಾದ ಗುರಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ಗಣಪತಿ ಪೆಂಡಾಲ್ ಆವರಣದಲ್ಲಿ ಸೋಮವಾರ ಶ್ರೀ ಶಿವಾನಂದಾಶ್ರಮ ಟ್ರಸ್ಟಿನಿಂದ ನಿರ್ಮಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮಂದಿರ ಉದ್ಘಾಟನೆ ಮತ್ತು ಶ್ರೀ ಚೌಡೇಶ್ವರಿ ನೂತನ ದೇಗುಲ ಪ್ರಾರಂಭೋತ್ಸವ ಅಂಗವಾಗಿ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.ವಿಶ್ವಬಂಧುತ್ವದ ಸಂದೇಶ ಸಾರಿದ ವೀರಶೈವ ಧರ್ಮ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದೆ. ಸಾತ್ವಿಕ ಮತ್ತು ತಾತ್ವಿಕ ಹಿತ ಚಿಂತನೆ ಬೋಧಿಸುವ ಮೂಲಕ ಭಾವೈಕ್ಯತೆ, ಸಾಮರಸ್ಯ ಬೆಳೆಸಿದ ಕೀರ್ತಿ ಪರಮ ಪಂಚಾಚಾರ್ಯರಿಗೆ ಸಲ್ಲುತ್ತದೆ. ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಸಂದಿಗ್ಧ ಕಾಲದಲ್ಲಿ ಅದನ್ನು ಗಟ್ಟಿಗೊಳಿಸುವ ಮಹತ್ಕಾರ್ಯ ನಡೆಯಬೇಕು. ಸಂಸ್ಕಾರ- ಸಂಸ್ಕೃತಿ ಬೋಧಿಸುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರ ಜೀವನ ದರ್ಶನ ಸೂತ್ರಗಳು ಸಕಲರ ಬಾಳಿಗೆ ಬೆಳಕು ನೀಡಿವೆ ಎಂದು ಪ್ರತಿಪಾದಿಸಿದರು.ಬೀರೂರು ಭಕ್ತರ ಬಹು ದಿನದ ಕನಸು ಇಂದು ಸಾಕಾರವಾಗಿರುವು ಅಪಾರ ಸಂತೋಷ ತಂದಿದೆ. ಶ್ರೀ ರೇಣುಕಾಚಾರ್ಯರ ಮಂಗಲ ಮಂದಿರ ಮತ್ತು ಚೌಡೇಶ್ವರಿ ದೇಗುಲ ನಿರ್ಮಾಣಕ್ಕೆ ಶ್ರೀ ಶಿವಾನಂದ ಟ್ರಸ್ಟ್ ಶ್ರಮಿಸಿದೆ. ರಾಜ್ಯ ಅಪೆಕ್ಸ್ ಬ್ಯಾಂಕ ಅಧ್ಯಕ್ಷ ಬೆಳ್ಳಿ ಪ್ರಕಾಶ ಅವರ ಸೇವೆ ಮರೆಯಲಾಗದು. ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯರು, ಮಾಜಿ ಶಾಸಕ ಟ್ರಸ್ಟಿನ ಕಾರ್ಯದರ್ಶಿ ಕೆ.ಬಿ. ಮಲ್ಲಿಕಾರ್ಜುನ ಒಳಗೊಂಡಂತೆ ಎಲ್ಲಾ ಸದಸ್ಯರ ಸೇವೆ ಅಪಾರವಾದುದೆಂದು ಹರ್ಷ ವ್ಯಕ್ತ ಪಡಿಸಿದರು. ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಆಶೀರ್ವಚ ನದಲ್ಲಿ ಸಮರ ಜೀವನ ವನ್ನು ಅಮರ ಜೀವನಕ್ಕೆ ಕೊಂಡೊಯ್ಯವುದೇ ನಿಜ ಧರ್ಮ. ಪರಿಶುದ್ಧ- ಪವಿತ್ರ ಜೀವನ ರೂಪಿತಗೊಳ್ಳಲು ಧರ್ಮ ಪ್ರಜ್ಞೆ ಅವಶ್ಯಕ. ಬದುಕಿನ ರಹಸ್ಯ ಬೋಧಿಸುವುದೇ ಗುರು ಪೀಠಗಳ ಧ್ಯೇಯವೆಂದರು. ಶ್ರೀ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಆಶೀರ್ವಚನದಲ್ಲಿ ಶ್ರೀ ರೇಣುಕಾದಿ ಪಂಚಾಚಾರ್ಯರ ತತ್ವ ಸಂದೇಶ ಕಾಲ ಕಾಲಕ್ಕೆ ಭಾವೈಕ್ಯತೆಯ ಬೆಸುಗೆ ಹಾಕಿದೆ ಎಂದರು. ಶ್ರೀಮದ್ ಕಾಶಿ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಭಗವತ್ಪಾದರು ಆಶೀರ್ವಚನ ನೀಡಿ ಮನುಷ್ಯನಿಗೆ ಹೆತ್ತ ತಾಯಿ ಹೊತ್ತ ಭೂಮಿ ಎಷ್ಟು ಮುಖ್ಯವೋ ಅಷ್ಟೇ ಧರ್ಮವೂ ಮುಖ್ಯ. ಧರ್ಮ ಅವಿನಾಶಿ. ಧರ್ಮಕ್ಕೆ ನಾಶ ಇರು ವುದಿಲ್ಲ, ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿ ಸನ್ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದು ಸಲಹೆ ಮಾಡಿದರು. ಶ್ರೀಮದ್ ಶ್ರೀ ನೂತನ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ ಜಾತಿ ಜನಾಂಗಗಳ ಗಡಿ ಮೀರಿ ಭಾವೈಕ್ಯತೆ ಮೂಡಿಸಿ ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಎಲ್ಲಾ ಧರ್ಮ ಪೀಠಗಳು ಶ್ರಮಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.