ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಲೋಕಸಭೆಯಲ್ಲಿ 2025 ಮಾರ್ಚ್ 25ರಂದು ಮಂಡಿಸಿರುವ ಹೊಸ ಪಿಂಚಣಿ ಮತ್ತು ಹಳೆ ಪಿಂಚಣಿಯನ್ನು ಪರಿಷ್ಕರಿಸುವಂತೆವಂತೆ ಒತ್ತಾಯಿಸಿ ರಾಜ್ಯ ನಿವೃತ್ತ ನೌಕರರ ಸಂಘದಿಂದ ಅಪರ ಜಿಲ್ಲಾಧಿಕಾರಿಗಳಾದ ಸೋಮನಿಂಗ ಗೆಣ್ಣೂರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಲೋಕಸಭೆಯಲ್ಲಿ 2025 ಮಾರ್ಚ್ 25ರಂದು ಮಂಡಿಸಿರುವ ಹೊಸ ಪಿಂಚಣಿ ಮತ್ತು ಹಳೆ ಪಿಂಚಣಿಯನ್ನು ಪರಿಷ್ಕರಿಸುವಂತೆವಂತೆ ಒತ್ತಾಯಿಸಿ ರಾಜ್ಯ ನಿವೃತ್ತ ನೌಕರರ ಸಂಘದಿಂದ ಅಪರ ಜಿಲ್ಲಾಧಿಕಾರಿಗಳಾದ ಸೋಮನಿಂಗ ಗೆಣ್ಣೂರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ರಾಜ್ಯ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಪಿ.ಬಿರಾದಾರ ಮಾತನಾಡಿ, ಕೇಂದ್ರ ಸರ್ಕಾರದಿಂದ 2004ರಲ್ಲಿ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಯಿತು. ಅದೇ ರೀತಿ ದೇಶದ ಎಲ್ಲಾ ರಾಜ್ಯಗಳು ಕೇಂದ್ರ ಸರ್ಕಾರದ ಮಾದರಿಯಲ್ಲಿ ಹೊಸದಾಗಿ ಸರ್ಕಾರಿ ಸೇವೆಗೆ ನೇಮಕಗೊಳ್ಳುವ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಸರ್ಕಾರಿ ನೌಕರರು, ನಿವೃತ್ತಿ ಹೊಂದುವ ಸಂಧರ್ಭದಲ್ಲಿ ಬರಬೇಕಾದ ಆರ್ಥಿಕ ಸೌಲಭ್ಯಗಳಿಂದ ವಂಚಿತವಾಗಿರುವುದು ತಮಗೆಲ್ಲಾ ತಿಳಿದಿರುವ ವಿಚಾರ. ಹಲವಾರು ಸರ್ಕಾರಿ ನೌಕರರ ಒಕ್ಕೂಟಗಳು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂದು ಸಾಕಷ್ಟು ಹೋರಾಟಗಳನ್ನು ಮಾಡಿದರೂ ಸರ್ಕಾರ ಹಳ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ಸೇವೆಯಿಂದ ನೌಕರರು ನಿವೃತ್ತಿ ಹೊಂದಿದಾಗ ಅವರಿಗೆ ಹಳೆ ಪಿಂಚಣಿಯ ಆರ್ಥಿಕ ಸೌಲಭ್ಯಗಳು ದೊರೆಯುವುದಿಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ವೇತನವನ್ನು ಪರಿಷ್ಕರಿಸಲು ಈಗಾಗಲೇ 8ನೇ ವೇತನ ಆಯೋಗವನ್ನು ರಚನೆ ಮಾಡಿದೆ. ಸದರಿ ಆಯೋಗವು ಕಾರ್ಯೋನ್ಮುಖವಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ 2025 ಮಾರ್ಚ್ 25ರಂದು ಲೋಕಸಭೆಯಲ್ಲಿ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮ್ ಅವರು ಆರ್ಥಿಕ ಬಿಲ್‌ನ್ನು ಮಂಡಿಸುವಾಗ 2026 ಏಪ್ರಿಲ್ 1ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲು ಸಾಧ್ಯವಾಗುವುದಿಲ್ಲ ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತಿದೆ. ಇದರಿಂದ 2026 ಏಪ್ರಿಲ್ 1ರ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಮತ್ತು ಕುಟುಂಬ ಪಿಂಚಣಿದಾರರಿಗೆ ಆರ್ಥಿಕ ಸಂಕಷ್ಟಕ್ಕೊಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ರಾಜ್ಯಗಳ ಪಿಂಚಣಿದಾರರ ಒಕ್ಕೂಟವು 2025 ಮೇ 29ರಂದು ಬೆಂಗಳೂರು ನಗರದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಹೋರಾಟದ ಮೊದಲ ಹೆಜ್ಜೆಯಾಗಿ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಬೇಕೆಂದು ನಿರ್ಣಯ ತೆಗೆದುಕೊಳ್ಳಲಾಯಿತು ಎಂದರು.ಈ ವೇಳೆ ಎಸ್.ಎನ್.ಬಿರಾದಾರ, ಸಿಂದಗಿ ವಿಭಾಗಿಯ ಸಂಘಟನಾ ಕಾರ್ಯದರ್ಶಿಗಳು ಆರ್.ಜಿ.ಕಾಳಜಿ, ಬ.ಬಾಗೇವಾಡಿ ರಾಜ್ಯ ಪರಿಷತ ಕಾರ್ಯದರ್ಶಿ, ಎಸ್.ಎಸ್. ಪತಂಗಿ, ಕೊಲ್ಹಾರ ಕಾರ್ಯದರ್ಶಿ ರೇಣುಕಾ ಹುಣಸಿಗಿಡದ, ವಿಜಯಪುರ ಜಿಲ್ಲಾ ಕಾರ್ಯದರ್ಶಿಗಳು ಡಿ.ಡಿ.ಹಿರೇಕುರಬರ, ಜಿಲ್ಲಾ ಉಪಾದ್ಯಕ್ಷ ಬಿ.ಎ.ದಾವಡ, ಎಸ್.ಎ.ಚಳ್ಳಿಗೇರಿ, ಸಿ.ಕೆ.ಪಟ್ಟಣದ, ಎಂ.ಬಿ.ಕುಚನೂರ, ಎಸ್.ಎಸ್.ಕುಲಕರ್ಣಿ, ವಿಪಿ. ನಾಯಕ, ಸದಾಶಿವ ನಿಡೋಣಿ. ಎಸ್.ಎನ್.ನಿಂಬಾಳ, ಎಸ್.ಆರ್.ಮದಕರ, ಎಂ.ಟಿ.ಬಂಡಿವಡ್ಡರ ಮತ್ತಿತರರು ಉಪಸ್ಥಿತರಿದ್ದರು.