ಸಾರಾಂಶ
ಬಾದಾಮಿ: ನೌಕರರಿಗೆ 60 ವರ್ಷ ವಯಸ್ಸಾದ ನಂತರ ನಿವೃತ್ತಿ ಸಾಮಾನ್ಯ. ಸೇವಾವಧಿಯಲ್ಲಿ ಮಾಡಿದ ಕೆಲಸಗಳು ನೆನಪಿನಲ್ಲಿ ಉಳಿಯುತ್ತವೆ ಎಂದು ಶಾಸಕ ಹಾಗೂ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಬಾದಾಮಿ: ನೌಕರರಿಗೆ 60 ವರ್ಷ ವಯಸ್ಸಾದ ನಂತರ ನಿವೃತ್ತಿ ಸಾಮಾನ್ಯ. ಸೇವಾವಧಿಯಲ್ಲಿ ಮಾಡಿದ ಕೆಲಸಗಳು ನೆನಪಿನಲ್ಲಿ ಉಳಿಯುತ್ತವೆ ಎಂದು ಶಾಸಕ ಹಾಗೂ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ನಗರದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಐಟಿಐ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಕಾಳಿದಾಸ ಐಟಿಐ ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಮುಲ್ಲಾ ಅವರು ಮೇ.31 ರಂದು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ದಂಪತಿಗೆ ಸನ್ಮಾನಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಪರ್ಕಾಧಿಕಾರಿ ಶರಣಗೌಡ ಪಾಟೀಲ ಸೇರಿದಂತೆ ಅಂಗ ಸಂಸ್ಥೆಯ ಮುಖ್ಯಸ್ಥರು ಮತ್ತು ಇತರರು ಹಾಜರಿದ್ದರು.