ಸ್ವಾಭಿಮಾನಿ ಸಮಾವೇಶಕ್ಕೆ ಸಚಿವರಿಂದ ಸಿದ್ಧತೆಗಳ ಪರಿಶೀಲನೆ

| Published : Nov 30 2024, 12:47 AM IST

ಸ್ವಾಭಿಮಾನಿ ಸಮಾವೇಶಕ್ಕೆ ಸಚಿವರಿಂದ ಸಿದ್ಧತೆಗಳ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ ಎಂ ಕೃಷ್ಣ ನಗರದಲ್ಲಿ ಡಿಸೆಂಬರ್ ೫ರಂದು ಹಮ್ಮಿಕೊಂಡಿರುವ ಕಾಂಗ್ರೆಸ್‌ನ ಸ್ವಾಭಿಮಾನಿ ಸಮಾವೇಶದ ಹಿನ್ನೆಲೆಯಲ್ಲಿ ಎಸ್.ಎಂ. ಕೃಷ್ಣನಗರದಲ್ಲಿ ಸಚಿವರುಗಳಾದ ಕೆ.ಎನ್. ರಾಜಣ್ಣ, ಎಚ್.ಸಿ.ಮಹದೇವಪ್ಪ, ವೆಂಕಟೇಶ್, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ, ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಪೂರ್ವಭಾವಿ ಸಭೆ ನಡೆಯಿತು. ಸಿದ್ದರಾಮಯ್ಯ ಹಾಗೂ ನಾವು ನಲವತ್ತು ವರ್ಷಗಳಿಂದ ಶೋಷಿತರು, ಹಿಂದುಳಿದ ವರ್ಗಗಳು ಮಾಡುವ ಸಮಾವೇಶಗಳಲ್ಲಿ ಭಾಗಿಯಾಗುತ್ತಿದ್ದೇವೆ. ಕೋಮುವಾದ, ಮತೀಯವಾದವನ್ನು ಸಂವಿಧಾನದವನ್ನು ಉಳಿಸಲು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹೊರವಲಯದ ಎಸ್‌ ಎಂ ಕೃಷ್ಣ ನಗರದಲ್ಲಿ ಡಿಸೆಂಬರ್ ೫ರಂದು ಹಮ್ಮಿಕೊಂಡಿರುವ ಕಾಂಗ್ರೆಸ್‌ನ ಸ್ವಾಭಿಮಾನಿ ಸಮಾವೇಶದ ಹಿನ್ನೆಲೆಯಲ್ಲಿ ಎಸ್.ಎಂ. ಕೃಷ್ಣನಗರದಲ್ಲಿ ಸಚಿವರುಗಳಾದ ಕೆ.ಎನ್. ರಾಜಣ್ಣ, ಎಚ್.ಸಿ.ಮಹದೇವಪ್ಪ, ವೆಂಕಟೇಶ್, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ, ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಪೂರ್ವಭಾವಿ ಸಭೆ ನಡೆಯಿತು. ಡಿಸೆಂಬರ್ ೫ರಂದು ಸ್ವಾಭಿಮಾನಿ ಸಮಾವೇಶ ಸಿದ್ಧತೆಗಳ ಕುರಿತು ಮಾಜಿ ಶಾಸಕರು, ಕಾಂಗ್ರೆಸ್‌ನ ಪ್ರಮುಖ ಮುಖಂಡರು, ಹಿಂದುಳಿದ ವರ್ಗಗಳ ಮುಖಂಡರುಗಳೊಂದಿಗೆ ಸಭೆ ನಡೆಸಿದರು.

