ಸಾರಾಂಶ
ನಾಪೋಕ್ಲು ಭಗವತಿ ದೇವಾಲಯದ ಬಳಿ ಇರುವ ಅರೆಯಡ ಕೊಪ್ಪದಲ್ಲಿ ನಿವೃತ್ತ ಸೈನಿಕ ಸೋಮಣ್ಣ ಪತ್ನಿ ಮಾಯವ್ವ ಅವರೊಂದಿಗೆವಾಸವಾಗಿದ್ದರು. ಇವರು ಜ.14 ರಂದು ಮನೆಯಿಂದ ಹೊರಟು ಚಿಕಿತ್ಸೆಗಾಗಿ ನಾಪೋಕ್ಲು ಪಟ್ಟಣಕ್ಕೆ ತೆರಳಿದ್ದು ವಾಪಸ್ ಬಂದಿಲ್ಲ ಎಂದು ಸಂಬಂಧಿಕರು ನಾಪೋಕ್ಲು ಠಾಣೆಗೆ ದೂರು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸ್ಥಳೀಯ ನಿವಾಸಿ ಅರೆಯಡ ಎಂ ಸೋಮಣ್ಣ (82) ಕಾಣೆಯಾಗಿರುವುದಾಗಿ ಅವರ ಸಂಬಂಧಿ ಅರೆಯಡ ನಂಜಪ್ಪ ಎಂಬವರು ನಾಪೊಕ್ಲು ಠಾಣೆಗೆ ದೂರು ಸಲ್ಲಿಸಿದ್ದಾರೆ. ನಾಪೋಕ್ಲು ಭಗವತಿ ದೇವಾಲಯದ ಬಳಿ ಇರುವ ಅರೆಯಡ ಕೊಪ್ಪದಲ್ಲಿ ಸೋಮಣ್ಣ ಪತ್ನಿ ಮಾಯವ್ವ ಅವರೊಂದಿಗೆವಾಸವಾಗಿದ್ದರು. ಇವರು ನಿವೃತ್ತ ಸೈನಿಕರಾಗಿದ್ದು ಜ.14 ರಂದು ಮನೆಯಿಂದ ಹೊರಟು ಚಿಕಿತ್ಸೆಗಾಗಿ ನಾಪೋಕ್ಲು ಪಟ್ಟಣಕ್ಕೆ ತೆರಳಿದ್ದು ವಾಪಸ್ ಬಂದಿಲ್ಲ. ಅರೆಯಡ ಕುಟುಂಬಸ್ಥರುಸೋಮಣ್ಣ ಅವರ ಪತ್ತೆಗಾಗಿ ಹುಡುಕಾಟ ನಡೆಸಿದ್ದು ಎಲ್ಲೂ ಪತ್ತೆ ಆಗಿರುವುದಿಲ್ಲ. ಅವರು ಗೋಧಿ ಬಣ್ಣ, ಕೋಲು ಮುಖ ಸಾಧಾರಣ ಮೈಕಟ್ಟು.ಎತ್ತರ ಸುಮಾರು 5 "10. ಧರಿಸಿರುವ ಬಟ್ಟೆ ಕಪ್ಪು ಪ್ಯಾಂಟು, ಆಕಾಶ ನೀಲಿ ಬಣ್ಣದ ಉದ್ದ ತೋಳಿನಶರ್ಟು ಬಿಳಿ ಬಣ್ಣದ ಕ್ಯಾಪ್ ಧರಿಸಿದ್ದಾರೆ.
ನಾಪತ್ತೆಯಾದ ನಿವೃತ್ತ ಸೈನಿಕರ ಮಾಹಿತಿ ತಿಳಿದರೆ ಕರೆ ಮಾಡಬೇಕಾದ ಸಂಪರ್ಕ ಸಂಖ್ಯೆ: 08272 237240, 9741404155.ಶಾಲಾ ಬಾಲಕಿಯೊಂದಿಗೆ ಅನುಚಿತ ವರ್ತನೆ;ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ನಾಲ್ವರು ಯುವಕರ ವಿರುದ್ಧ ಬುಧವಾರ ಸಂಜೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಬುಧವಾರ ಸಂಜೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಯೊಂದಿಗೆ ನಾಲ್ವರು ಯುವಕರು ಅನುಚಿತವಾಗಿ ವರ್ತಿಸಿ ಚುಡಾಯಿಸಿದ್ದಾರೆ ಆಕೆ ಭಯದಿಂದ ಕೂಗಿಕೊಂಡಿದ್ದಾಳೆ. ಸ್ಥಳದಲ್ಲಿದ್ದ ಸಾರ್ವಜನಿಕರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಮೊಕದ್ದಮೆ ದಾಖಲಿಸಿ ಗುರುವಾರದಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಸುಂಟಿಕೊಪ್ಪದ ನಿವಾಸಿಗಳಾದ ಇಗ್ನಿತ್, ಚೇತನ್, ಪ್ರಶಾಂತ್, ದಿನೇಶ್ ಬಂಧಿತರು.