ಸಾರಾಂಶ
ವಿದ್ಯಾರ್ಥಿಗಳ ಸಾಧನೆಯನ್ನು ಪ್ರೇರೇಪಿಸುವಲ್ಲಿ ಅಧ್ಯಾಪಕರು ಮತ್ತು ಪೋಷಕರ ಒಟ್ಟಾರೆ ಒಳಗೊಳ್ಳಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಕಾಲೇಜಿನ ಐಕ್ಯೂಎಸಿ ವಿಭಾಗ, ವಿದ್ಯಾರ್ಥಿ ಕಲ್ಯಾಣ ಸಮಿತಿ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಈ ವೇಳೆ ಎಂಎಂಕೆ ಮತ್ತು ಎಸ್ ಡಿಎಂ ಪಿಯು ಕಾಲೇಜಿನ ಪ್ರಾಂಶುಪಾಲೆ ನಯನಕುಮಾರಿ ಮಾತನಾಡಿ, ಎಲ್ಲಾ ಸಾಧಕರ ಶ್ರದ್ಧೆಯ ಸಾಧನೆಗಾಗಿ ಶ್ಲಾಘಿಸಿದರು ಮತ್ತು ಭವಿಷ್ಯದಲ್ಲಿಯೂ ಮುಂದುವರಿಯಲು ಮತ್ತು ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್. ಭಾರತಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯನ್ನು ಪ್ರೇರೇಪಿಸುವಲ್ಲಿ ಅಧ್ಯಾಪಕರು ಮತ್ತು ಪೋಷಕರ ಒಟ್ಟಾರೆ ಒಳಗೊಳ್ಳಬೇಕು ಎಂದು ಹೇಳಿದರು.ಕಾಲೇಜಿನ ವಿವಿಧ ಸಮಿತಿಗಳು ನಡೆಸಿದ ಸ್ಪರ್ಧೆಗಳಲ್ಲಿ ವಿಜೇತ ಯುಜಿ ಮತ್ತು ಪಿಜಿ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರಗಳು, ಪದಕಗಳು ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು. ಎಲ್ಲಾ ವಿಭಾಗಗಳ 400 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಕೆ.ಎಸ್. ಸುಕೃತಾ, ಜ್ಯೋತಿಲಕ್ಷ್ಮಿ ಕಾವಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕೆ.ಸಿ. ತಶ್ವಿ ಗಂಗಮ್ಮ, ಪದಾಧಿಕಾರಿಗಳಾದ ಎಂ. ಗಂಗಾಶ್ರೀ, ಐಶ್ವರ್ಯ ಎಸ್. ಪ್ರಸಾದ್, ನಾಗ ಅಶ್ವಿನಿ, ಜಿ. ಹರ್ಷಿತಾ, ಸಿಂಚನಾ ಮುತ್ತಮ್ಮ, ಎನ್. ರಾಧಿಕಾ, ನಿಸರ್ಗಾ ಮಹೇಶ್ ಮೊದಲಾದವರು ಇದ್ದರು.