ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮೊಬೈಲ್ ಅಪ್ಲಿಕೇಷನ್ ಅಪ್ಡೇಟ್ ಆಗಿರುವುದರಿಂದ ಹಳೇ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಅನೇಕ ಗ್ರಾಹಕರಿಗೆ ಆ್ಯಪ್ ಬಳಕೆ ಮಾಡಲು ಸಾಧ್ಯವಾಗದೆ ಅನನುಕೂಲವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮೊಬೈಲ್ ಅಪ್ಲಿಕೇಷನ್ ಅಪ್ಡೇಟ್ ಆಗಿರುವುದರಿಂದ ಹಳೇ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಅನೇಕ ಗ್ರಾಹಕರಿಗೆ ಆ್ಯಪ್ ಬಳಕೆ ಮಾಡಲು ಸಾಧ್ಯವಾಗದೆ ಅನನುಕೂಲವಾಗುತ್ತಿದೆ.

ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಇತ್ತೀಚೆಗೆ ಆ್ಯಪ್ ಅಪ್ಡೇಟ್ ಮಾಡಿಕೊಳ್ಳಲು ಸಂದೇಶ ಬಂದಿದ್ದು, ಅದರಂತೆ ಅಪ್ಡೇಟ್ ಮಾಡಿಕೊಂಡಾಗ ಮೊಬೈಲ್‌ನ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ 9 (ಒಎಸ್‌9) ಮತ್ತು ಮೇಲ್ಪಟ್ಟದ್ದಕ್ಕೆ ಮಾತ್ರ ಆ್ಯಪ್ ಸಪೋರ್ಟ್ ಮಾಡುತ್ತದೆ ಎಂದು ತಿಳಿಸಲಾಗುತ್ತಿದೆ. ಇದರಿಂದ ಆ್ಯಂಡ್ರಾಯ್ಡ್ 8 ಮತ್ತು ಅದಕ್ಕಿಂತ ಕೆಳಗಿನ ವರ್ಷನ್ ಇರುವ ಮೊಬೈಲ್‌ಗಳಲ್ಲಿ ಆ್ಯಪ್‌ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಕವಿ ಬಿ.ಆರ್‌.ಲಕ್ಷ್ಮಣರಾವ್‌ ಸೇರಿದಂತೆ ಅನೇಕರು ದೂರಿದ್ದಾರೆ.