ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ವಿದ್ಯಾರ್ಥಿನಿ ಕೆ.ಎಸ್.ಅನನ್ಯ ಅವರಿಗೆ ಹೆಚ್ಚುವರಿ 6 ಅಂಕ ಲಭಿಸಿದೆ.
ಶಿವಮೊಗ್ಗ: ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ವಿದ್ಯಾರ್ಥಿನಿ ಕೆ.ಎಸ್.ಅನನ್ಯ ಅವರಿಗೆ ಹೆಚ್ಚುವರಿ 6 ಅಂಕ ಲಭಿಸಿದೆ.
ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಈಕೆಗೆ ಮೊದಲು 571 ಅಂಕಗಳು ಲಭಿಸಿದ್ದವು. ಸಂಸ್ಕೃತದಲ್ಲಿ 100ಕ್ಕೆ 100 ಅಂಕ ಪಡೆದರೆ, ಇಂಗ್ಲೀಷ್‌ನಲ್ಲಿ 91, ಭೌತಶಾಸ್ತ್ರದಲ್ಲಿ 90, ರಸಾಯನ ಶಾಸ್ತ್ರದಲ್ಲಿ 96, ಗಣಿತಶಾಸ್ತ್ರದಲ್ಲಿ 98, ಜೀವಶಾಸ್ತ್ರದಲ್ಲಿ 96 ಅಂಕ ಸೇರಿ 571 ಅಂಕ ಪಡೆದಿದ್ದ ಈಕೆ ಮರುಮೌಲ್ಯಪನಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಭೌತಶಾಸ್ತ್ರದಲ್ಲಿ 6 ಹೆಚ್ಚುವರಿ ಅಂಕ ಲಭಿಸಿದ್ದು, ಒಟ್ಟು ಅಂಕ 571 ರಿಂದ 577ಕ್ಕೆ ಏರಿಕೆ ಕಂಡಿದೆ.