ಸಾರಾಂಶ
ಬೆಳ್ತಂಗಡಿ: ಭಾರತೀಯ ಭೂಸೇನೆಯಲ್ಲಿ ಸುದೀರ್ಘ 37 ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದ ಯೋಧ ಸುವರ್ಣ ವಿ. ವರಕಬೆ ಅವರಿಗೆ ಪೌರ ಸನ್ಮಾನ ಹಾಗೂ ವೀರ ಸಿಂದೂರ ಪ್ರಶಸ್ತಿ ಪ್ರದಾನ ಗೌರವಾಭಿನಂದನಾ ಸಮಾರಂಭ ಮಂಗಳವಾರ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಂಸ್ಕಾರ ಭಾರತಿ ದಕ್ಷಿಣ ಕನ್ನಡ ಬೆಳ್ತಂಗಡಿ ಘಟಕ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಕ್ಷೇತ್ರ ಓಡೀಲು ಆಶ್ರಯದಲ್ಲಿ ಸಮಾರಂಭ ಸಂಪನ್ನಗೊಂಡಿತು.ಸಂಸ್ಕಾರ ಭಾರತಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಪ್ರಧಾನ ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸೈನಿಕರ ಸoಘದ ಪ್ರಮುಖ ಸೂರಪ್ಪ ಗೌಡ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಅಲ್ಲಂದೋಡಿ, ಉಪಾಧ್ಯಕ್ಷ ರುದೇಶ್ ಕುಮಾರ್, ಯಶೋದರ ಶೆಟ್ಟಿ ಅರ್ಕಜೆ, ನವೀನ್ ಪಡಂಗಡಿ, ಸಂತೋಷ್ ಕುಮಾರ್ ಜೈನ್ ಪಡoಗಡಿ, ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಕುಲಾಲ್, ಪ್ರಮುಖರಾದ ಆನಂದ ಶೆಟ್ಟಿ, ವಾತ್ಸಲ್ಯ, ಎಸ್ ಗಂಗಾಧರ ರಾವ್ ಕೆವುಡೇಲು. ವಿವೇಕಾನಂದ ಶೆಣೈ ಮದ್ದಡ್ಕ, ಶ್ರೀಧರ ಪೂಜಾರಿ ವರಕಬೆ, ಗಂಗಾಧರ ಪೂಜಾರಿ ವರಕಬೆ, ಅಶ್ವಿತ್ ಕುಲಾಲ್ ಓಡೀಲು, ಸಂದೇಶ್ ಅನಿಲ, ಯೋಗೇಶ್ ಶೆಟ್ಟಿ ಅನಿಲ, ಮನಮೋಹನ್ ನಾಯಕ್, ಗಣೇಶ್ ಶೆಟ್ಟಿ ಅರ್ಕಜೆ, ವಿಠಲ ಆಚಾರ್ಯ ಗುರುವಾಯನಕೆರೆ, ಜಯರಾಮ್ ಶೆಟ್ಟಿ ಕೆoಬರ್ಜೆ ಮೊದಲಾದವರು ಉಪಸ್ಥಿತರಿದ್ದರು.