ಪೋಷಕರ ಮೇಲಿನ ಸೇಡು: ಬಾಲಕಿ ಮೇಲೆ ನಾಯಿ ದಾಳಿ

| Published : Oct 13 2023, 12:16 AM IST

ಸಾರಾಂಶ

ಮಾಗಡಿ: ತಾಲೂಕಿನ ಚಿಕ್ಕ ಸೋಲೂರು ಗ್ರಾಮದ ಕೋಳಿ ಫಾರಂ ಮಾಲೀಕ ನಾಗರಾಜು, ಪೊಷಕರು ಕೋಳಿ ಫಾರಂ ಕೆಲಸಕ್ಕೆ ಬಂದಿಲ್ಲವೆಂಬ ಕಾರಣಕ್ಕೆ ಕಾರ್ಮಿಕರ ಮಗಳ ಮೇಲೆ ಸಾಕು ನಾಯಿ ಬಿಟ್ಟು ಕಚ್ಚಿಸಿದ್ದಾರೆಂದು ಅದೇ ಗ್ರಾಮದ ಮತ್ತೊಂದು ಕೋಳಿ ಫಾರಂ ಮಾಲೀಕ ಆನಂದ್ ಕುಮಾರ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
-ಸೋಲೂರು ಗ್ರಾಮದ ಕೋಳಿ ಫಾರಂ ಮಾಲೀಕ ನಾಗರಾಜು ವಿರುದ್ಧ ದೂರು ಮಾಗಡಿ: ತಾಲೂಕಿನ ಚಿಕ್ಕ ಸೋಲೂರು ಗ್ರಾಮದ ಕೋಳಿ ಫಾರಂ ಮಾಲೀಕ ನಾಗರಾಜು, ಪೊಷಕರು ಕೋಳಿ ಫಾರಂ ಕೆಲಸಕ್ಕೆ ಬಂದಿಲ್ಲವೆಂಬ ಕಾರಣಕ್ಕೆ ಕಾರ್ಮಿಕರ ಮಗಳ ಮೇಲೆ ಸಾಕು ನಾಯಿ ಬಿಟ್ಟು ಕಚ್ಚಿಸಿದ್ದಾರೆಂದು ಅದೇ ಗ್ರಾಮದ ಮತ್ತೊಂದು ಕೋಳಿ ಫಾರಂ ಮಾಲೀಕ ಆನಂದ್ ಕುಮಾರ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಾಲೂಕಿನ ಚಿಕ್ಕಸೋಲೂರು ಗ್ರಾಮದ ಆನಂದ್ ಕುಮಾರ್ ಕೋಳಿ ಫಾರಂನಲ್ಲಿ ಸಕಲೇಶಪುರ ತಾಲೂಕಿನ ಬಾಳುಪೇಟೆಯ ಸುರೇಶ್ - ಲೀಲಾವತಿ ದಂಪತಿ ಕೆಲಸ ಮಾಡುತ್ತಿದ್ದರು. ಈ ದಂಪತಿ ನಾಗರಾಜು ಅವರ ಕೋಳಿ ಫಾರಂಗೆ ಕೆಲಸಕ್ಕೆ ಹೋಗಲಿಲ್ಲವೆಂದು ದಂಪತಿಯ ಮಗಳ ಮೇಲೆ ನಾಯಿಯನ್ನು ಬಿಟ್ಟು ಕಚ್ಚಿಸಿದ್ದಾರೆ. ಬಾಲಕಿ ನಾಯಿ ಕಾಟ ತಡೆಯಲಾಗದೆ ಕಿರುಚುತ್ತಿದ್ದರೂ ನಾಗರಾಜು ನೋಡಿಕೊಂಡು ಸುಮ್ಮನಿದ್ದು, ಅಕ್ಕಪಕ್ಕದವರು ಸ್ಥಳಕ್ಕೆ ಬಂದು ನಾಯಿಯನ್ನು ಬಿಡಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಹಶೀಲ್ದಾರ್ ಭೇಟಿ: ಬಾಲಕಿ ಮೇಲೆ ನಾಯಿ ದಾಳಿ ಮಾಡಿರುವ ಸುದ್ದಿ ತಿಳಿದ ಕೂಡಲೇ ತಹಶೀಲ್ದಾರ್ ಸುರೇಂದ್ರ ಮೂರ್ತಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಪ್ರತಿಭಟನೆಯ ಎಚ್ಚರಿಕೆ: ಬದುಕು ಅರಿಸಿಕೊಂಡು ಬಂದ ಬಡ ಕುಟುಂಬದ ಮೇಲೆ ಕೋಳಿ ಫಾರಂ ಮಾಲೀಕ ನಾಗರಾಜು ದರ್ಪ ತೋರಿದ್ದು ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಬೇಕು. ಬಾಲಕಿಯ ಆಸ್ಪತ್ರೆ ವೆಚ್ಚ ಭರಿಸಬೇಕು. ಇಲ್ಲವಾದರೆ ರೈತ ಸಂಘದಿಂದ ಪ್ರತಿಭಟನೆ ನಡೆಸುತ್ತೇವೆಂದು ಹಸಿರು ಸೇನೆ ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಎಚ್ಚರಿಕೆ ನೀಡಿದರು. ಪೋಟೋ 12ಮಾಗಡಿ2 : ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಆರೋಗ್ಯ ವಿಚಾರಿಸಿದ ತಹಸಿಲ್ದಾರ್ ಸುರೇಂದ್ರ ಮೂರ್ತಿ.