ಇತಿಹಾಸ ಮೌಲ್ಯಮಾಪನ ಕಾರ್ಯ ಅಂತ್ಯ- ಬೀಳ್ಕೊಡುಗೆ

| Published : Jul 02 2025, 12:20 AM IST

ಸಾರಾಂಶ

ಇತಿಹಾಸ ಸಂಘ ಆಯೋಜಿಸಿರುವ ಈ ಸಮಾರಂಭದಲ್ಲಿ ನನ್ನನ್ನು ಗೌರವಿಸಿದ್ದಕ್ಕೆ ಧನ್ಯವಾದ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪ್ರಶ್ನೆ ಪತ್ರಿಕೆಗಳನ್ನು ಸರಿಯಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಸಿದ್ಧಪಡಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿವಿಯ ಅಂತಿಮ ಪದವಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರದ ಅಧ್ಯಾಪಕರಿಗೆ ಎನ್.ಇ.ಪಿ ಅಂತಿಮ ವರ್ಷದ ವಿದ್ಯಾರ್ಥಿಗಳ ಪರೀಕ್ಷೆಯ ಮೌಲ್ಯಮಾಪನ ಮುಕ್ತಾಯವಾಗಿದ್ದು, ಇತಿಹಾಸ ವಿಷಯದಲ್ಲಿ ಡಾಕ್ಟರೇಟ್‌ ಪಡೆದ ಹಾಗೂ ಈ ಸಾಲಿನಲ್ಲಿ ನಿವೃತ್ತ ಹೊಂದಿದ ಅಧ್ಯಾಪಕರಿಗೆ ಬೀಳ್ಕೊಡುಗೆ ನೀಡಲಾಯಿತು.ಈ ವೇಳೆ ಹಿರಿಯ ನಿವೃತ್ತ ಪ್ರಾಧ್ಯಾಪಕ ಬಸವರಾಜ ಮಾತನಾಡಿ, ಇತಿಹಾಸ ಸಂಘ ಆಯೋಜಿಸಿರುವ ಈ ಸಮಾರಂಭದಲ್ಲಿ ನನ್ನನ್ನು ಗೌರವಿಸಿದ್ದಕ್ಕೆ ಧನ್ಯವಾದ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪ್ರಶ್ನೆ ಪತ್ರಿಕೆಗಳನ್ನು ಸರಿಯಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಸಿದ್ಧಪಡಿಸಿಕೊಳ್ಳಬೇಕು. ಇತಿಹಾಸ ಸಂಘವನ್ನ ಮುಂದುವರಿಸಿಕೊಂಡು ಇತಿಹಾಸ ಅಧ್ಯಾಪಕರಿಗೆ ತೊಂದರೆಯಾದಲ್ಲಿ ಎಲ್ಲರ ವಿಶ್ವಾಸ ಹಾಗೂ ಹೋರಾಟದ ರೂಪದಲ್ಲಿ ನಾವೆಲ್ಲರೂ ಇದ್ದೇವೆ ಎನ್ನುವ ಭರವಸೆ ಮೂಡಿಸಬೇಕು ಎಂದರು.ಜೊತೆಗೆ 2024 -25ನೇ ಸಾಲಿನ ಚೇರ್ಮನಾದ ಡಾ.ಕೆ.ಎಂ. ದೀಕ್ಷಿತ್, ಡಾ. ಮಾಧವಿ ಅವರನ್ನು ಇತಿಹಾಸ ಸಂಘದ ವತಿಯಿಂದ ಅಭಿನಂದಿಸಲಾಯಿತು.ಈ ವೇಳೆ ನೂತನವಾಗಿ ಡಾಕ್ಟರೇಟ್ ಪದವಿ ಪಡೆದ ಎಲ್ಲಾ ಪ್ರಾಧ್ಯಾಪಕರನ್ನು ಅಭಿನಂದಿಸಲಾಯಿತು.ಪಿ.ಎಸ್. ಪದವಿ ಕಾಲೇಜಿನ ಡೇವಿಡ್ ಪ್ರತಿಭಾಂಜಲಿ ಪ್ರಾರ್ಥಿಸಿದರು. ಡಾ. ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ತ್ರಿವೇಣಿ, ಪ್ರೊ. ರೋಹಿಣಿ, ಪ್ರೊ. ಮಮತಾ ಹಾಗೂ ಮಂಡ್ಯ ಮೈಸೂರು ಹಾಸನ ಚಾಮರಾಜನಗರದ ಅಧ್ಯಾಪಕರು ಭಾಗವಹಿಸಿದ್ದರು.