ರಾಗಾ ನಾಲಿಗೆ ಕತ್ತರಿಸಿದವರಿಗೆ ಬಹುಮಾನ; ಹೇಳಿಕೆಗೆ ಖಂಡನೆ

| Published : Sep 20 2024, 01:38 AM IST

ಸಾರಾಂಶ

ಶಿವಮೊಗ್ಗ ಜಿಲ್ಲಾಧಿಕಾರಿ ಎದುರು ಗುರುವಾರ ರಾಹುಲ್ ಗಾಂಧಿ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಅನಿಲ್ ಬೋಂಡೆ, ಸಂಜಯ್ ಗಾಯಕ್ವಾಡ್‌ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಅನಿಲ್ ಬೋಂಡೆ, ಮಹಾರಾಷ್ಟ್ರದ ಶಿವಸೇನೆ ಪಕ್ಷದ ಶಾಸಕ ಸಂಜಯ್ ಗಾಯಕ್ವಾಡ್‌ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಹುಲ್‌ ಗಾಂಧಿ ಅವರ ನಾಲಿಗೆ ಸೀಳಬೇಕು ಎಂದು ಅನಿಲ್ ಬೋಂಡೆ ಹೇಳಿದ್ದರೆ, ಸಂಜಯ್‌ ಗಾಯಕ್ವಾಡ್‌ ಅವರು ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರು. ಬಹುಮಾನ ನೀಡುವೆ ಎಂದಿದ್ದಾರೆ. ಈ ರೀತಿ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಅನಿಲ್ ಬೋಂಡೆ ಮತ್ತು ಸಂಜಯ್ ಗಾಯಕ್ವಾಡ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಉತ್ತರ ಬ್ಲಾಕ್ ಅಧ್ಯಕ್ಷ ಎಂ.ಎಸ್. ಶಿವಕುಮಾರ್, ಪ್ರಮುಖರಾದ ಎಚ್.ಸಿ. ಯೋಗೀಶ್, ಕಲಗೋಡು ರತ್ನಾಕರ್, ಚಂದ್ರಭೂಪಾಲ್, ರವಿಕುಮಾರ್, ಕಲೀಂ ಪಾಶ, ಎಸ್.ಟಿ. ಚಂದ್ರಶೇಖರ್, ಮಧುಸೂದನ್, ಚೇತನ್, ಯಮುನಾ ರಂಗೇಗೌಡ, ನಾಗರಾಜ್ ಕಂಕಾರಿ, ಶಿವಣ್ಣ, ಶಾಮೀರ್ ಖಾನ್ ಮತ್ತಿತರರು ಇದ್ದರು.