ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾ ಅಧ್ಯಕ್ಷ ಮಹಿಬೂಬ್ ಸರಕಾವಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಾಗಲಕೋಟೆ ಜಿಲ್ಲಾ ವಕ್ಫ್ ಮಂಡಳಿ ಸಭೆಯಲ್ಲಿ ಜಿಲ್ಲೆಯಿಂದ ಅವಧಿ ಮುಗಿದ ಆಡಳಿತ ಮಂಡಳಿಯ ಪ್ರಸ್ತಾವನೆ ಪರಿಶೀಲಿಸಿ ರಾಜ್ಯ ವಕ್ಫ್ ಮಂಡಳಿಗೆ ಶಿಫಾರಸು ಮಾಡಲಾಯಿತು.ಜಿಲ್ಲೆಯಲ್ಲಿ ಸುಮಾರು ವಕ್ಫ್ ಸಂಸ್ಥೆಗಳು ಬೈಲಾ ಅನುಮೋದನೆ ಪಡೆಯದೆ ಹಾಗೂ ಆಡಳಿತ ಮಂಡಳಿ ರಚನೆ ಮಾಡಿಕೊಳ್ಳದೆ ಇರುವ, ಅವಧಿ ಮುಗಿದ ಅಂಜುಮನ್ ಸಂಸ್ಥೆಗಳು ಹಾಗೂ ಮಸೀದಿ ಸಮಿತಿಗಳಿಗೆ ನೋಟಿಸ್ ನೀಡಿ ಚುನಾವಣೆ ನಡೆಸಲು ಹಾಗೂ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಲು ಸಭೆಯಲ್ಲಿ ಒಪ್ಪಿ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಸೂಚಿಸಲಾಯಿತು.ಮಸೀದಿಯ ಪೇಶಿ ಇಮಾಮ್ ಹಾಗೂ ಮೌಜನ್ ಗೌರವಧನ ಗಣಕೀಕರಣ ಮಾಡಿಕೊಳ್ಳಲು ಇನ್ನೂ ಕೆಲವು ಜಮಾತುಗಳ ಆಸಕ್ತಿ ವಹಿಸದೆ ಇರುವುದು ಸಭೆಯ ಗಮನಕ್ಕೆ ಬಂದು ಮುಂದಿನ ವಾರದಲ್ಲಿ ಧರ್ಮ ಗುರುಗಳ, ಆಲಿಂಗಳ ಸಭೆ ಕರೆದು ಅವರ ಮಾರ್ಗದರ್ಶನದಲ್ಲಿ ಆಸ್ತಿ ನೋಂದಣಿ ಬೈಲಾ ಅನುಮೋದನೆ ಪಡೆಯಲು, ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಜಿಲ್ಲೆಯ ಎಲ್ಲಾ ವಕ್ಫ್ ಸದಸ್ಯರಿಗೆ ಜವಾಬ್ದಾರಿ ನೀಡಲು ಸಭೆಯಲ್ಲಿ ನೀಡಲಾಯಿತು.
ಒಂದು ಲಕ್ಷ ರೂಪಾಯಿ ಉತ್ಪನ್ನ ಒಳಗಡೆ ಇರುವ ಸಮಿತಿಗಳನ್ನು ಜಿಲ್ಲಾ ವಕ್ಫ್ ಮಂಡಳಿಯಲ್ಲಿ ಅನುಮೋದನೆ ನೀಡಲು ಹಾಗೂ ವಕ್ಫ್ ಮಂಡಳಿಯ ಜಿಲ್ಲಾಧ್ಯಕ್ಷರಿಗೆ ₹20 ಸಾವಿರ ಹಾಗೂ ಸದಸ್ಯರಿಗೆ ಕನಿಷ್ಠ ₹10 ಸಾವಿರ ಗೌರವಧನ ನೀಡಲು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಪಡೆದು ರಾಜ್ಯ ಅಲ್ಪಸಂಖ್ಯಾತ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಹಾಗೂ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಿಗೆ ಶಿಫಾರಸು ಮಾಡಲು ಕೋರಲಾಯಿತು .ನೂತನವಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಗೊಂಡ ಬಾದಾಮಿ ತಾಲೂಕಿನ ಮುರ್ತುಜಾ ಸಾಬ್ ನದಾಫ್ ಅವರನ್ನು ಹಾಗೂ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರು ಹಾಗೂ ಜಿಲ್ಲಾ ಅಧಿಕಾರಿ ಮದಾರ್ ಪಟೇಲರನ್ನು ಸನ್ಮಾನಿಸಲಾಯಿತು.
ಜಿಲ್ಲೆಯ ಬದಾಮಿ ಪಟ್ಟಣದ ಅಂಜುಮನ್ ಸಂಸ್ಥೆಯ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಿ ಆಡಳಿತ ಮಂಡಳಿ ಚುನಾಯಿಸುವುದರಲ್ಲಿ ಸಹಕಾರಿಯಾದ ವಕ್ಫ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಿನಂದಿಸಲಾಯಿತು.ಸಭೆಯಲ್ಲಿ ಜಿಲ್ಲಾ ವಕ್ಫ್ ಕಾನೂನು ಸಲಹೆಗಾರ ರಸೂಲಸಾಬ್ ಪೆಂಡಾರೆ, ಜಿಲ್ಲಾ ಉಪಾಧ್ಯಕ್ಷ ಮುರ್ತುಜಾ ಸಾಬ್ ನದಾಫ್, ನೂರ ಅಹ್ಮದ್ ತೋಟದ, ಬಂದಾನವಾಜ್ ಧಾರ್ವಾಡ್ಕರ್, ಅಯೂಬ್ ಪುನೇಕರ್, ನಬೀ ಸಾಬ್ ಟಂಕಸಾಲಿ, ಅಕ್ಬರ್ ತಾಂಬೋಳಿ, ದಾದಾಪೀರ್ ಮುಜಾವರ್, ವಕೀಲರಾದ ಇಕ್ಬಾಲಶೇಖ ಹಾಗೂ ಎ.ಎಂ. ಕಲಾದಗಿ, ಆರಿಫ್ ಕಿರಾಸೂರ, ಕಾಶಿಂ ಸಾಬ್ ಗೋಟೆ, ಶಬ್ಬೀರ್ ಜಮಖಂಡಿ, ಮುಶಿನ್ ಅತ್ತಾರ, ಜಿಲ್ಲಾ ವಕ್ಫ್ ಅಧಿಕಾರಿ ಮದರ್ ಪಟೇಲ್, ಶಬಾನ ಶೇಖ್, ಫಯಾಜ್ ಕಲಾದಗಿ, ಲೆಕ್ಕಾಧಿಕಾರಿ ರಾಜ್ ಅಹ್ಮದ್ ನದಾಫ್, ಮಸ್ತಾನ ನದಾಫ್ ಉಪಸ್ಥಿತರಿದ್ದರು.