ಸಾರಾಂಶ
-ಸತ್ಯ ಎಂಎಎಸ್ ಫೌಂಡೇಶನ್ ಮತ್ತು ಅನಧೀಕೃತ ಬಡಾವಣೆಯ ನಿವಾಸಿಗಳು ಪ್ರತಿಭಟನೆ---ಕನ್ನಡಪ್ರಭ ವಾರ್ತೆ ಹುಣಸೂರುನಗರಸಭೆ ವತಿಯಿಂದ ದುಪ್ಪಟ್ಟು ಕಂದಾಯ ವಸೂಲಾತಿ ರದ್ದುಗೊಳಿಸಬೇಕು, ಬಿ ಖಾತಾ ಆಂದೋಲನಕ್ಕೆ ಅಂತಿಮ ಅವಧಿ ನಿಗದಿಗೊಳಿಸಬಾರದು ಸೇರಿದಂತೆ ವಿವಿಧಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸತ್ಯ ಎಂಎಎಸ್ ಫೌಂಡೇಶನ್ ಮತ್ತು ಅನಧೀಕೃತ ಬಡಾವಣೆಯ ನಿವಾಸಿಗಳು ಪ್ರತಿಭಟನೆ ನಡೆಸಿದರು. ನಗರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ನಾಗರಿಕರು, ಜಿಲ್ಲಾಧಿಕಾರಿಗಳ ತಾರತಮ್ಯ ನೀತಿ ನಿಲ್ಲಲಿ, ದುಪ್ಪಟ್ಟು ಕಂದಾಯ ಬೇಡ..ಅನಧಿಕೃತ ಬಡಾವಣೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ ಮುಂತಾದ ಘೋಷಣೆಗಳನ್ನು ಕೂಗಿದರು. ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ವರದರಾಜು, ಬಸಪ್ಪ, ರೈತ ಮುಖಂಡ ಕೃಷ್ಣಕುಮಾರ್, ವಿ.ಪಿ. ಸಾಯಿನಾಥ್, ಎಂ. ಕೃಷ್ಣೇಗೌಡ, ನಾಗಪ್ಪಶೆಟ್ಟಿ ತಾಲೂಕು ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿಗಳು, ಗೊಂದಳಿ ಸಮಾಜದ ಮುಖಂಡರಾದ ರಾಕೇಶ್ ರಾವ್, ಲೋಕೇಶ್ ರಾವ್, ರವಿ, ಸವಿತಾ ಸಮಾಜದ ಮಾಜಿ ಅಧ್ಯಕ್ಷ ದೇವರಾಜು, ನಿವೃತ್ತ ಮುಖ್ಯ ಶಿಕ್ಷಕ ಲಿಂಗೇಗೌಡ, ಶಿವು, ಎಚ್.ಆರ್. ಸುಂದರ್, ಸುಬ್ರಮಣಿ ಇದ್ದರು. ಉಪವಿಭಾಗಾಧಿಕಾರಿಗಳ ಕಚೇರಿ ತಹಸೀಲ್ದಾರ್ ಯದುಗಿರೀಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.