ಹೋರಾಟದಲ್ಲಿ ಭಾಗಿಯಾದರೆ ಪ್ರತಿಫಲ ಲಭ್ಯ

| Published : Mar 21 2025, 12:37 AM IST

ಸಾರಾಂಶ

ನೌಕರರಿಗೆ ಕಚೇರಿಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಆದರೆ ಒತ್ತಡಕ್ಕೆ ಸಿಲುಕಿ ವ್ಯಸನಗಳಿಗೆ ಒಳಗಾಗಬಾರದು, ಒತ್ತಡಕ್ಕೆ ಮಣಿದು ದುರಭ್ಯಾಸಗಳಿಗೆ ಒಳಗಾಗಬಾರದು. ತಾಲೂಕಿನಲ್ಲಿ ನೌಕರರಿಗೆ ವಸತಿ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಪಡೆಯಲು ಜಮೀನನ್ನು ಗುರುತಿಸಿ ಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಸರ್ಕಾರಿ ನೌಕರರು ನಿಷ್ಠೆಯಿಂದ ಸೇವೆ ಸಲ್ಲಿಸಬೇಕು. ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರು ಒಂದು ಕುಟುಂಬದ ಸದಸ್ಯರಿದ್ದಂತೆ. ನಿವೃತ್ತ ನೌಕರರು ಹಾಲಿ ನೌಕರರಿಗೆ ಸಲಹೆ ನೀಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿ. ನಾರಾಯಣಸ್ವಾಮಿ ಮನವಿ ಮಾಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಚಿಂತಾಮಣಿ ತಾಲೂಕು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿವೃತ್ತ ನೌಕರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬ ನೌಕರರು ಹಾಗೂ ಸದಸ್ಯರು ನಿಷ್ಠೆಯಿಂದ ಸಂಘಕ್ಕೆ ದುಡಿದಾಗ ಸಮಸ್ಯೆಗಳು ಬಗೆಹರಿಸಲು ಸಾಧ್ಯ ಎಂದರು.

ಜಮೀನು ಗುರ್ತಿಸುವ ಭರವಸೆ

ಸಂಘದ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಪ್ರತಿಫಲ ಲಭಿಸುತ್ತವೆ. ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ರೊಂದಿಗೆ ಸಂಘಟನೆಯ ಕುರಿತು ಚರ್ಚಿಸಿದ್ದು, ತಾಲೂಕಿನಲ್ಲಿ ನೌಕರರಿಗೆ ವಸತಿ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಪಡೆಯಲು ಜಮೀನನ್ನು ಗುರುತಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆಂದರು.

ತಹಸೀಲ್ದಾರ್ ಕೆ.ಆರ್. ಸುದರ್ಶನ್ ಯಾದವ್ ಮಾತನಾಡಿ, ನೌಕರರಿಗೆ ಕಚೇರಿಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಆದರೆ ಒತ್ತಡಕ್ಕೆ ಸಿಲುಕಿ ವ್ಯಸನಗಳಿಗೆ ಒಳಗಾಗಬಾರದು, ಒತ್ತಡಕ್ಕೆ ಮಣಿದು ದುರಭ್ಯಾಸಗಳಿಗೆ ಒಳಗಾಗಬಾರದು ಎಂದರು.

ನೌಕರರ ಸಂಘದ ಅಧ್ಯಕ್ಷ ಅಶೋಕ್‌ ಕುಮಾರ್, ಜಿಲ್ಲಾ ರಾಜ್ಯ ಪರಿಷತ್ ಸದಸ್ಯ ಅಮರ ನಾರಾಯಣಸ್ವಾಮಿ, ಖಜಾಂಚಿ ಅರುಣ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಬಾಲರಾಜ್, ಸುನೀಲ್, ತಾಲೂಕು ಸಂಘದ ಮಾಜಿ ಅಧ್ಯಕ್ಷ ಜನಾರ್ದನರೆಡ್ಡಿ, ನಿವೃತ್ತ ಮುಖ್ಯಶಿಕ್ಷಕ ಚೌಡಪ್ಪ, ಶಿಕ್ಷಕರಾದ ವಸಂತರೆಡ್ಡಿ, ಪ್ರಕಾಶ್‌ರೆಡ್ಡಿ ಮಾತನಾಡಿದರು.