ಹೆಬ್ಬಳಗೆರೆ ಪಂಚಾಯಿತಿಯಲ್ಲಿ ಕಂದಾಯ ಹೆಚ್ಚಿರುವ ದೂರಿನ ಪರಿಶೀಲನೆ: ಸಿಇಒ

| Published : Feb 01 2024, 02:00 AM IST

ಹೆಬ್ಬಳಗೆರೆ ಪಂಚಾಯಿತಿಯಲ್ಲಿ ಕಂದಾಯ ಹೆಚ್ಚಿರುವ ದೂರಿನ ಪರಿಶೀಲನೆ: ಸಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ಹೆಬ್ಬಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಹೆಚ್ಚಾಗಿದೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಸುರೇಶ್ ಬಿ.ಇಟ್ನಾಳ್ ಹೇಳಿದರು.

ಸಿಇಒ ಇಟ್ನಾಳ್‌ ಭರವಸೆ । ಗ್ರಾಪಂ ಕಚೇರಿಗೆ ಭೇಟಿ ನೀಡಿ ಪರಿಶೀಲನೆಸಮರ್ಪಕ ನೀರು ಒದಗಿಸಲು ಕ್ರಮಕ್ಕೆ ಸೂಚನೆ

ಕನ್ನಡಪ್ರಭವಾರ್ತೆ ಚನ್ನಗಿರಿ

ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದನೆ ಮತ್ತು ಆಸ್ಪತ್ರೆ, ಗ್ರಂಥಾಲಯ, ಕುಡಿಯುವ ನೀರು, ವಸತಿ, ಉದ್ಯೋಗ ಖಾತರಿ ಸೇರಿದಂತೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವ ಕುರಿತು ಪ್ರತಿ ಬುಧವಾರ ಒಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡುತ್ತಿರುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಸುರೇಶ್ ಬಿ.ಇಟ್ನಾಳ್ ಹೇಳಿದರು.ಬುಧವಾರ ತಾಲೂಕಿನ ಹೆಬ್ಬಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಆಸ್ಪತ್ರೆ, ಕೂಸಿನಮನೆ, ಪಶು ಆಸ್ಪತ್ರೆ, ಗ್ರಂಥಾಲಯ, ಆಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರ ಕಷ್ಟಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕೊಡಿಸುವ ವಿನೂತನ ಕಾರ್ಯಕ್ರಮ ಇದಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಕಂದಾಯ ಹೆಚ್ಚಾಗಿದೆ ಎಂದು ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಜೆ.ಜೆ.ಎಂ. ಯೋಜನೆಯ ಕಾಮಗಾರಿ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ತಿಳಿದು ಬಂದಿದ್ದು, ಫೆಬ್ರವರಿ 20ರೊಳಗೆ ಈ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮ ಗಳಿಗೂ ಸಮರ್ಪಕವಾದ ಕುಡಿಯುವ ನೀರನ್ನು ಒದಗಿಸುವಂತೆ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಅಭಿಯಂತರರಿಗೆ ಸೂಚಿಸಲಾಗಿದೆ ಎಂದರು.ನರೇಗಾ ಯೋಜನೆ ಕೂಲಿ ಕಾರ್ಮಿಕರ ಮಕ್ಕಳ ಅಪೌಷ್ಠಿಕತೆ ನಿವಾರಿಸುವ ಉದ್ದೇಶದಿಂದ ಕೂಸಿನ ಮನೆ ಪ್ರಾರಂಭಿಸಿದ್ದು, ಈ ಶಿಶುಪಾಲನಾ ಕೇಂದ್ರಕ್ಕೆ ಬರುವ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ ಎಂದರು.ಆಸ್ಫತ್ರೆಗೆ ಇಸಿಜಿ ಯಂತ್ರಯನ್ನು ಶೀಘ್ರ ಒದಗಿಸಲಾಗುವುದು. ಎಲೆಟ್ರಿಕಲ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಬಗ್ಗೆ ಬೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗು ವುದು ಎಂದು ಜನರ ಬೇಡಿಕೆಗಳ ಬಗ್ಗೆ ಭರವಸೆ ನೀಡಿದರು.

ಗ್ರಾಮದ ಬಾನಾಡಿ ಸಂಸ್ಥೆಯ ಎಚ್‌.ಸಿ. ಕೆಂಚಪ್ಪ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿಯುವ ಜನರಿಗೆ ಕೆಲಸ ನೀಡಬೇಕು. ವಲಸೆ ತಡೆಗೆ ಉದ್ಯೋಗ ಖಾತರಿ ಯೋಜನೆ ವರದಾನವಾಗಿದೆ. ಆದರೆ ಈ ಪಂಚಾಯಿತಿಯಲ್ಲಿ 18 ವರ್ಷಗಳಿಂದ ಯಾವ ಕೂಲಿಕಾರ್ಮಿಕನಿಗೂ ಕೆಲಸ ಸಿಕ್ಕಿಲ್ಲ. ಉದ್ಯೋಗ ಚೀಟಿ ಇವರಿಗೆ ದೊರೆತಿಲ್ಲ. ಈ ಗ್ರಾ.ಪಂ ವ್ಯಾಪ್ತಿಯ ಮೂರು ಹಳ್ಳಿಗಳಲ್ಲಿ ಮಾತ್ರ ಎಲ್ಲಾ ಕುಟುಂಬದವರ ಹೆಸರಿನಲ್ಲಿ ಉದ್ಯೋಗ ಕಾರ್ಡಗಳಿದ್ದು, ಆದರೆ ಯಂತ್ರದ ಮೂಲಕ ಕೆಲಸ ಮಾಡಿಸಿ ಕೂಲಿ ಹಣ ಪಡೆಯುತ್ತಾರೆ. ಉದ್ಯೋಗಖಾತರಿ ಯೋಜನೆ ಸಮರ್ಪಕವಾಗಿಲ್ಲ ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತಾಪಂ ಕಾರ್ಯನಿರ್ವಾಣಾಧಿಕಾರಿ ಬಿ.ಕೆ.ಉತ್ತಮ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಭಿಯಂತರ ಲೋಹಿತ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ್, ಗ್ರಾ.ಪಂ ಅಧ್ಯಕ್ಷೆ ವಸಂತಕುಮಾರಿ, ಉಪಾಧ್ಯಕ್ಷೆ ನೇತ್ರಮ್ಮ, ಸದಸ್ಯರಾದ ಕೆ.ಸಿ.ಕೆಂಚಪ್ಪ, ರಂಗಮ್ಮ, ಜಿ.ಎನ್.ಮೂರ್ತಿ, ಅನ್ನಪೂರ್ಣಮ್ಮ, ಕೆ.ಟಿ.ನೇತ್ರ, ರುದ್ರಮ್ಮ, ಕವಿತಾ, ಶಿವಪ್ಪ, ದೇವೆಂದ್ರಪ್ಪ, ಪಿಡಿಓ ಪರಮೇಶ್ವರಪ್ಪ ಇತರರಿದ್ದರು.