ಮುಂದಿನ ವರ್ಷ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಜನ್ಮಶತಾಬ್ಧಿ ಪ್ರಯುಕ್ತ ‘ಪಂಚವಾರ್ಷಿಕ ಯೋಜನೆ’ಯನ್ನು ಆಯೋಜಿಸಲಾಗುವುದು. ಈ ನಿಟ್ಟಿನಲ್ಲಿ ಉತ್ತರದ ಬದರಿಯಿಂದ ದಕ್ಷಿಣದ ಕನ್ಯಾಕುಮಾರಿವರೆಗೂ ಪೂಜ್ಯ ಗುರುಗಳು ಸ್ಥಾಪಿಸಿರುವ ವಿದ್ಯಾ ಪೀಠಗಳ, ಸೇವಾ ಪ್ರಕಲ್ಪಗಳ, ಮಠ ಮಂದಿರಗಳ, ಸಂಸ್ಕಾರ ಕೇಂದ್ರಗಳ ಪುನಶ್ಚೇತನ ಕಾರ್ಯಕ್ರಮಗಳನ್ನು ಆಯಾ ಪ್ರದೇಶದ ಸ್ಥಳೀಯ ಶಿಷ್ಯ ವೃಂದದ ಸಹಕಾರದೊಂದಿಗೆ ಯೋಜಿತ ಕಾರ್ಯಗಳನ್ನು ರೂಪಿಸಲಾಗುವುದು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳೂರು : ಮುಂದಿನ ವರ್ಷ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಜನ್ಮಶತಾಬ್ಧಿ ಪ್ರಯುಕ್ತ ‘ಪಂಚವಾರ್ಷಿಕ ಯೋಜನೆ’ಯನ್ನು ಆಯೋಜಿಸಲಾಗುವುದು. ಈ ನಿಟ್ಟಿನಲ್ಲಿ ಉತ್ತರದ ಬದರಿಯಿಂದ ದಕ್ಷಿಣದ ಕನ್ಯಾಕುಮಾರಿವರೆಗೂ ಪೂಜ್ಯ ಗುರುಗಳು ಸ್ಥಾಪಿಸಿರುವ ವಿದ್ಯಾ ಪೀಠಗಳ, ಸೇವಾ ಪ್ರಕಲ್ಪಗಳ, ಮಠ ಮಂದಿರಗಳ, ಸಂಸ್ಕಾರ ಕೇಂದ್ರಗಳ ಪುನಶ್ಚೇತನ ಕಾರ್ಯಕ್ರಮಗಳನ್ನು ಆಯಾ ಪ್ರದೇಶದ ಸ್ಥಳೀಯ ಶಿಷ್ಯ ವೃಂದದ ಸಹಕಾರದೊಂದಿಗೆ ಯೋಜಿತ ಕಾರ್ಯಗಳನ್ನು ರೂಪಿಸಲಾಗುವುದು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ದೆಹಲಿಯ ಇಂದ್ರಪ್ರಸ್ಥದಲ್ಲಿನ ವಸಂತ ಕುಂಜ್‌ನಲ್ಲಿ ಚಾತುರ್ಮಾಸ್ಯ ನಿರತರಾಗಿರುವ ಶ್ರೀಗಳನ್ನು ಭೇಟಿಯಾಗಿ ಫಲಪುಷ್ಪಗಳನ್ನು ಸಮರ್ಪಿಸಿ ಗುರುಗಳಿಂದ ಮಂತ್ರಾಕ್ಷತೆ ಸ್ವೀಕರಿಸಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಸಾಂಸ್ಕೃತಿಕ ಮುಂದಾಳು ಕದ್ರಿ ನವನೀತ ಶೆಟ್ಟಿ, ಜನಾರ್ದನ ಹಂದೆ ಅವರೊಂದಿಗೆ ಈ ವಿಷಯದ ಕುರಿತು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಮಾಲೋಚನೆ ನಡೆಸಿದರು.ಶ್ರಮ ಜೀವಿಗಳ ವಸತಿ ಪ್ರದೇಶಗಳಿಗೆ, ಸಂಸ್ಕಾರ ಕೇಂದ್ರಗಳಿಗೆ ಭೇಟಿಯಿತ್ತು ಸಮಾಜದಲ್ಲಿ ವ್ಯಸನ ಮುಕ್ತ ವಾತಾವರಣ ನಿರ್ಮಾಣ, ಧರ್ಮ ಜಾಗೃತಿ, ಸಂಸ್ಕೃತಿ, ಸಾಹಿತ್ಯ, ದಾಸ ಸಾಹಿತ್ಯಗಳ ಪ್ರಚಾರ ಹಾಗೂ ಪ್ರಕಟಣೆ ಹೀಗೆ ಅನೇಕಾನೇಕ ಸೇವಾ ಯೋಜನೆಗಳನ್ನು ಅಳವಡಿಸಿಕೊಂಡು ರೂಪಿಸಲಾಗುವ ಈ ಕಾರ್ಯಕ್ರಮದ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸುವರೆಂದು ಶ್ರೀವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸೇವಾಪ್ರಕಲ್ಪದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಶಿಷ್ಯಂದಿರೆಲ್ಲರೂ ಸಹಭಾಗಿತ್ವ ನೀಡುವಂತೆ ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ವಾಸುದೇವ ಭಟ್ ಪೆರಂಪಳ್ಳಿ, ಕೃಷ್ಣ ಆಚಾರ್ಯ, ವಿಷ್ಣು ಪಾಡಿಗಾರ್ ಸಹಿತ ಅನೇಕ ಶಿಷ್ಯಂದಿರು ಇದ್ದರು.