ಸಾರಾಂಶ
ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಣಿ ಚನ್ನಮ್ಮಾಜಿ ಹಾಗೂ ಸರ್ದಾರ ಗುರುಶಿದ್ದಪ್ಪ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಣಿ ಚನ್ನಮ್ಮಾಜಿ ಹಾಗೂ ಸರ್ದಾರ ಗುರುಶಿದ್ದಪ್ಪ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.ರಾಣಿ ಚನ್ನಮ್ಮಾ ವೇದಿಕೆಯಲ್ಲಿ ಕನ್ನಡ ಚಲನಚಿತ್ರ ಖ್ಯಾತ ನಾಯಕರ ಜ್ಯೂನಿಯರ್ ಆರ್ಟಿಸ್ಟ್ ತಂಡ ನೋಡುಗಗರನ್ನು ಮಂತ್ರ ಮುಗ್ದರಾಗಿಸಿತು. ದಿ.ಪುನೀತ ರಾಜಕುಮಾರ ಅಭಿನಯ ಹಾಗೂ ಹಾಡು ನೋಡುಗರ ಮನದಲ್ಲಿ ಪುನೀತ ಅವರನ್ನು ಜೀವಂತವಾಗಿರಿಸಿತು. ಅಲ್ಲದೆ ಜ್ಯೂನಿಯರ್ ಪ್ರಭಾಕರ, ರವೀಂಚಂದ್ರನ್, ಗುರುಕಿರಣ, ಯಶ್ ಅವರ ನಟನೆಗೆ ಹಾಗೂ ಹಾಡುಗಳಿಗೆ ವೇದಿಕೆಯಲ್ಲಿದ್ದ ಜನರು ಕುಣಿದು ಕುಪ್ಪಳಿಸಿದರು. ನಾಗರಾಜ ಜೋರಾಪೂರ ಅವರ ಹಾಸ್ಯದ ಹೊನಲು ಕಾರ್ಯಕ್ರಮ ನಗೆಗಡಲಲ್ಲಿ ತೆಲಿಸಿತು. ಖ್ಯಾತ ಕೊಳಲು ವಾದಕ ಪ್ರವೀಣ ಗೊಡಕಿಂಡಿ ಕಾರ್ಯಕ್ರಮ ನೋಡಗರರನ್ನು ಮಂತ್ರಮುಗ್ದವಾಗಿಸಿತು. ಇನ್ನೂಳಿದಂತೆ ಜನಪದ ಸಂಗೀತ, ನೃತ್ಯ ವೈವಿಧ್ಯ, ಜಾದು ಪ್ರದರ್ಶನ, ಕುಚಿಪುಡಿ ನೃತ್ಯ ನೋಡುಗರ ಮನಸೂರೆಗೊಂಡವು.ಸರ್ದಾರ ಗುರುಶಿದ್ದಪ್ಪ ವೇದಿಕೆಯಲ್ಲಿ ಭಜನೆ ಕ್ಲಾರಿಯೋನಿಟ್ , ಸಮೂಹ ನೃತ್ಯ, ಭಕ್ತ ಗೀತೆಗಳು, ಭತರ ನಾಟ್ಯ, ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಾಡಿನ ಜಾನಪದ ಕಲೆ ಶ್ರೀಮಂತಿಕೆಯನ್ನು ಅನಾವರಣಗೊಳಿಸಿತು.