ರೈತರಿಗೆ ಭೂಮಿ ಪಟ್ಟಾ ನೀಡದ ಕಂದಾಯ ಅಧಿಕಾರಿ

| Published : Apr 25 2025, 12:33 AM IST

ರೈತರಿಗೆ ಭೂಮಿ ಪಟ್ಟಾ ನೀಡದ ಕಂದಾಯ ಅಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಗುರುಗುಂಟಾ ಕಂದಾಯ ಹೋಬಳಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ರೈತರಿಗೆ ಭೂಮಿ ಪಟ್ಟಾ ನೀಡುತ್ತಿಲ್ಲ. ಅಲ್ಲದೇ ರೈತರ ಭೂಮಿ ಸಮಸ್ಯೆ ಪರಿಹಾರಕ್ಕೆ ವಿಪರೀತ ಹಣ ವಸೂಲಿ ಮಾಡುತ್ತಿದ್ದೂ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸಿಪಿಐ (ಎಂಎಲ್) ಮಾಸ್ಲೈನ್ ಕರ್ನಾಟಕ ರೈತ ಸಂಘ ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಸಿಲ್ ಕಚೇರಿ ಮುಂದೆ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಗುರುಗುಂಟಾ ಗ್ರಾಮದ ಸ.ನಂಖ್ಯೆ 308/5 ಹಿಸ್ಸಾ 2, 7 ಎಕರೆ 5 ಗುಂಟಿ, ಸ.ನಂ 318 ಹಿಸ್ಸಾ 4, 7, 1ರ 6 ಎಕೆರೆ 2 ಗುಂಟೆ, ಸ.ನಂ 134 ಹಿಸ್ಸಾ 1ರ ಪೈಕಿ 3 ಎಕರೆ ಸ.ನಂ 308 ಹಿಸ್ಸಾ 5ರ 1 ಎಕರೆ 24 ಗುಂಟೆ, ಸ.ನಂ 305/ಇ 4 ಎಕರೆ, ಸ.ನಂ 305 ಹಿಸ್ಸಾ 5/ಅರ 4 ಎಕರೆ ಇರುವ ಜಮೀನುಗಳನ್ನು ಫಾರಂ ನಂಬರ್ 10 ಮಾಡಲು 0-03-203ರಲ್ಲಿ ಫಲಾನುಭವಿಗಳು ಪಹಣಿ ದಾಖಲೆಗಳ ಸಹಿತ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದರು. ಫಲಾನುಭವಿಗಳಿಗೆ ಭೂಮಿ ಫಾರಂ 10 ಮಾಡದೇ ನಿರ್ಲಕ್ಷ ವಹಿಸಲಾಗಿದೆ ಎಂದು ಗಂಭಿರ ಆರೋಪ ಮಾಡಿದರು.

ರೈತರು ಕೊಟ್ಟ ಮನವಿಗೆ ಕಂದಾಯ ಇಲಾಖೆ ಅಧಿಕಾರಿಗಳು ಕಾಲಕಸವಾಗಿದ್ದು ಭೂಮಾಫಿಯಾದವರಿಂದ ರಾತೋ ರಾತ್ರಿ ಹಣ ಪಡೆದು ಸರ್ವೆ ಇಲಾಖೆ ಅಧಿಕಾರಿಗಳು, ಭೂ ಮಾಪಕರು ದಾಖಲೆಗಳ ಸೃಷ್ಠಿ ಮಾಡುತ್ತಾರೆ. ಬಡ ಫಲಾನುಭವಿಗಳಿಗೆ ಯಾವುದೇ ಭೂಮಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ವೆ ಹಣ ಪಾವತಿ ಮಾಡಿದರೂ ಭೂಮಾಪಕರು ತಿಪ್ಪಣಿ, ಪಹಣಿ, ನಕಾಶೆ, ಹಿಸ್ಸಾ ಅದಲು ಬದಲು ಆಗಿದೆ ಎಂದು ಹೇಳಿ ಸರ್ವೆ ಮಾಡುವುದಿಲ್ಲ. ಆದರೆ ಹಣ ನೀಡಿದವರಿಗೆ ರಾತೋತ್ರಿ ಭೂ ದಾಖಲೆಗಳನ್ನು ನೀಡುತ್ತಾರೆ. ಕಂದಾಯ ಹಾಗೂ ಭೂಮಾಪನ ಇಲಾಖೆಯಲ್ಲಿ ಲಂಚಾವತಾರ ಮುಗಿಲು ಮುಟ್ಟಿದ್ದು ಬಡ ಜನರು ಕಚೇರಿಗೆ ಅಲೆದು ಅಲೆದು ಗೋಳು ತೋಡಿಕೊಳ್ಳುತ್ತಾರೆ. ಆದರೆ ಅಧಿಕಾರಿಗಳಿಗೆ ಲಂಚ ನೀಡದೇ ಯಾವುದೇ ದಾಖಲಾತಿಗಳು ಬಗೆಹರಿವುದಿಲ್ಲ ಎಂದು ಆರೋಪಿಸಿದರು.ಧರಣಿಯಲ್ಲಿ ಸಿಪಿಐಂ ಮಾಸ್ಲೈನ್, ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಶೇಖರಯ್ಯ ತಾಲೂಕ ಕಾರ್ಯಾಧ್ಯಕ್ಷ ಆದಪ್ಪ ಅಂಬಿಗೇರ, ತಾಲೂಕ ಅಧ್ಯಕ್ಷ ಗೌಸ್ಸಾಬ್, ಶರಣೋ ಜಿ ಪವಾರ, ಆದಪ್ಪ ನಾಯಕ ಟುಮಕೂರು, ಶಿವು ಕೆಂಪು, ಹನುಮಂತ ಪವಾರ ಇದ್ದರು.