ಸಮಾರಂಭ ಉದ್ಘಾಟಿಸಿದ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಮಲೆನಾಡಿನ ಈ ಪ್ರಾಂತ್ಯದಲ್ಲಿ ಜಗದ್ಗುರುಗಳೈವರ ದರ್ಶನಾಶೀರ್ವಾದ ಪಡೆಯುವುದೇ ಒಂದು ಸೌಭಾಗ್ಯಎಂದರು.ಮಾಜಿ ಶಾಸಕ ವೈ.ಎಸ್.ವಿ. ದತ್ತ ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕತೆ ಹೆಸರಿನಲ್ಲಿ ಸಂಸ್ಕೃತಿ ಸಭ್ಯತೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಇಂಥ ಸಮಾರಂಭ ಅವಶ್ಯಕ. ಪಂಚಪೀಠಾಧೀಶ್ವರರ ದರ್ಶನ ಆಶೀರ್ವಾದದಿಂದ ನಮ್ಮೆಲ್ಲರ ಜೀವನ ಪಾವನಗೊಂಡಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ವೀರಶೈವ ಧರ್ಮ ದೇಶದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಜೊತೆಗೆ ಜನರಿಗೆ ಧಾರ್ಮಿಕ ಭಾವನೆ ಮೂಡಿಸಿ ಬದುಕಿನಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪಂಚಪೀಠಾಧೀ ಶರು ಮಾರುತ್ತಿದ್ದಾರೆ. ಬೀರೂರಿನ ಈ ಕಾರ್ಯಕ್ರಮ ಇತಿಹಾಸದ ಪುಟ ಸೇರ ಲಿದೆ. ಬೀರೂರು ಪಟ್ಟಣ ಜಗದ್ಗುರುಗಳ ಆಶೀರ್ವಾದದಿಂದ ಬೆಳೆಯಲಿ ಎಂದರು.ಬಾಳೆಹೊನ್ನೂರು ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯರು ಮಾತನಾಡಿ ಶ್ರೀ ರಂಭಾಪುರಿ ಜಗದ್ಗುರುಗಳ ಉದಾತ್ತ ನಿಲುವಿನೊಂದಿಗೆ ಬೀರೂರು ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯ ಅದ್ಭುತವಾಗಿ ನಡೆದಿ ರುವುದು ಎಲ್ಲಾ ಭಕ್ತ ಸಂಕುಲಕ್ಕೆ ಅಪಾರ ಸಂತೋಷ ಹೆಮ್ಮೆ ಉಂಟು ಮಾಡಿದೆ ಎಂದರು. ಸಮಾರಂಭದಲ್ಲಿ ಹುಲಿಕೆರೆ, ಎಡೆಯೂರು, ತರೀಕೆರೆ, ಹುಣಸಘಟ್ಟ, ಕೆ.ಬಿದರೆ, ಚಿಕ್ಕಮಗಳೂರು, ಬಿಳಿಕಿ,ಹೊನ್ನವಳ್ಳಿ, ಮಾದಿಹಳ್ಳಿ, ನಂದಿಪುರ, ತಾವರೆಕೆರೆ, ಹಣ್ಣೆ, ಬೇರುಗಂಡಿ, ತೆಂಡೆಕೆರೆ, ದೊಡ್ಡ ಮೇಟಿಕುರ್ಕೆ, ಅಂಬಲದೇವರಹಳ್ಳಿ, ಕುಪ್ಪೂರ ಮತ್ತು ಹಾರನಹಳ್ಳಿ ಶ್ರೀಗಳು, ಬೀರೂರು ದೇವರಾಜು, ಕಡೂರು ಭಂಡಾರಿ ಶ್ರೀನಿವಾಸ್, ಭಾಗ್ಯಲಕ್ಷ್ಮಿ ಮೋಹನ್, ನಾಗರಾಜ್, ಲೋಕೇಶ್, ಕೆಬಿಎಂ ಮೊಮ್ಮಗ ಆರ್ಯ, ಪಾಲ್ಗೊಂಡಿದ್ದರು. 3 ಬೀರೂರು 1ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಸೋಮವಾರ ಶ್ರೀ ಶಿವಾನಂದಾಶ್ರಮ ಟ್ರಸ್ಟಿನಿಂದ ನಿರ್ಮಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮಂದಿರ ಉದ್ಘಾಟನೆ ಮತ್ತು ಶ್ರೀ ಚೌಡೇಶ್ವರಿ ನೂತನ ದೇವಾಲಯ ಪ್ರಾರಂಭೋತ್ಸವ ಅಂಗವಾಗಿ ನಡೆದ ಜನಜಾಗೃತಿ ಧರ್ಮ ಸಮಾರಂಭವನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಉದ್ಘಾಟಿಸಿದರು. ಪಂಚಪೀಠದ ಜಗದ್ಗುರುಗಳು, ಶಾಸಕ ಕೆ.ಎಸ್.ಆನಂದ್, ಮಾಜಿ ಶಾಸಕ ವೈ.ಎಸ್.ವಿ.ದತ್ತ ಸೇರಿದಂತೆ ಮತ್ತಿತರ ಶಿವಾಚಾರ್ಯರು ಇದ್ದರು.;Resize=(128,128))
;Resize=(128,128))