ಸಾರಾಂಶ
ನಿವೃತ್ತ ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಆರ್ಥಿಕವಾಗಿ ಸದೃಢವಾಗಿರಬೇಕು.
ಮುಂಡಗೋಡ: ಜೀವನವೆಂದರೆ ಕೇವಲ ಬದುಕುವುದಲ್ಲ, ಬದಲಾಗಿ ಜೀವನದ ಪ್ರತಿ ಕ್ಷಣಗಳನ್ನು ಹಂಚಿಕೊಳ್ಳುವ ಅನುಭವವೇ ನಿಜವಾದ ಜೀವನ. ನಗುನಗುತಾ ನಿವೃತ್ತಿ ಜೀವನವನ್ನು ನಡೆಸಬೇಕು ಎಂದು ಕಸಾಪ ಗೌರವ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ ತಿಳಿಸಿದರು.
ನಗರದ ನಿವೃತ್ತ ನೌಕರರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಮುಂಡಗೋಡ ಶಾಖೆಯ ಆಶ್ರಯದಲ್ಲಿ ಜರುಗಿದ ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ವಾರ್ಷಿಕ ಸಭೆಯಲ್ಲಿ ಮಾತನಾಡಿ, ನಿವೃತ್ತ ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಆರ್ಥಿಕವಾಗಿ ಸದೃಢವಾಗಿರಬೇಕು. ಆರೋಗ್ಯ ಕೈ ಕೊಟ್ಟಾಗ ಸಹಾಯ ಮಾಡಲು ಮಕ್ಕಳು ಮತ್ತು ಸಂಬಂಧಿಕರು ಯಾರೂ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಕಷ್ಟಪಡಬಾರದೆಂದರೆ ಜೀವವಿರುವರಿಗೆ ಸಹಿತ ತಮ್ಮ ಆಸ್ತಿಯನ್ನು ಬೇರೆಯವರಿಗೆ ವರ್ಗಾಯಿಸಬಾರದು. ನಿವೃತ್ತಿ ಜೀವವನ್ನು ಸಂಭ್ರಮಿಸಬೇಕೆ ವಿನಾ ಸಂಕಟಪಡಬಾರದು. ಇರುವಷ್ಟು ದಿನ ಲವಲವಿಕೆಯಿಂದ ಜೀವನ ನಡೆಸಿ ಉಳಿದವರಿಗೆ ಮಾದರಿಯಾಗಬೇಕು ಎಂದರು. ಇದೇ ಸಂದರ್ಭದಲ್ಲಿ ೭೦ ವರ್ಷ ಪೂರೈಸಿದ ಹಿರಿಯ ನಾಗರಿಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಿ.ಬಿ. ಹಿರೇಮಠ್ ಉದ್ಘಾಟಿಸಿದರು. ಎಸ್.ಕೆ. ಬೋರ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ವಿ.ಎಸ್. ಕೋಣಸಾಲಿ ಪ್ರಾವಿಕವಾಗಿ ಮಾತನಾಡಿದರು.ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಒಣಿಕೇರಿ, ಕೋಶಾಧ್ಯಕ್ಷ ಅಶೋಕ್ ಮಿರಜ್ಕರ್, ಸಂಗಪ್ಪ ಕೋಳೂರ, ಆರ್.ವಿ. ಹಿರೇಮಠ, ನಾಗೇಶ ರೇವಣಕರ್ ಮುಂತಾದವರು ಉಪಸ್ಥಿತರಿದ್ದರು. ಎಸ್.ಬಿ. ಹೂಗಾರ್ ಸ್ವಾಗತಿಸಿದರು. ಸುಜಾತಾ ಮುಗಳಿ ಪ್ರಾರ್ಥನೆ ಸಲ್ಲಿಸಿದರು. ಸುರೇಶ್ ಒಣಿಕೇರಿ ವಂದಿಸಿದರು.
;Resize=(128,128))
;Resize=(128,128))
;Resize=(128,128))