ತಾಲೂಕಿನ ಬೆಳ್ಳೂಡಿ ಗ್ರಾಮದ ಸಮೀಪ ಶಿವಮೊಗ್ಗ– ಹೊಸಪೇಟೆ (ಮರಿಯಮ್ಮನಹಳ್ಳಿ) ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಶಾಖಾ ಮಠದ ದಶಮಾನೋತ್ಸವ ಅಂಗವಾಗಿ ಏ.9 ಮತ್ತು 10ರಂದು ಜಗದ್ಗುರು ರೇವಣಸಿದ್ಧೇಶ್ವರ ಜಯಂತಿ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಸಿ.ಎನ್. ಹುಲಿಗೇಶ್ ಹರಿಹರದಲ್ಲಿ ಹೇಳಿದರು.
- ಹರಿಹರದಲ್ಲಿ ಹಾಲುಮತ ಸಮಾಜದ ಅಧ್ಯಕ್ಷ ಹುಲಿಗೇಶ್ ಮಾಹಿತಿ
- - -ಹರಿಹರ: ತಾಲೂಕಿನ ಬೆಳ್ಳೂಡಿ ಗ್ರಾಮದ ಸಮೀಪ ಶಿವಮೊಗ್ಗ– ಹೊಸಪೇಟೆ (ಮರಿಯಮ್ಮನಹಳ್ಳಿ) ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಶಾಖಾ ಮಠದ ದಶಮಾನೋತ್ಸವ ಅಂಗವಾಗಿ ಏ.9 ಮತ್ತು 10ರಂದು ಜಗದ್ಗುರು ರೇವಣಸಿದ್ಧೇಶ್ವರ ಜಯಂತಿ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಸಿ.ಎನ್. ಹುಲಿಗೇಶ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಏ.9, 10ರಂದು ಜಗದ್ಗುರು ರೇವಣಸಿದ್ಧೇಶ್ವರ ಜಯಂತಿ, ಮಠದ ದಶಮಾನೋತ್ಸವ ನಡೆಯಲಿದೆ. ಏ.10ರಂದು ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗಿದೆ ವಿವಾಹ ಮಹೋತ್ಸವದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಸಂಪ್ರದಾಯಕ್ಕೆ ಅನುಗುಣವಾಗಿ ವಿವಾಹ ನೆರವೇರಿಸಲು ಸಿದ್ಧತೆ ಮಾಡಲಾಗಿದೆ ಎಂದರು.ಏ.9ರಂದು ಬೆಳಗ್ಗೆ 7 ಗಂಟೆಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ವಧು–ವರರ ಹೆಸರು ನೋಂದಣಿಗೆ ಅಗತ್ಯ ದಾಖಲೆಗಳೊಂದಿಗೆ ಸಂಘಟಕರು ( 9886255619) ಅಥವಾ ಬೆಳ್ಳೂಡಿ ಮಠದ ಭಕ್ತ ಶರಣಪ್ಪ (7353414353) ಅವರನ್ನು ಸಂಪರ್ಕಿಸಬಹುದು ಎಂದರು.
ಏ.9ರಂದು ಬೆಳಗ್ಗೆ 11 ಗಂಟೆಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ಭಕ್ತರಿಗೆ ಸ್ವಾಗತ ನಡೆಯಲಿದೆ. ಸಂಜೆ 7 ಗಂಟೆಗೆ ಹೊಳೆ ಪೂಜೆ ಹಾಗೂ ನಾಟಕ ಪ್ರದರ್ಶನ ನಡೆಯಲಿದೆ. ಏಪ್ರಿಲ್ 7, 8, 9ರಂದು ಮಠದ ಆವರಣದಲ್ಲಿ ರಾಜ್ಯಮಟ್ಟದ ಬಯಲು ಜಂಗಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು.ನಗರಸಭೆ ಮಾಜಿ ಸದಸ್ಯ ಎಸ್.ಎಂ. ವಸಂತ, ವೈ.ಎನ್.ಮಹೇಶ್, ರೇವಣಸಿದ್ಧಪ್ಪ (ಡಿಬಿಸಿಆರ್), ಮಲೇಬೆನ್ನೂರಿನ ಕೆ.ಪಿ. ಗಂಗಾಧರ್, ಪೈಲ್ವಾನ್ ಚಂದ್ರು, ಚೂರಿ ಜಗದೀಶ್, ಯರೇಶಿಮಿ ಶಿವಣ್ಣ, ರವಿಕುಮಾರ್, ಮಹಾಂತೇಶ್ ಹಾಜರಿದ್ದರು.
- - - *** (-ಫೋಟೋ ಬೇಡ)