ಈ ವೇಳೆ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ಸಮಯದಾಯಗಳ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ಡಿಸೆಂಬರ್ ೫ರಂದು ನಗರದಲ್ಲಿ ಸ್ವಾಭಿಮಾನಿ ಸಮಾವೇಶ ಮಾಡುತ್ತಿದ್ದೇವೆ. ಇದು ಗುಣಾತ್ಮಕ ನಾಯಕತ್ವವನ್ನು ಬಲಪಡಿಸುವ ಸಮಾವೇಶವಾಗಿದೆ. ಶೋಷಿತ ಸಮುದಾಯಗಳ ಸಂಘಟನೆಗಳ ಒಕ್ಕೂಟ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಸ್ವಾಭಿಮಾನಿ ಸಮಾವೇಶ ಮಾಡುತ್ತೇವೆ ನೀವು ಭಾಗಿಯಾಗಬೇಕೆಂದು ಕೇಳಿದ್ದರು. ಸಿದ್ದರಾಮಯ್ಯ ಹಾಗೂ ನಾವು ನಲವತ್ತು ವರ್ಷಗಳಿಂದ ಶೋಷಿತರು, ಹಿಂದುಳಿದ ವರ್ಗಗಳು ಮಾಡುವ ಸಮಾವೇಶಗಳಲ್ಲಿ ಭಾಗಿಯಾಗುತ್ತಿದ್ದೇವೆ. ಕೋಮುವಾದ, ಮತೀಯವಾದವನ್ನು ಸಂವಿಧಾನದವನ್ನು ಉಳಿಸಲು ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಮಾವೇಶದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದರು. ಇದರಲ್ಲಿ ಕಾಂಗ್ರೆಸ್‌ನ ಮುಖಂಡರು ಭಾಗವಹಿಸುತ್ತಿದ್ದಾರೆ ಎಂದರು. ಈಗಾಗಲೇ ರಾಹುಲ್ ಗಾಂಧಿ ಸೇರಿದಂತೆ ನಾಯಕರ ಗಮನಕ್ಕೆ ತರಲಾಗಿದೆ. ಈ ಸಮಾವೇಶದಲ್ಲಿ ೫ ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು. ಇದೇ ವೇಳೆ ವಿಧಾನ ಪರಿಷತ್ತು ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಾಧ್ಯಮದೊಂದಿಗೆ ಮಾತನಾಡಿ, ದೇಶದಲ್ಲಿ ಕೋಮುವಾದ, ಸಂವಿಧಾನ ವಿರೋಧಿ ಚಟುವಟಿಕೆ ಹೆಚ್ಚಾಗಿದ್ದು, ಕೇಂದ್ರ ತನಿಖಾ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ವಾಮಮಾರ್ಗವಾಗಿ ಸರ್ಕಾರಗಳನ್ನು ಬೀಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕರ್ನಾಟಕದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಗೆದ್ದು ಬಂದಂತಹ ಕಾಂಗ್ರೆಸ್ ಸರ್ಕಾರವಿದೆ. ಕೇಂದ್ರ ತನಿಖಾ ಸಂಸ್ಥೆಗಳು, ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ವಕ್ಫ್‌ ವಿಚಾರ ವಿವಾದವೇ ಅಲ್ಲ. ಅವರ ಕಾಲದಲ್ಲಿ ವಕ್ಫ್‌ ಹೆಚ್ಚು ಆಸ್ತಿ ನೀಡಿದ್ದಾರೆ. ನಮ್ಮದು ಸಂವಿಧಾನ, ಪ್ರಗತಿಪರ, ಜಾತ್ಯತೀತತೆ ಪರವಾಗಿ ಇರುತ್ತದೆ. ರಾಜ್ಯಾದ್ಯಂತ ಇಂತಹ ಸಮಾವೇಶ ಮಾಡಬೇಕು ಎಂಬ ಒತ್ತಾಯವಿದೆ ಎಂದರು. ಈ ಸಮಾವೇಶವು ಇಡೀ ರಾಜ್ಯಕ್ಕೆ ಸಂದೇಶ ಹೋಗಬೇಕು. ಮೈಸೂರು ಬಿಟ್ಟು ಬೇರೆ ಕಡೆ ಮಾಡಲು ಸಚಿವರು ತೀರ್ಮಾನ ಮಾಡಿದ್ದರು. ಹಾಸನದಲ್ಲಿ ಎಲ್ಲಾ ಸಂಘಟನೆಗಳು ಒಗ್ಗೂಡಿ ಈ ಸಮಾವೇಶ ಮಾಡುತ್ತಿದ್ದಾರೆ ಎಂದು ಹೇಳಿದರು.

ಸತೀಶ್‌ ಜಾರಕಿಹೊಳಿಯವರು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎನ್‌ ರಾಜಣ್ಣ , ಮುಖ್ಯಮಂತ್ರಿ ಸ್ಥಾನ ಖಾಲಿ ಇದ್ದರಷ್ಟೇ ಈ ಪ್ರಶ್ನೆ ಉದ್ಭವಿಸುವುದು, ರಾಜ್ಯದಲ್ಲಿ ಸಿಎಂ ಸ್ಥಾನವೇ ಖಾಲಿ ಇಲ್ಲವಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಎಚ್.ಕೆ. ಜವರೇಗೌಡ, ತಾರಾ ಚಂದನ್, ಬನವಾಸೆ ರಂಗಸ್ವಾಮಿ, ಮುನಿಸ್ವಾಮಿ, ಮುರುಳಿ, ಇತರರು ಉಪಸ್ಥಿತರಿದ್ದರು. *ಬಾಕ್ಸ್‌ನ್ಯೂಸ್‌: ಬೇರೆಯವರ ವಿರುದ್ಧ ತೊಡೆ ತಟ್ಟುವ ಉದ್ದೇಶವಿಲ್ಲ

ಪಶುಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್‌ ಮಾಧ್ಯಮದೊಂದಿಗೆ ಮಾತನಾಡುತ್ತಾ, ಮೈಸೂರಿನಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ನಾನು, ಮಹದೇವಪ್ಪ ಎಲ್ಲಾ ಸೇರಿ ಹಾಸನ, ಮಂಡ್ಯದಲ್ಲಿ ಮಾಡೋಣ ಎಂದು ಹೇಳಿದ್ದವು. ಹಾಸನದಲ್ಲಿ ಸಮಾವೇಶ ಮಾಡಿದರೆ ಇಲ್ಲೂ ಪಕ್ಷವು ಇನ್ನಷ್ಟು ಸಂಘಟನೆಯಾಗುತ್ತದೆ ಎನ್ನುವ ಉದ್ದೇಶದಲ್ಲಿ ಸಮಾವೇಶ ಮಾಡಲು ನಿರ್ಧರಿಸಿದೆವು. ಅದನ್ನು ಬಿಟ್ಟರೆ ಬೇರೆ ಉದ್ದೇಶಗಳೂ ಏನು ಇಲ್ಲ. ಬೇರೆಯವರ ವಿರುದ್ಧ ತೊಡೆ ತಟ್ಟಬೇಕು ಅಂತ ಏನು ಇಲ್ಲ ಎಂದು